
ಸಕಲೇಶಪುರ : ರಾಮಮಂದಿರ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮ ಸಮೀಪಿಸುತ್ತಿರುವ ಬೆನ್ನಲ್ಲೆ ರಾಮನ ಭಾವಚಿತ್ರ ಫ್ಲೆಕ್ಸ್ ಹರಿದ ಕಿಡಿಗೇಡಿಗಳು.
ಸಕಲೇಶಪುರದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜನವರಿ 22. ರಂದು ಅಯೋಧ್ಯೆಯಲ್ಲಿ ನಡಿಯುವ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅದ್ದೂರಿ ತಯಾರಿಗಾಗಿ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದ ಅಲಂಕಾರ ಮಾಡಲು ಕಾರ್ಯಕರ್ತರು ಹಗಲಿರುಳು ಎನ್ನದೆ ಕೆಲಸದಲ್ಲಿ ತೊಡಗಿರುವಾಗ ದಿನಾಂಕ 19.01.24 ರಂದು ತಡರಾತ್ರಿ 11.45 ವರೆಗೆ ಕಾರ್ಯಕ್ರಮದ ಆವರಣವಾದ ಗುರುವೇಗೌಡ ಕಲ್ಯಾಣಮಂಟಪದ ಆವರಣದಲ್ಲಿ ರಾಮ, ಹನುಮ,ಮೋದಿ,ಯೋಗಿ,ವಾಜಪೇಯಿ,ಕಲ್ಯಾಣಸಿಂಗ್,ಅಡ್ವಾಣಿ ಭಾವಚಿತ್ರ ಇರುವ ಕಟೌಟ್ ಹಾಕಿದ್ದನ್ನ ಸಹಿಸದ ಕಿಡಿಗೇಡಿಗಳು
ಕಾರ್ಯಕರ್ತರು ಕಟೌಟ್ ಹಾಕಿ ತೆರಳಿದ ನಂತರ 3 ಬ್ಯಾನರ್ ಹರಿದಿರುವುದು ಬಜರಂಗದಳ ಕಾರ್ಯಕರ್ತರಲ್ಲಿ ಆಕ್ರೊಶಕ್ಕೆ ಕಾರಣವಾಗಿದ್ದು ರಾಮನ ಕಾರ್ಯಕ್ರಮ ದೇಶದಾದ್ಯಂತ ಅದ್ದೂರಿಯಿಂದ ನಡಿಯುತ್ತಿರುವಾಗ ಸಕಲೇಶಪುರದಲ್ಲಿ ಇರುವ ಕಿಡಿಗೇಡಿಗಳ ವಿಕೃತ ಮನಸ್ಸಿನಿಂದ ಸಮಾಜದಲ್ಲಿ ಸ್ವಾಸ್ಥ್ಯ ಹದೆಗೆಡಿಸಲು ಷಡ್ಯಂತ್ರ ಮಾಡುತ್ತಿರುವರನ್ನ ತಕ್ಷಣ ಬಂಧಿಸುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳ ಮಝರ್ ಮಾಡಿದ ನಗರ ಠಾಣೆ ವೃತ್ತನಿರೀಕ್ಷಕರು ಬಂದೋಬಸ್ತ್ ಜೊತೆಗೆ ಕಿಡಿಗೇಡಿಗಳನ್ನ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಆರಕ್ಷಕ ಉಪಾಧೀಕ್ಷರಾದ ಪ್ರಮೋದ್ ಜೈನ್ ಸ್ಥಳಕ್ಕೆ ಭೇಟಿ ನೀಡಿ ವರದಿ ಪಡೆದಿದ್ದಾರೆ.



