ವಿಶ್ವದ ಎದುರು ಬಾಲರಾಮನ ಮೂರ್ತಿಯ ಅನಾವರಣ ಮಾಡಲಾಗಿದೆ. ಈಗಾಗಲೇ ಪುರಪ್ರವೇಶವಾಗಿದ್ದು, ಮೊನ್ನೆ ಗರ್ಭಗುಡಿಗೆ ವಿಗ್ರಹ ಪವೇಶ ಮಾಡಿದೆ. ನಿನ್ನೆ ರಾಮಲಲ್ಲಾ ಬಾಲರಾಮ ಫೋಟೋ ಬಿಡುಗಡೆ ಮಾಡಲಾಗಿದೆ.

ಅಯೋಧ್ಯೆ(Ayodhya) ಬಾಲರಾಮನ ವಿಗ್ರಹ ಮಂದಸ್ಮಿತನಾಗಿದ್ದು, ಬಾಲರಾಮನ ಕೊರಳಲ್ಲಿ ಆಭರಣ,ಕೈಯಲ್ಲಿ ಬಿಲ್ಲು-ಬಾಣ ಇದೆ. ಶಿಲ್ಪಿ ಅರುಣ್ ಯೋಗಿರಾಜ್ ಕೈಯಲ್ಲಿ ಬಾಲರಾಮನ ಮೂರ್ತಿ ಅರಳಿದೆ. ದಶಾವತಾರಗಳು, ನವಗ್ರಹ, ಹೊಯ್ಸಳ ಶೈಲಿಯ ಕೆತ್ತನೆ ಇಲ್ಲಿದೆ. 300 ಕೋಟಿ ವರ್ಷದ ಕಲ್ಲಿನಲ್ಲಿ ಬಾಲರಾಮ ಮೂಡಿದ್ದಾನೆ. ಸದ್ಯ ಜ.22ರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *