ಸಕಲೇಶಪುರ : ವೈದ್ಯರ ನಿರ್ಲಕ್ಷದಿಂದ ಸಂತಾನ ಹರಣ ಚಿಕಿತ್ಸೆಗೆ ದಾಖಲಾಗಿದ್ದ ಬಾಣಂತಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ನಡೆದಿದೆ.

ಘಟನೆಯ ವಿವರ:-ಜನವರಿ 20 ರ ಶನಿವಾರದಂದು ಕ್ರಾಫರ್ಡ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಉದರ ದರ್ಶಕ ಶಸ್ತ್ರ ಚಿಕಿತ್ಸೆ ಸಲುವಾಗಿ (ಲ್ಯಾಪ್ರೋಸ್ಕೋಪಿಕ್) ಶಿಬಿರಕ್ಕೆ ದಾಖಲಾಗಿದ್ದ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಪಿ ನಗರದ ನಿವಾಸಿ ನೇತ್ರಾವತಿ ಹರೀಶ್ ಎಂಬುವವರನ್ನು ಬೆಳಗ್ಗೆ 7-30 ರ ಸಮಯಕ್ಕೆ ಅವರ ಪತಿ ಹರೀಶ್ ಅವರು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ದಾಖಲು ಮಾಡಿ ಸುಮಾರು 12-15 ರ ಸಮಯಕ್ಕೆ ಶಸ್ತ್ರ ಚಿಕಿತ್ಸೆ ಕೊಠಡಿಗೆ ಕರೆದೊಯ್ದಿದ್ದಾರೆ.

ನಂತರ ನೇತ್ರಾವತಿ ಅವರಿಗೆ ಲೋ ಬಿ.ಪಿ.ಆಗಿದೆ ಎಂದು ವೈದ್ಯರು ಕೂಡಲೇ ತುರ್ತು ಆ್ಯಂಬುಲೆನ್ಸ್ ಮೂಲಕ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲು ಮಾಡುವ ವೇಳೆ ನೇತ್ರಾವತಿ ಎಂಬ ಮಹಿಳೆ ಮೃತಪಟ್ಟಿದ್ದು ಇವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಹಾಸನ ಜಿಲ್ಲಾ ಮುಗೇರ ಸಂಘದ ಕಾರ್ಯದ ಕಿರಣ್ ಉಪಾದ್ಯಕ್ಷರಾದ ಅಣ್ಣು ಮೇಸ್ತ್ರಿ ಆರೋಪಿಸಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *