
ಹಾಸನ: ನಗರದ ಖಾಸಗೀ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೊಂಡು ಕೆಲ ಸಮಯ ಆತಂಕದ ವಾತವರಣ ನಿರ್ಮಾಣವಾಗಿ ರೋಗಿಗಳು ಗಾಬರಿಯಿಂದ ಹೊರ ಬಂದ ಘಟನೆ ಭಾನುವಾರ ನಡೆದಿದೆ.
ನಗರದ ಶಂಕರಮಠ ರಸ್ತೆಯಲ್ಲಿರುವ ಬಳಿ ಇರುವ ಮಂಜುನಾಥ ಆಸ್ಪತ್ರೆಯಲ್ಲಿ ಎಕ್ಸ್‌ರೇ ರೂಂನಲ್ಲಿ ಕಾಣಿಸಿಕೊಂಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೊಂಡು, ಬೆಂಕಿ ಇಡೀ ಆಸ್ಪತ್ರೆಗೆ ಅದರ ಹೊಗೆ ವ್ಯಾಪಿಸಿಕೊಂಡಿದೆ. ಸ್ಥಳದಲ್ಲೆ ಇದ್ದ ಕುಟುಂಬಸ್ಥರು ಕೆಲ ರೋಗಿಗಳನ್ನು ಹೊರಗಡೆ ಕರೆ ತರಲಾಯಿತು.ಇಡೀ ಆಸ್ಪತ್ರೆಗೆ ವ್ಯಾಪಿಸಿದ ಹೊಗೆಯಿಂದ ರೋಗಿಗಳು ಗಾಬರಿಗೊಂಡರು. ಉಳಿದವರು ಆಸ್ಪತ್ರೆಯಿಂದ ಹೊರಗೆ ಓಡ ಬರಬೇಕಾಯಿತು.
ಕಿಟಕಿ ಗ್ಲಾಸ್‌ಗಳನ್ನು ಹೊಡೆದ ಆಸ್ಪತ್ರೆಯ ಸಿಬ್ಬಂದಿಗಳು. ನಂತರ ಅಗ್ನಿ ಶಾಮಕ ದಳದ ಉಚಿತ ಸಂಖ್ಯೆಗೆ ಕರೆ ಮಾಡಿದ ಕೆಲ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿ ಆಗುತ್ತಿದ್ದ ಭಾರಿ ಅನಾಹುತವನ್ನು ತಪ್ಪಿಸಿದಂತಾಗಿದೆ.
ಬೆಂಕಿ ಉರಿಯಲು ಆರಂಭಿಸಿ ಹೊಗೆ ವ್ಯಾಪಿಸಿದ್ದರಿಂದ ಆಸ್ಪತ್ರೆಯ ಕೆಲ ಭಾಗಗಳು ಹೊಗೆ ಕಟ್ಟಿಕೊಂಡು ಕಪ್ಪಾಗಿದ್ದವು.
ಜೀವ ಉಳಿಸಿಕೊಳ್ಳಲು ಹೊರ ಬಂದ ರೋಗಿಗಳೂ ಆಸ್ಪತ್ರೆ ಮುಂಬಾಗ ಕಟ್ಟೆಯ ಮೇಲೆ ಆಶ್ರಯ ಪಡೆದರು.





