ಬೇಲೂರು : ನಗರದ ಎಸ್.ಸುರಪುರ ( ಹನುಮಂತನಗರ) ಬಡಾವಣೆಯಲ್ಲಿ ವಾಸವಿರುವ ಶಿವಾಜಿ ರಾವ್ ಮತ್ತು ಜಯಮ್ಮ ದಂಪತಿಗಳ ಪುತ್ರಿ ತನುಶ್ರೀ 18 ಎಂಬ ಯುವತಿ ಹಲವು ತಿಂಗಳಿಂದ ಮಾರಕ ರೋಗಕ್ಕೆ ತುತ್ತಾಗಿದ್ದು ಆಟ ಪಾಠ ಶಾಲೆ ಎಂದು ಎಲ್ಲರಂತೆ ಬದುಕಬೇಕಿದ್ದ ತನುಶ್ರೀ ಹಾಸಿಗೆ ಹಿಡಿದಿದ್ದು ಭೀಕರ ಕಾಯಿಲೆಗೆ ತುತ್ತಾಗಿ ತೀವ್ರ ಅಸ್ತವ್ಯಸ್ತಗೊಂಡಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ

ಕಳೆದ ಎರಡು ವರ್ಷದಿಂದ ಮಾರಕ ರೋಗಕ್ಕೆ ತುತ್ತಾಗಿ ಬೆಂಗಳೂರು ಮಂಗಳೂರು ಹಾಸನ ಶಿವಮೊಗ್ಗ ಸೇರಿದಂತೆ ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರು ಯಾವುದೇ ಪ್ರಯೋಜನಗೊಂಡಿಲ್ಲ ಮಗಳ ಚಿಕಿತ್ಸೆಗೆ ಹೊಲಗದ್ದೆ ಮನೆ ದನ ಜಾನುವಾರುಗಳನ್ನು ಮಾರಾಟ ಮಾಡಿ ಸಂಪೂರ್ಣ ಹತಾಶರಾಗಿದ ಕುಟುಂಬಕ್ಕೆ ಬೇಲೂರು ಲಯನ್ಸ್ ಕ್ಲಬ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಂಡದವರಾದ ಡಾಕ್ಟರ್ ಚಂದ್ರಮೋಳಿ ಮುಕ್ತಿಯರ್ ಪ್ರಶಾಂತ್ ಸುರೇಶ್ ರವರು ₹ 10,000 ಚೆಕ್ ನೀಡಿ ಸಹಾಯ ಹಸ್ತ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಾಕ್ಟರ್ ಚಂದ್ರುಮೋಳಿ ಮಾರಕ ಖಾಯಿಲೆಗೆ ತುತ್ತಾಗಿರುವ ಯುವತಿಗೆ ಮೂರು ತಿಂಗಳ ಅವಧಿಯ ಔಷಧಿ ಉಪಚಾರಗಳನ್ನು ಲಯನ್ಸ್ ಕ್ಲಬ್ ವತಿಯಿಂದ ನೀಡುವುದಾಗಿ ಹೇಳಿದರು ಮತ್ತು ತನುಶ್ರೀ ಚಿಕಿತ್ಸೆಗೆ ಸಹೃದಯಿ ದಾನಿಗಳು ಮುಂದಾಗಬೇಕೆಂದು ಬೇಲೂರು ಲಯನ್ಸ್ ಕ್ಲಬ್ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ದಾನಿಗಳಲ್ಲಿ ಮನವಿ ಮಾಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *