
ಸಕಲೇಶಪುರ : ಪಟ್ಟಣದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದು ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುವುದು ಹಾಗೂ ಶಾಲಾ ಮಕ್ಕಳು ಶಾಲೆಗೆ ಹೋಗಲು ತುಂಬಾ ಕಷ್ಟವಾಗಿದೆ.
ಪೋಷಕರು ಮಕ್ಕಳನ್ನು ಶಾಲೆಗೆ ಹೋಗಿ ಬರುವವರಗೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಯುತ್ತಾರೆ.ಇದಲ್ಲದೇ ಇಂದು ಬೀದಿ ನಾಯಿಯ ಜೊತೆಗೆ ಹುಚ್ಚು ನಾಯಿ ಅವಳಿ ಹೆಚ್ಚಾಗಿದ್ದು ಸುಮಾರು ಹತ್ತು ಹದಿನೈದಕ್ಕೂ ಹೆಚ್ಚು ಜನರಿಗೆ ಹಳೆ ಸಂತವೇರಿ ಹಾಗೂ ಹಳೆ ಬಸ್ ನಿಲ್ದಾಣದಲ್ಲಿ ಸಂಜೆ ಸುಮಾರು 6ರಿಂದ7.30 ಸಮಯಕ್ಕೆ ಕಡಿದಿದೆ ನನ್ನ ಕಣ್ಣೆದುರೇ ಮೂರು ಜನರಿಗೆ ಕಡಿದಿದೆ ತಕ್ಷಣವೇ ಸಾರ್ವಜನಿಕರಿಗೆ ಮಾಹಿತಿ ನೀಡಿ ಅನಾಹುತ ತಡೆಯಲು ಅರ ಸಾಹಸ ಪಡಬೇಕಾಯಿತು.
(ಅದು ಬಿಳಿ ಹಾಗೂ ಬೂದು ಬಣ್ಣದ ಹುಚ್ಚು ನಾಯಿಯಾಗಿದ್ದು).ಆದ್ದರಿಂದ ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಇಲಾಖೆಯವರು ಹಾಗೂ ಪುರಸಭೆಯ ಆಡಳಿತಾಧಿಕಾರಿಗಳು ಗಮನ ಹರಿಸಿ ಇದಕ್ಕೆ ಸೂಕ್ತ ಪರಿಹಾರ ನೀಡಲು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ..
ಮಧುವರನ್. ಎಸ್.ಎಮ್, ಸಂಯೋಜಕ ಸಕಲೇಶಪುರ ತಾಲ್ಲೂಕು, ಶೌರ್ಯ ವಿಪತ್ತು ನಿರ್ವಹಣಾ ಘಟಕ, ಸಕಲೇಶಪುರ ಘಟಕ ಹಾಗೂ ಅಧ್ಯಕ್ಷರು ಜೈಭೀಮ್ ಯುವಕ ಸಂಘದ ಕುಶಾಲನಗರ ಬಡಾವಣೆ.ಸಕಲೇಶಪುರ
