ಹಾಸನ : ತ್ರಿಮೂರ್ತಿ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಶಿವನನ್ನು ಕಾಣಬೇಕೆಂದು ಕೈಲಾಸಕ್ಕೆ ಹೋಗಬೇಕಾಗಿಲ್ಲ. ಎಲ್ಲೋ ಹುಡುಕಿಕೊಂಡು ಕಾಶಿಗೆ ಹೋಗಬೇಕಾಗಿಲ್ಲ. ತಂದೆ ತಾಯಿ ಪಾರ್ವತಿಯ ಮೂರು ಪ್ರದಕ್ಷಿಣೆ ಹಾಕಿ ಮಹಾಗಣಪತಿಯನ್ನು ಇಂದಿಗೂ ಕೂಡ ಅಗ್ರಸ್ಥಾನದಲ್ಲಿಟ್ಟು ಪೂಜೆ ಮಾಡುತ್ತೇವೆ.

ಗುರುವೇ ಬ್ರಹ್ಮ, ಗುರವೇ ವಿಷ್ಣು, ಗುರುಸಾಕ್ಷತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ. ತ್ರಿಮೂರ್ತಿಗೆ ಸಮಾನವಾಗಿರುವ ಗುರುಗಳ ಮುಟ್ಟಿದರೇ ಸಾಕು, ನಮ್ಮ ಜೀವನ ಸಾರ್ಥಕವಾಗುತ್ತದೆ, ಇಂದಿನ ಕಾಲದಲ್ಲಿ ಅನೇಕ ಯುವಕರು ದಾರಿ ತಪ್ಪಿ ದಿಕ್ಕು ತಪ್ಪುವಂತಹ ವ್ಯವಸ್ಥೆ ಇದೆ. ಆದರೆ ಇಂದು ಈ ಯುವಕರ ತಂಡ ಇಂತಹ ಪುಣ್ಯ ಕಾರ್ಯಗಳನ್ನು ಮಾಡುವ ಮೂಲಕ ಮುನುಷ್ಯನಲ್ಲಿ ಶ್ರದ್ಧೆ, ಭಕ್ತಿ, ಹಾಗೂ ಜೀವನದ ನಡೆ ಕಲಿಯಲು ಸಹಕಾರಿ ಎಂದರು.

ಇಂತಹ ಕಾರ್ಯಕ್ರಮದ ಮೂಲಕ 50 ಜನರು ರಕ್ತದಾನ ಮಾಡಿದ್ದಾರೆ. ಅನ್ನದಾನದಂತಹ ಒಳ್ಳೆ ಕಾರ್ಯ ಮಾಡುತ್ತಿರುವುದು ನಮಗೆ ಸಂತೋಷವಾಗಿದೆ. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ನಾಥ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ ಅವರ ಸ್ಮರಣೆ ಕಾರ್ಯಕ್ರಮ ಉತ್ತಮವಾಗಿದ್ದು, ಇಂತಹ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿರುವುದು ನನ್ನ ಪುಣ್ಯ ಎಂದು ಹೇಳಿದರು.

ಸಂಸದರಾದ ಪ್ರಜ್ವಲ್ ರೇವಣ್ಣ ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಸಿದ್ದಗಂಗಾ ಸ್ವಾಮೀಜಿ ಹಿಂದಿನ ಕಾಲದಲ್ಲಿ ಗ್ರಾಮಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರ ಜೊತೆ ಬೆರೆತು ಅವರು ಕೊಡುವ ದಾಸೋಹ ಸ್ವೀಕರಿಸುತ್ತಿದ್ದರು. ಇಡೀ ಗ್ರಾಮಗಳಿಗೆ ಭೇಟಿ ಮಾಡಿ ಯುವಕರನ್ನು ಧಾರ್ಮಿಕತೆಗೆ ಎಳೆಯುವ ಕೆಲಸ ಮಾಡಿದರು.

ಕಳೆದ ಎರಡು ದಿನಗಳ ಹಿಂದೆ ರಾಮಮಂದಿರ ಉದ್ಘಾಟನೆಯಾಗಿದ್ದು, ಇಡೀ ಗಲ್ಲುಗಲ್ಲಿಯಲ್ಲಿ ಶ್ರೀರಾಮನ ನೆನೆದು ಆಚರಣೆ ಮಾಡಿದ್ದಾರೆ ಎಂದರೇ ಇನ್ನೂ ಕೂಡ ಧಾರ್ಮಿಕತೆ ಆಚರಣೆ ಉಳಿದಿದೆ ಎಂದರ್ಥ. ನಡೆದಾಡುವ ದೇವರು ಎಂದರೇ ದೇವರ ರೂಪದಲ್ಲಿ ಬಂದು ಸಮಾಜ ಸೇವೆಯಂತಹ ಕೆಲಸ ಮಾಡುತ್ತಾರೆ ಎಂದರು.

ಸ್ವಾಮೀಜಿಯವರು ವಿದ್ಯಾಧಾನ ಮಾಡಿದ್ದಾರೆ. ಇಂತಹ ಗುರುಗಳು ಮತ್ತೆ ಹುಟ್ಟಿ ಬಂದು ಸೇವೆ ಕೊಡುವ ಕೆಲಸ ಮತ್ತೊಮ್ಮೆ ಆಗಬೇಕೆಂದು ಪ್ರಾರ್ಥಿಸಿದರು.

ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ ನಡೆದಾಡುವ ದೇವರು ಎಂದು ಭಾವಿಸಿರುವ ಶ್ರೀ ಶಿವಕುಮಾರ ಸ್ವಾಮೀಜಿ ಲಕ್ಷಾಂತರ ಭಕ್ತರಿಗೆ ಅನ್ನದಾಸೋಹ ಮಾಡಿದರೆ ಶ್ರೀ ಬಾಲಗಂಗಾದರನಾಥ ಸ್ವಾಮೀಜಿ ಅವರು ನೊಂದವರಿಗೆ ಹಸಿದರಿಗೆ ವಿದ್ಯಾದಾನ ಮಾಡಿದರು, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಸರಳತೆಯಿಂದ ಹಾಗೂ ಪ್ರಾಮಾಣಿಕತೆಯಿಂದ ನುಡಿದಂತೆ ನಡೆಯುವ ಮೂಲಕ ಲಕ್ಷಾಂತರ ಭಕ್ತರಿಗೆ ದಾರಿ ದೀಪವಾಗಿದ್ದಾರೆ ಈ ತ್ರಿಮೂರ್ತಿಗಳ ಆದರ್ಶಗಳನ್ನು ಇಂದಿನ ಯುವಕರು ಅನುಕರಣೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾದ ಹಿಂದೂ ಮುಖಂಡರಾದ ರಘು ಸಕಲೇಶಪುರ ಅವರು ಮಾತನಾಡಿದರು.

ಇದೆ ವೇಳೆ ನೂರಾರು ಜನರಿಗೆ ಅನ್ನ ದಾಸೋಹ ನೆರವೇರಿಸಿದರು.

ಸ್ವಯಂ ಪ್ರೇರಿತವಾಗಿ 50 ಕ್ಕೂ ಹೆಚ್ಚು ಜನ ಸ್ವಾಮೀಜಿಗಳ ಹೆಸರಿನಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಶ್ರೀ ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಶ್ರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಸಂಸದರಾದ ಪ್ರಜ್ವಲ್ ರೇವಣ್ಣ, ಹಾಸನ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಬೇಲೂರು ಕ್ಷೇತ್ರದ ಶಾಸಕ ಹೆಚ್.ಕೆ. ಸುರೇಶ್, ವಿಶ್ವಹಿಂದೂ ಪರಿಷತ್ತು ಮುಖಂಡ ಸಕಲೇಶಪುರದ ರಘು, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಮಲ್ಲಿಕಾರ್ಜುನ್, ಸಮಾಜದ ಮುಖಂಡ ಈಶ್ವರಪ್ಪ, ವೀರಶೈವ ಲಿಂಗಾಯಿತ ಯುವಸೇನೆ ಜಿಲ್ಲಾದ್ಯಕ್ಷ ಲೋಕೇಶ್ ಕಾರ್ಯದರ್ಶಿ ಅವಿನಾಶ್, ಮಾವನೂರು ಮೋಹನ್ ಮನೋಜ್, ರಾಜು ದರ್ಶನ್, ರಾಕೇಶ್, ಪ್ರದೀಪ್, ಜಗದೀಶ್, ಹಾಗೂ ಕೆಂಪೇಗೌಡ ಯುವಸೇನೆ ಜಿಲ್ಲಾದ್ಯಕ್ಷ ಎಂ.ಬಿ. ಉಮೇಶ್, ಉಪಾದ್ಯಕ್ಷ ಶ್ಯಾಮ್ ಗೌಡ, ಕಾರ್ಯದರ್ಶಿ ಕಾರ್ಥಿಕ್, ಸುದೀ ಗೌಡ, ಶಶಿ, ಎಲ್.ಸಿ.ಸಿ ಚಂದ್ರಶೇಖರ್, ಕಾಂತರಾಜು, ಹೆಗ್ಗೋವೆ ಕಾಂತರಾಜು ಹಾಗೂ ಸಹ್ಯಾದ್ರಿ ಕೇಸರಿ ಪಡೆಯ ಪದಾಧಿಕಾರಿಗಳು ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *