
ಬೇಲೂರು : ಕುಡಿದ ಮತ್ತಿನಲ್ಲಿ ಮಾವನನ್ನು ಕೊಂದ ಅಳಿಯ
ತಮ್ಮಯ್ಯ (58) ಕೊಲೆಯಾದ ವ್ಯಕ್ತಿ
ಬಲ್ಲೇನಹಳ್ಳಿ ಗ್ರಾಮದ ಜಗದೀಶ್ (40) ಕೊಲೆ ಮಾಡಿದ ಆರೋಪಿ,
ಬೇಲೂರು ತಾಲ್ಲೂಕಿನ, ಇಬ್ಬಿಡು ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದಲ್ಲಿ ಘಟನೆ
ಕುರಿ, ದನಕರುಗಳನ್ನು ಮೇಯಲು ಬಿಟ್ಟು ಕಟ್ಟೆ ಮೇಲೆ ಮಲಗಿದ್ದ ತಮ್ಮಯ್ಯ
ಈ ವೇಳೆ ಕಂಠಪೂರ್ತಿ ಕುಡಿದು ಬಂದು ಸ್ಕ್ರೂ ಡ್ರೈವರ್‌ನಿಂದ ಚುಚ್ಚಿ ಕೊಂದಿರುವ ಜಗದೀಶ್
ತಮ್ಮಯ್ಯ ಮೃತಪಟ್ಟ ನಂತರ ಬೇಲೂರು ಆಸ್ಪತ್ರೆಗೆ ಆಸ್ಪತ್ರೆಗೆ ಕರೆ ತಂದು ನಾಟಕವಾಡಿದ್ದ ಪಾಪಿ ಅಳಿಯ
ಎದೆನೋವು ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಬಳಿ ಹೇಳಿದ್ದ ಜಗದೀಶ್
ತಮ್ಮಯ್ಯ ಅವರನ್ನು ತಪಾಸಣೆ ಮಾಡಿದಾಗ ಆಯುಧದಿಂದ ಚುಚ್ಚಿ ಕೊಲೆ ಮಾಡಿರುವುದು ಬೆಳಕಿಗೆ
ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಜಗದೀಶ್
ಜಗದೀಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
ಕುಡಿತದ ದಾಸನಾಗಿದ್ದ ಆರೋಪಿ ಜಗದೀಶ್
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
