ಹಾಸನ: ಆದರ್ಶ ಬದುಕಿನಲ್ಲಿ ಬಾಳುವುದರ ಜೊತೆಗೆ ಒಂದು ದೇಶ ಅಭಿವೃದ್ಧಿ ಹಾಗೂ ಬದಲಾವಣೆ ಆಗಬೇಕಾದರೇ ಉತ್ತಮ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ ಎಂದು ಸಿದ್ಧಗಂಗಾ ಮಠದ ಮಠಾಧೀಶರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ನುಡಿದರು.

ನಗರದ ನಗರದ ಸ್ಲೇಟರ‍್ಸ್ ಹಾಲ್ ವೃತ್ತದ ಬಳಿ ಶಿವಕುಮಾರ ಸ್ವಾಮೀಜಿ ಸ್ಮರಣೆಯ ಹಿನ್ನಲೆಯಲ್ಲಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ತಮ್ಮ ಆಶೀರ್ವಚನದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಅವರ ಬದುಕೆ ಒಂದು ತ್ಯಾಗ ಮತ್ತು ಸೇವೆಯ ಸಂಗಮ ಆಗಿತ್ತು. ವಯಕ್ತಿವಾಗಿ ಬದುಕಿದವರು, ಕೌಟಂಬಿಕವಾಗಿ ಬದುಕಿದವರನ್ನ ಜನರು ನೆನಪಿಸಿಕೊಳ್ಳುವುದಿಲ್ಲ. ಯಾರ ಬದುಕು ತ್ಯಾಗಮಯ ಹಾಗೂ ಸೇವೆಗೆ ಮೀಸಲಾಗಿರುತ್ತದೆ ಅಂತವರನ್ನು ಜಗತ್ತು ಯಾವತ್ತು ಕೂಡ ಸ್ಮರಣೆ ಮಾಡಿಕೊಳ್ಳುವ ಕೆಲಸ ಮಾಡುತ್ತದೆ ಜೊತೆಗೆ ಅವರು ಯಾವಾಗಲು ಶಾಶ್ವತವಾಗಿ ಉಳಿಯುತ್ತಾರೆ ಎಂದರು.

ಇನ್ನೊಬ್ಬರಿಗಾಗಿ ಯಾರು ಬದುಕುತ್ತಾರೆ ಅವರ ಬದುಕು ಶಾಶ್ವತವಾಗಿರುತ್ತದೆ. ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರು ಅನೇಕ ಆದರ್ಶಗಳ ಬದುಕಿನಲ್ಲಿ ಬಾಳಿ, ನಮಗೆ ಆದರ್ಶವನ್ನು ನೀಡಿ ಅವರು ನಮ್ಮ ಮುಂದೆ ಇಲ್ಲವಾದರೂ ಕೂಡ ಅವರ ಆದರ್ಶವನ್ನು ಬೆಳೆಕಾಗಿ, ಮಾರ್ಗದರ್ಶಕವಾಗಿ ತತ್ವವನ್ನು ನೀಡಿದ್ದಾರೆ ಎಂದು ಕಿವಿಮಾತು ಹೇಳಿದರು.

ಅವರು ದೊಡ್ಡ ಕ್ರಾಂತಿಯನ್ನೆ ಮಾಡಿದ್ದು, ಇಡೀ ದೇಶಕ್ಕೆ ಬದಲಾವಣೆ ಆಗಬೇಕು. ಜನರಲ್ಲಿ ಉತ್ತಮ ಜೀವನ ನಡೆಯಬೇಕು ಎಂದು ಒಳ್ಳೆಯ ಶಿಕ್ಷಣ ಬೇಕು ಎನ್ನುವ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದರು. ಒಂದು ದೇಶ ಎತ್ತರಕ್ಕೆ ಬೆಳೆಯಬೇಕಾದರೇ ಜೊತೆಗೆ ಒಂದು ಬದಲಾವಣೆ ಆಗಬೇಕಾದರೇ ಶಿಕ್ಷಣ ಒಂದರಿಂದಲೇ ಸಾಧ್ಯ ಎಂದು ಸ್ವಾಮಿ ವಿವೇಕಾನಂದರೂ ಕೂಡ ಇದೆ ಮಾತನ್ನು ಹೇಳಿರುವುದಾಗಿ ಸಲಹೆ ನೀಡಿದರು.

ಇದೆ ವೇಳೆ ಶ್ರೀರಾಮಚಂದ್ರನ ಅಯೋಧ್ಯೆ ನಿರ್ಮಾಣವಾದ ಹಿನ್ನಲೆಯಲ್ಲಿ ಪಕ್ಕದಲ್ಲೆ ಇಡಲಾಗಿದ್ದ ಶ್ರೀರಾಮನ ಭಾವಚಿತ್ರಕ್ಕೂ ಕೂಡ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮೋಹನ್, ಮಜ್ದೂರ್ ಆಟೋ ಸಂಘದ ಅಧ್ಯಕ್ಷ ದಿಲೀಪ್, ಮಲ್ಲಿಕಾರ್ಜುನ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಬಿಜೆಪಿ ಮುಖಂಡ ಶೋಬನ್ ಬಾಬು, ಯುವ ಮೋರ್ಚಾ ಮಾಜಿ ಅಧ್ಯಕ್ಷ ಹೆಚ್.ಎನ್. ನಾಗೇಶ್, ವೆಂಕಟೇಶ್, ಕೀರ್ತಿ ಕೆರೆಹಳ್ಳಿ, ಧನುಷ್, ಪ್ರವೀಣ್, ಮೋಹನ್ ಕುಮಾರ್, ಶೇಖರ್, ಮಲ್ಲಿಕಾರ್ಜುನ್, ವಿಜಯಕುಮಾರ್, ಮಹಂತೇಶ್, ಹೇಮಂತ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *