
ಆಲೂರು : ಇಂದು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಾಜಿ ಪ್ರಧಾನಿ ದೇವೆಗೌಡರ ಉಪಸ್ಥಿತಿಯ ತಾಲ್ಲೂಕು ಜೆಡಿಎಸ್ ಮುಖಂಡ ಕೆ ಎಸ್ ಮಂಜೇಗೌಡರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಡಾ..ಹೆಚ್. ಡಿ ದೇವೆಗೌಡ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತಾನಾಡಿ ಹಾಸನ ಜಿಲ್ಲೆ ಸೇರಿದಂತೆ ಆಲೂರು ತಾಲ್ಲೂಕಿಗೆ ನಮ್ಮ ಪಕ್ಷದಿಂದ ಅಪಾರ ಕೊಡುಗೆಗಳನ್ನು ನೀಡಿದ್ದೇವೆ ನಾನು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಹೆಚ್ಚಿನ ಅನುದಾನ ಕೊಟ್ಟು ತಾಲ್ಲೂಕಿಗೆ ಬಸ್ ನಿಲ್ದಾಣ ಮಿನಿ, ವಿಧಾನಸೌದ, ಪೊಲೀಸ್ ಸ್ಟೇಷನ್ ಹಾಗೂ ರಸ್ತೆ ಮುರಾರ್ಜಿ ಶಾಲೆ ಕಾಲೇಜುಗಳಿಗೆ ಹೆಚ್ಚು ಒತ್ತು ನೀಡಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ.
ನಮ್ಮ ಪಕ್ಷದ ಕೊಡುಗೆ ಬಿಟ್ಟರೆ ಬೇರೆ ಪಕ್ಷದವರು ಏನು ಮಾಡಿದ್ದರೆಂದು ಪ್ರಶ್ನಿಸಿದರು, ಹಾಸನ ಜಿಲ್ಲೆಗೆ ಯಗಚಿ ಹೊಳೆ ಕಟ್ಟಿಸಿ ಕುಡಿಯುವ ನೀರಿಗಾಗಿ 45. ಸಾವಿರ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ನನ್ನ ಈ ಜೀವ ಇರುವವರೆಗೂ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ನಂತರ ರೇವಣ್ಣ ಮಾತಾನಾಡಿ ಕಾಂಗ್ರೆಸ್ ಪಕ್ಷದ ಆಶ್ವಾಸನೆಯಿಂದ ಜನರು ಮರುಳಾಗಿದ್ದು ಮುಂದಿನ ದಿನ ಅವರ ಅನ್ಯಾಯದ ಬಗ್ಗೆ ಜನರಿಗೆ ತಿಳಿಯುತ್ತದೆ
ಈ ತರಹದ ಯೋಜನೆಗಳು ತಂದು ಸರ್ಕಾರಕ್ಕೆ ಸುಮಾರು ನಾಲ್ಕು ಸಾವಿರ ಕೋಟಿ ಲಾಸಗಿದ್ದು ಇದು ಜನರಿಗೆ ತಿಳಿಯುತ್ತಿಲ್ಲ ಈ ತರಹದ ಯೋಜನೆಗಳು ಕೇವಲ ಎಂಪಿ ಎಲೆಕ್ಷನ್ ಮುಗಿಯುವರೆಗೂ ಅಷ್ಟೇ ಮುಗಿದ ಮೇಲೆ ಎಲ್ಲವನ್ನು ಸ್ಥಗಿತಗೊಳಿಸುತ್ತಾರೆ.
ಇಂದು ಎಷ್ಟು ಸರ್ಕಾರಿ ಬಸ್ಗಳು ಹಳ್ಳಿಗಳಿಗೆ ಹೋಗುತ್ತಲೇ ಇಲ್ಲಾ ಕಾರೋನ ಸಂದರ್ಭದಲ್ಲಿ ಸಹ ಇಂತಹ ಸಂದರ್ಭದಲ್ಲೂ ಈ ತರಹದ ಸಮಸ್ಯೆ ಎದುರಾಗಿತ್ತು ಇಂದು ಶಾಲಾ ಮಕ್ಕಳಿಗೆ ಹಾಗೂ ಹಳ್ಳಿ ಜನರಿಗೆ ಬಸ್ ವ್ಯವಸ್ಥೆಯಿಲ್ಲದೆ ತುಂಬಾ ತೊಂದರೆ ಆಗುತ್ತಿದೆ, ಇದು ಸರ್ಕಾರದ ಗಮನಕ್ಕೆ ಗೊತ್ತಿದ್ದರೂ ಸರ್ಕಾರ ಉಳಿಸಿಕೊಳ್ಳಲು ಉನ್ನರ ನಡೆಸುತ್ತಿದ್ದಾರೆ, ಇಂದು ಅವರ ಪಕ್ಷದಲ್ಲಿದ್ದ ನಾಯಕರೇ ಬೇಸರದಿಂದ ಪಕ್ಷ ತೊರೆದು ಬೀಡುತ್ತಿದ್ದಾರೆ ಮುಂದಿನ ದಿನ ನಾವೆಲ್ಲ ಒಗ್ಗಟ್ಟಾಗಿ ಪ್ರಧಾನಿ ಮೋಧಿ ಯನ್ನು ಗೆಲ್ಲಿಸಬೇಕಾಗಿದೆ ಏಕೆಂದರೆ ಈ ದೇಶದ ಆರ್ಥಿಕತೆಗೆ ಪ್ರಧಾನಿ ಮೋದಿಯವರ ಅವಶ್ಯಕತೆಇದ್ದು ದೇಶದ ಅಭಿವೃದ್ಧಿಗೆ ಅವರ ಪಾತ್ರ ಅವಶ್ಯಕವಾಗಿದೆ ಹಾಗಾಗಿ ಮುಂದಿನ ಚುನಾವಣೆಯಲ್ಲೂ ಅವರನ್ನು ಗೆಲ್ಲಿಸಿ ದೇಶದ ಅಭಿವೃದ್ಧಿ ಗೆ ಹಾಗೂ ಜನರ ಈತ ರಕ್ಷಣೆಗೆ ಮತ್ತೆ ಮೋಧಿಯನ್ನು ಗೆಲ್ಲಿಸಬೇಕಾಗಿದೆ ಹಾಗೂ ತಾಲ್ಲೂಕಿನ ಬೇಡಿಕೆಗಳು ಹಲವಾರಿದ್ದು ರೈಲ್ವೆ ನಿಲುಗಡೆ ಬಗ್ಗೆ ಈಗಾಗಲೇ ಅನೇಕ ಚರ್ಚೆಗಳು ನಡೆದಿದ್ದು ಪ್ರಜ್ವಲ್ ರೇವಣ್ಣರವರು ಸರ್ಕಾರದ ಗಮನಕ್ಕೆ ತಂದಿದ್ದಾರೆ
ತಾಲ್ಲೂಕಿನಲ್ಲಿ ಎರಡು ರೈಲು ಗಳನ್ನು ಕನಿಷ್ಠ ಹತ್ತು ನಿಮಿಷಗಳ ಕಾಲ ನಿಲ್ಲಿಸಲು ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದೇವೆ ಇನ್ನೂ ಮೂರು ವಾರದೊಳಗೆ ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚಾರಿಸುವ ರೈಲ್ವೆ ತಾಲ್ಲೂಕಿನಲ್ಲಿ ನಿಲುಗಡೆಯಾಗಬೇಕೆಂದು ಸರ್ಕಾರಕ್ಕೆ ಅನುಮತಿ ನೀಡಿದ್ದಾರೆ
ಮುಂದಿನ ದಿನಗಳಲ್ಲಿ ಹಾಸನ ಆಲೂರು ಚಿಕ್ಕಮಗಳೂರಿಗೆ ರೈಲ್ವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಇದು ದೇವೆಗೌಡರು ಪ್ರಾಧಾನಿದ ಸಂದರ್ಭದಲ್ಲಿ ಈ ಯೋಜನೆಗೆ ಹಣ ಬಿಡುಗಡೆ ಮಾಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ತಾಲ್ಲೂಕು ಅಧ್ಯಕ್ಷ ಕೆ ಎಸ್, ಮಂಜೇಗೌಡ. ನಟರಾಜು ನಾಕಲಗೂಡು,ಪಾಪು ಶಂಕರ್ಚಾರ್ಯ, ಬಸವರಾಜು ಗೇಕರವಳ್ಳಿ ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿದ್ದರು,
