
ಬೇಲೂರು : ಕಾಡಾನೆ ಹಾವಳಿಗೆ ಅಪಾರ ಬೆಳೆ ನಾಶ ತಾಲೂಕಿನ ಕಳ್ಳೇರಿ ಗ್ರಾಮಪಂಚಾಯತಿ ವ್ಯಾಪ್ತೀಯ ಅಗ್ಗಡಲು ಗ್ರಾಮದ ನಸುಕಿನ ಜಾವ ಸುಮಾರು ೧೭ ಕಾಡಾನೆಗಳ ಹಿಂಡು ಗ್ರಾಮಕ್ಕೆ ನುಗ್ಗಿದ ಪರಿಣಾಮ ಅಗ್ಗಡಲು ಗ್ರಾಮದ ರಮೇಶ್ ದೇವರಾಜ್ ಅನಿಲ್ ಎಂಬುವವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಕಾಫಿ ತೀಟ ಬಾಳೆ ಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ನಾಶಮಾಡಿದಲ್ಲದೆ ತೋಟಕ್ಕೆ ಹಾಕಿದ ತಂತಿಬೇಲಿಗಳನ್ನು ತುಳಿದು ಹಾಕಿವೆ.
ಈಗಾಗಲೇ ಕಾಫಿ ಕೊಯ್ಲು ಮುಕ್ತಾಯಕ್ಕೆ ಬಂದಿರುವ ಹಿನ್ನಲೆಯಲ್ಲಿ ಕೂಲಿಕಾರ್ಮಿಕರು ತೋಟಕ್ಕೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶವ್ಯಕ್ತಪಡಿಸಿದರು.
