ಬೇಲೂರು : ಪ್ರವಾಸಿ ತಾಣ ಬೇಲೂರಿನ ಶತಮಾನೋತ್ಸವ ಪೂರೈಸಿದ ಪುರಸಭೆ ವತಿಯಿಂದ ನಡೆದ ೭೫ ನೇ ಗಣರಾಜ್ಯೋತ್ಸವ ಸಮಾರಂಭವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸುವ ಜೊತೆಗೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಅದ್ವಿತೀತವಾಗಿ ಸೇವೆ ಸಲ್ಲಿಸಿದ ಸಾಧಕರಾದ ಮ.ಶಿವಮೂರ್ತಿ, ಚಂದ್ರಶೇಖರ್, ಚಂದನ್ ಕುಮಾರ್, ಗುಜ್ನರ್ ಕಿರಣ್ ಮತ್ತು ಪೌರ ಕಾರ್ಮಿಕರನ್ನು ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ಹಾಗೂ ಪುರಸಭಾ ಸದಸ್ಯರು ಸಮ್ಮುಖದಲ್ಲಿ ಆತ್ಮೀಯವಾಗಿ ಅಭಿನಂದನೆ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ, ಭಾರತದಲ್ಲಿ ಪ್ರತಿ ವರ್ಷ ಜನವರಿ ೨೬ ರಂದು ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವ ಎಂಬ ಹಿನ್ನಲೆಯಲ್ಲಿ ಆಚರಣೆ ಮಾಡುತ್ತಾ ಬಂದಿದ್ದಾರೆ. ಭಾರತದಂತಹ ದೊಡ್ಡ ರಾಷ್ಟ್ರಕ್ಕೆ ಕ್ರಮಬದ್ದ ಮತ್ತು ಎಲ್ಲಾ ಜಾತಿ,ಧರ್ಮಗಳನ್ನು ಒಪ್ಪುವ ಸಂವಿಧಾನವನ್ನು ನೀಡಿದ್ದು ಡಾ.ಬಿ.ಆರ್.ಅಂಬೇಡ್ಕರ್.

ಈ ಕಾರಣದಿಂದಲೇ ಘನ ರಾಜ್ಯ ಸರ್ಕಾರ ಗಣರಾಜ್ಯೋತ್ಸವ ಎಂದರೆ ಸಂವಿಧಾನ ಜಾರಿ ಬಂದು ಇಲ್ಲಿಗೆ ೭೫ ವರ್ಷವನ್ನು ಪೂರೈಸಿದ ಕಾರಣದಿಂದ ಸತತ ಒಂದು ತಿಂಗಳ ಕಾಲ ಸಂವಿದಾನ ಜಾಗೃತಿ ಜಾಥವನ್ನು ನಡೆಸುತ್ತಾ ಬಂದಿದೆ. ಇಂತಹ ಜಾಥ ಇಂದೇ ಬೇಲೂರು ತಾಲ್ಲೂಕಿಗೆ ಆಗಮಿಸಿ ೭ ದಿನಗಳ ಕಾಲ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ಪಟ್ಟಣದಲ್ಲಿ ಸಂಚರಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮವನ್ನು ನಡೆಸಿ ಸಂವಿಧಾನದ ಆಶಯಗಳನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸಕ್ಕೆ ಎಲ್ಲರೂ ಕೂಡ ಮುಂದಾಗಬೇಕಿದೆ.

ವಿಶೇಷವಾಗಿ ಅಧಿಕಾರಿಗಳು ಇಂತಹ ಜಾಗೃತಿ ಅಭಿಯಾನದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಕಾರಣ ಅಂಬೇಡ್ಕರ್ ನೀಡಿದ ಭಿಕ್ಷೆಯಿಂದ ಮಾತ್ರ ನಾವುಗಳು ಇಂತಹ ಸ್ಥಾನವನ್ನು ಪಡೆಯಲು ಸಾದ್ಯವಾಗಿದೆ. ೭೫ ನೇ ವರ್ಷ ಗಣರಾಜ್ಯೋತ್ಸವದ ಸವಿನೆನಪಿಗಾಗಿ ಬೇಲೂರು ಪುರಸಭೆಯಿಂದ ಸಮಾಜದ ವಿವಿಧ ಕ್ಷೇತ್ರದಲ್ಲಿ ದುಡಿದ ವ್ಯಕ್ತಿಗಳಿಗೆ ಇಂದು ಸನ್ಮಾನಿಸಿ ಗೌರವ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಸುಜಯ್ ಕುಮಾರ್, ಉಪಾಧ್ಯಕ್ಷೆ ದಿವ್ಯಗಿರೀಶ್, ಸದಸ್ಯರಾದ ಬಿ.ಗಿರೀಶ್. ಜಮಾಲುದ್ಧಿನ್, ಬಿ.ಸಿ.ಜಗದೀಶ್. ಶ್ರೀನಿವಾಸ್, ಪುಟ್ಟಸ್ವಾಮಣ್ಣ, ಆರೋಗ್ಯ ನಿರೀಕ್ಷಕರಾದ ಜ್ಯೋತಿ ಮತ್ತು ಲೋಹಿತ್ ಪುರಸಭಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಇನ್ನು ಮುಂತಾದವರು ಹಾಜರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *