
ಸಕಲೇಶಪುರ : ಪಟ್ಟಣದ ನ್ಯಾಯಲಯದ ಆವರಣದಲ್ಲಿ ಇಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ನ್ಯಾಯಾಂಗ ಇಲಾಖೆ,ತಾಲೂಕು ವಕೀಲರ ಸಂಘ ಮತ್ತು ಸಾರಿಗೆ ಇಲಾಖೆ ಸಂಯುಕ್ತ ವಾಗಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಜಾಗೃತಿ ಬಗ್ಗೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಸಿದ ರಸ್ತೆ ಜಾಗೃತಿ ಜಾಥವನ್ನು ಹಿರಿಯ ಸಿವಿಲ್ ನ್ಯಾಯಧೀಶರಾದ ಧನಲಕ್ಷ್ಮೀಯವರು ಉಧ್ಘಾಟಿಸಿದರು.
ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಹನ ಚಾಲನೆ ಮಾಡುವಾಗ ಸುರಕ್ಷಿತವಾಗಿ ಚಾಲನೆ ಮಾಡಬೇಕು ಹಾಗೂ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಬೇಕು ಎಂದು ಹೇಳಿದ ಅವರು ನಿಯಮಬಧ್ಧ ವಾಹನ ಚಾಲನೆಯಿಂದಾಗಿ ಚಾಲಕರು ಹಾಗೂ ಅವರನ್ನೆ ನಂಬಿರುವ ಕುಟುಂಬಸ್ಥರು ಕ್ಷೇಮವಾಗಿರಬಹುದು ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಆಶಾ ರವರು ಮಾತನಾಡಿ ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡುವುದು ಅಪರಾಧ,ಯಾವುದೇ ಕಾರಣಕ್ಕೂ ಅಪ್ರಾಪ್ತ ರ ಕೈಗೆ ವಾಹನಗಳನ್ನು ನೀಡಬೇಡಿ ಎಂದು ಹೇಳಿದ ಅವರು ಒಂದು ವೇಳೆ ನಿಯಮ ಮೀರಿ ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತ ಮಾಡಿದರೆ ಅವರ ಪೋಷಕರು ಸಾಕಷ್ಟು ದಂಡದ ಜೊತೆಗೆ ಜೊತೆಗೆ ಕಾರಗೃಹವಾಸ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ವಕೀಲ ಆರ್.ಎನ್ ಕೃಷ್ಣಮೂರ್ತಿ ತಾವು ಸಿಧ್ಧ ಪಡಿಸಿದ್ದ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮ ದಲ್ಲಿ ಸಿವಿಲ್ ನ್ಯಾಯಧೀಶರಾದ ಸುಧೀರ್ ರವರು, ವಕೀಲರ ಸಂಘದ ಅಧ್ಯಕ್ಷ ರಾದ ಪ್ರದೀಪ್ ,ಸರ್ಕಾರಿ ಅಭಿಯೋಜಕರು,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸತ್ಯ ನಾರಾಯಣ, ಹಾಸನ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತರಾದ ಡೋ.ವೈ.ಎಸ್.ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ತಾಲೂಕು ಕಾರ್ಯದರ್ಶಿ ಮಲ್ನಾಡ್ ಝಾಕೀರ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಪ್ರಿಯಾಂಕಾ, ರಾಜ್ಯ ಪ್ರತಿನಿಧಿ ಕೀರ್ತಿ ಕುಮಾರ್, ತಾಲೂಕು ಉಪಾಧ್ಯಕ್ಷರಾದ ಪ್ರಾಂಶುಪಾಲ ರಮೇಶ್, ಸದಸ್ಯರಾದ ರೋಹನ್,ವಕೀಲರು, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು,ನೂರಾರು ವಿಧ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.




