ಅರೇಹಳ್ಳಿ : ನಾರ್ವೆಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಪೀಠಿಕೆ ಜಾಗೃತಿ ಜಾಥಾವನ್ನು ಆದ್ದೂರಿಯಾಗಿ ಬರಮಾಡಿಕೊಂಡರು

ನಾರ್ವೆ ಪ್ರಮುಖ ರಸ್ತೆಯಲ್ಲಿ ಹಸಿರು ತೋರಣಗಳಿಂದ ಸಿಂಗರಿಸಿ ಮೆರವಣಿಗೆ ಮೂಲಕ ಅಂಬೇಡ್ಕರ್ ಮತ್ತು ಸಂವಿಧಾನ ಪೀಠಿಕೆ ಸ್ತಬ್ಧ, ಚಿತ್ರ , ಕುಂಬಕಳಸ, ವಾದ್ಯಗೋಷ್ಠಿ, ಬೈಕ್ ರ್ಯಾಲಿ , ಪ್ರತಿಮೆಗೆ ಪುಷ್ಪಾರ್ಚನೆ , ಟ್ರ್ಯಾಕ್ಟರ್ ಮೂಲಕ ಅಂಬೇಡ್ಕರ್ ಭಾವಚಿತ್ರ ಮೆರವಣಗೆ ನಡೆಯಿತು.

ನಂತರ ನಾರ್ವೆಪೇಟೆ (ನಾರ್ವೆ )ಗ್ರಾಮ ಪಂಚಾಯಿತಿ ಆವರಣದಲ್ಲಿ ಸಂವಿಧಾನ ಪೀಠಿಕೆ ಮಹತ್ವವನ್ನು ಕಾರ್ಯಕ್ರಮದಲ್ಲಿ* *ಉಪನ್ಯಾಸಕರಾದ ಮಂಜುನಾಥ್ ರವರು ಮಾತನಾಡಿದರು ಸಂವಿಧಾನದ ಪ್ರತಿಜ್ಞೆ ಮಾಡಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ಸೋಮಯ್ಯ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಳಗಳಲೆ, ಮಂಜುನಾಥ, ಮಲ್ಲಿಕಾರ್ಜುನ್ ನಾರ್ವೆ, ಪವಿತ್ರ, ಬೇಬಿ ಪ್ರಕಾಶ್, ವೀಣಾ, ಪಿಡಿಒ ಚಂದ್ರಯ್ಯ ಕಾರ್ಯದರ್ಶಿ ಚಾಮರಾಜ್, ಎಸ್. ಡಿ. ಎ.ಎ. ಸುನೀತಾ, ಡಿ. ಎಸ್ .ಎಸ್ ಮುಖಂಡರಾದ ಅರೇಹಳ್ಳಿ ನಿಂಗರಾಜು, ನಾರ್ವೆ ನಿಂಗರಾಜು, ಪಂಚಾಯಿತಿ ವ್ಯಾಪ್ತಿಯ ಸೇರಿದ ಅಂಬೇಡ್ಕರ್ ಯುವಕ ಸಂಘ ಮತ್ತು ಪ್ರಗತಿಪರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲಾ ವರ್ಗದ ಮುಖಂಡರು ಸಾರ್ವಜನಿಕರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *