ಚನ್ನರಾಯಪಟ್ಟಣ: ಪಟ್ಟಣದ ಟೈಮ್ಸ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಾಸನ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಹಾಲಿಂಗಯ್ಯ ಉದ್ಘಾಟನೆ ಮಾಡಿದರು

ಚನ್ನರಾಯಪಟ್ಟಣ ತಾಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರನ್ನು ಸನ್ಮಾನಿಸಲಾಯಿತ್ತು,ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸೊಪ್ಪಿನಹಳ್ಳಿ ಶಿವಣ್ಣ, ಗಣಪತಿ ಮೂರ್ತಿ ಕಲಾವಿದ ಪ್ರಸನ್ನ, ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಪ್ರಕಾಶ್, ಸಾಮಾಜಿಕ ಸೇವೆಯಲ್ಲಿ ಬಸವಣ್ಣಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಬಿ ಟಿ ತ್ರಿಪುರಾಂಬ ಅವರನ್ನು ಪಟ್ಟಣದ ಟೈಮ್ಸ್ ಕಾಲೇಜು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಟೈಮ್ಸ್ ಕಾಲೇಜಿನ ಕಾರ್ಯದರ್ಶಿ ಗಂಗಾಧರ್ ಇಂತಹ ಮಹನೀಯರನ್ನು ಗುರುತಿಸಿ ನಮ್ಮ ಟೈಮ್ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸುತ್ತಿರುವುದು ನಿಜಕ್ಕೂ ಹೆಮ್ಮೆಯಾಗುತ್ತಿದೆ. ನಮ್ಮ ಸಂಸ್ಥೆಯ ಮಕ್ಕಳು ಪಠ್ಯದ ಜೊತೆ ಸಂಸ್ಕಾರ ಕಲಿಯುವುದು ಅತೀ ಮುಖ್ಯವಾಗಿದೆ, ಏಕೆಂದರೆ ಭಾರತ ಸರ್ಕಾರ ನೀಡುವ ಉನ್ನತ ಪದಕಗಳು ಕೇವಲ ಹಣವಿದ್ದವರಿಗೆ ಅಲ್ಲ ಸಮಾಜಕ್ಕೆ ಕೊಡುಗೆ ನೀಡಿದವರಿಗೆ ಮಾತ್ರ ಪದಕಗಳನ್ನು ನೀಡುತ್ತಾರೆ ಆದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಸಮಾಜಕ್ಕೆ ಏನಾದರೂ ಉನ್ನತವಾದ ಸಾಧನೆ ಮಾಡಿ ತಮ್ಮ ತಂದೆ ತಾಯಿಗಳಿಗೆ ಹೆಸರು ತರುವ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ ಎಂ ಮಹಾಲಿಂಗಯ್ಯ, ಸಿ ಎನ್ ಅಶೋಕ್, ಕಾಲೇಜಿನ ಅಧ್ಯಕ್ಷರಾದ ಎ ಬಿ ಸುರೇಂದ್ರಕುಮಾರ್, ಟೈಮ್ಸ್ ಕಾಲೇಜಿನ ಕಾರ್ಯದರ್ಶಿಗಳಾದ ಬಿ ಕೆ ಗಂಗಾಧರ್, ಪ್ರಾಂಶುಪಾಲರಾದ ಹೆಚ್ ಎಂ ಶ್ರೀಕಂಠ, ಉಪನ್ಯಾಸಕರಾದ ಸುನಿಲ್ ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *