
ಹಾಸನ: ಮಧ್ಯಂತರ ಬಜೆಟ್ ನಲ್ಲಿ ಆದಾಯದ ಮಿತಿಯನ್ನು ೭ ಲಕ್ಷಕ್ಕೆ ಏರಿಕೆ ಮಾಡಿರುವುದು ಬಹಳ ಉತ್ತಮವಾದ ನಿರ್ಣಯ ಹಾಗೂ ನಿರ್ಧಾರ ಕೂಡ ಸರಿಯಾಗಿದೆ. ರೂಪ್ ಟಾಫ್ ಸೋಲರ್ ನಲ್ಲಿ ಒಂದು ಕೋಟಿ ಮನೆಗಳಿಗೆ ವ್ಯವಸ್ಥೆ ಮಾಡಿ ಕೊಡಬೇಕು ಎಂದು ಬಜೆಟ್ ನಲ್ಲಿ ನಿರ್ಣಯ ತೆಗೆದುಕೊಂಡಿದ್ದು, ಇದರಿಂದ ಸೋಲರ್ ಉದ್ಯಮ ಮಾಡುವವರಿಗೆ ಪ್ರೋತ್ಸಹ ನೀಡಿದಂತಾಗುತ್ತದೆ.
ಸೋಲರ್ ಉತ್ಪಾಧಿಸುವ ಉದ್ಯಮವಾಗಿರಬಹುದು, ಸೋಲರ್ ಸರ್ವಿಸ್ ಉಧ್ಯಮವಾಗಿರಬಹುದು, ಎರಡು ಉಧ್ಯಮಗಳು ಕೂಡ ಬಹಳಷ್ಟು ಒಳ್ಳೆಯ ಅಭಿವೃದ್ಧಿ ಕಂಡುಕೊಳ್ಳುತ್ತದೆ. ರೈಲ್ವೆ ಕಾರಿಡರ್ ಮಾಡುತ್ತೇವೆ ಎಂದು ನಿರ್ಣಯ ಬಂದಿದ್ದು, ಎನರ್ಜಿ ಕಾರೀಡರ್, ಸಿಮೆಂಟ್ ಕಾರಿಡರ್, ಹೈ ಟ್ರಾಪೀಕ್ ಕಾರಿಡರ್ ಇರಬಹುದು ಈ ಮೂರರಿಂದ ರೈಲ್ವೆಯಲ್ಲಿ ಹೆಚ್ಚಿನ ವೆಚ್ಚ ಮತ್ತು ಬಡ್ಜೆಟ್ ಬಂದಾಗ ನಮ್ಮ ಉದ್ಯಮ ಕ್ಷೇತ್ರ ಇಲ್ಲವೇ ದೇಶದ ಸರ್ವೋತಮುಖ ಅಭಿವೃದ್ಧಿಗೆ ದೊಡ್ಡ ಹೆಜ್ಜೆ ಮುಂದೆ ಇಟ್ಟಂತಾಗುತ್ತದೆ.
ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪ್ರವಾಸೋಧ್ಯವು ದೇಶದಾದ್ಯಂತ ದಾಪುಗಾಲು ಹಾಕುತ್ತಿದ್ದು, ಆಂತರಿಕವಾದ ಪ್ರವಾಸೋದ್ಯಮ ಕೂಡ ಹೆಚ್ಚಾಗುತ್ತಿದೆ. ಹೊರಗಡೆಯಿಂದ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಕೂಡ ಏರಿಕೆಯಾಗದೆ. ೭೫ ಸಾವಿರ ಕೋಟಿಯನ್ನು ಟೂರಿಸಂ ಅಭಿವೃದ್ಧಿಗೆ ಕೊಟ್ಟಿರುವುದರಿಂದ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಲಿದೆ. ಇದರಿಂದ ಹಾಸನ ಜಿಲ್ಲೆಗೆ ಸಹಕಾರ ಆಗಲಿದೆ.
ಇನ್ನು ಬೇಲೂರು ಮತ್ತು ಹಳೇಬೀಡು ದೇವಾಲಯವನ್ನು ಯೂನೆಸ್ಕ್ ಗೆ ಸೇರಿಸಿರುವುದರಿಂದ ಉತ್ತಮ ಬೆಳವಣಿಗೆ ಎಂದರು.
ರೈತರ ಬಗ್ಗೆಯೂ ಕೂಡ ಗಣನೆಗೆ ತೆಗೆದುಕೊಂಡಿರುವ ಬಜೆಟ್ ಆಗಿದೆ. ಎಲೆಕ್ಟ್ರಿಕಲ್ ವಾಹನ ಮತ್ತು ಗ್ರೀನ್ ಎನರ್ಜಿಗೆ ಒಂದು ಉತ್ತಮವಾದ ಪ್ರಮೋಷನ್ ಕೊಟ್ಟಿದ್ದಾರೆ. ಸಧೃಡವಾದ ಭಾರತ ನಿರ್ಮಾಣ ಮಾಡಲು ಯಾವುದೇ ಒಂದು ರೀತಿಯಲ್ಲಿ ರೂಪರೇಶ ಮಾಡಬೇಕು ಎಂದು ನಿರ್ಣಯ ತೆಗೆದುಕೊಂಡಿರುವ ಬಜೆಟ್ ಆಗಿದೆ. ಬಹಳ ಮುಖ್ಯವಾಗಿ ಇನ್ಫಾಸ್ಟೆಚರ್ ಪೆಂಡಿಂಗ್ ಗೆ ಅಲುಕೇಶನ್ ಮಾಡಿದ್ದಾರೆ.
೧೧ ಪರ್ಸೇಂಟ್ ಇನ್ಫಾಸ್ಟೆಚರ್ ಇಲ್ಲಿಯವರೆಗೂ ಆಗಿರುವ ಬಜೆಟ್ ನಲ್ಲಿ ಬಹಳ ಉತ್ತಮವಾದ ಅಲೋಕೇಶನ್ ಆಗಿದ್ದು, ಇದರಿಂದ ನಮ್ಮ ದೇಶದ ಸರ್ವೋತಮುಖ ಅಭಿವೃದ್ಧಿಗೆ ಎಲ್ಲಾ ಒಂದು ಭಾಗದಲ್ಲಿ ಇನ್ಫಾಸ್ಟೆಚರ್ ಗು ಕೂಡ ಸಹಾಯವಾಗಲಿದೆ.
ಈ ಬಜೆಟ್ ಉಧ್ಯಮ ಕ್ಷೇತ್ರಕ್ಕೆ ಮತ್ತು ಜನಜೀವನಕ್ಕೆ ಹಾಗೂ ದೇಶದ ಪ್ರಗತಿಗೆ ಇರಬಹುದು ಇದೊಂದು ಉತ್ತಮವಾದ ಬಜೆಟ್ ಎಂದು ಎಫ್.ಕೆ.ಸಿ.ಸಿ. ನಿರ್ದೇಶಕರು, ಹಾಸನ ಜಿಲ್ಲಾ ಸಣ್ಣ ಕೈಗಾರಿಕ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಉಪಾಧಕ್ಷ ಹೆಚ್.ಎ. ಕಿರಣ್ ಅಭಿಪ್ರಾಯಪಟ್ಟಿದ್ದಾರೆ.
