ಸಕಲೇಶಪುರ : ಸಕಲೇಶಪುರದ ಕಸಬಾ ಸೊಸೈಟಿಯಲ್ಲಿ ರೈತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗ ಆಗಿದ್ದು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಹಲಸುಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭ ಕೆಂಪೇಗೌಡ ಒತ್ತಾಯಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಇಲ್ಲಿನ ಕಸಬಾ ಸೊಸೈಟಿಯ ಅಧ್ಯಕ್ಷ ಕೆಲೆಗಳಲೆ ನಾಗರಾಜೆಗೌಡ, ಮಾಜಿ ಅಧ್ಯಕ್ಷ ರಾಜಶೆಟ್ಟಿ, ಜನ್ನಾಪುರ ಹಾಗೂ ಇತ್ತೀಚಿಗೆ ನಿಧನರಾದ ಕಾರ್ಯದರ್ಶಿ ಜಗನ್ನಾಥ್ ಇವರುಗಳು ಸೇರಿ ಕಳೆದ ಹಲವಾರು ವರ್ಷಗಳಿಂದ ರೈತರಿಗೆ ಸಾಲ ರಿನಿವಲ್ ಮಾಡಿ ಕೊಡುತ್ತೇವೆಂದು ಹಣ ನಮೂದಿಸದೆ ಇರುವ ಬ್ಯಾಂಕ್ ಚೆಕ್ ಗೆ ಸಹಿ ಹಾಕಿಸಿಕೊಂಡು ಅವರ ಜಮೀನಿನ ಪಹಣಿ ಪಡೆದು ಅವರಿಗೆ ಸ್ವಲ್ಪ ಹಣ ಕೊಟ್ಟು ಹೆಚ್ಚಿಗೆ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಂತರ ಮಾತನಾಡಿದ ಅವರು ಖಾಲಿ ಚೆಕ್ ಗೆ ಸಹಿ ಮಾಡಿಸಿ ಕಡಿಮೆ ಹಣ ಕೊಟ್ಟು ಹೆಚ್ಚಿಗೆ ಹಣವನ್ನು ಸುಮಾರು 480 ಶೇರುದಾರರ ಪಹಣಿ ಪಡೆದು ಲಕ್ಷಾಂತರ ಹಣವನ್ನು ಅಧ್ಯಕ್ಷರು, ಕೆಲವು ಸದಸ್ಯರು ಮತ್ತು ಕಾರ್ಯದರ್ಶಿ ಸೇರಿ ಅವ್ಯವಹಾರ ನಡೆಸಿದ್ದಾರೆ ಇವರ ವಿರುದ್ದ ಮೇಲಾಧಿಕಾರಿಗಳು ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಿ ಸೂಕ್ತ ರೀತಿಯಲ್ಲಿ ತನಿಖೆ ಮಾಡುವಂತೆ ಒತ್ತಾಯಿಸಿದರು .

ನಂತರ ಮಾತನಾಡಿದ ಶೇರುದಾರರಾದ ಕಿರಳ್ಳಿ ಶಿವಕುಮಾರ್ ಮಾತನಾಡುತ್ತಾ ಈಗಿನ ಅಧ್ಯಕ್ಷರು ಮಾಜಿ ಅಧ್ಯಕ್ಷರು ಕೆಲ ಸದಸ್ಯರು ಕಾರ್ಯದರ್ಶಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು ಅಲ್ಲದೆ ಕಮಿಷನ್ ಹಣ ಕೊಡುವಂತೆ ಪೀಡಿಸುತ್ತಿದ್ದರಿಂದ ಅವರು ಒತ್ತಡಕ್ಕೆ ಒಳಗಾಗಿ ಅತಿ ಹೆಚ್ಚು ಮದ್ಯಪಾನ ಮಾಡಿ ನಿಧನರಾಗಲು ಇವರೇ ಕಾರಣ ಎಂದು ಆಪಾದಿಸಿದರು ಇವರ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಇದೆ ಅದಕ್ಕಾಗಿ 11/2/24 ರಂದು ಬೆಳಗ್ಗೆ 11 ಗಂಟೆಗೆ ಸಾಲ ಪಡೆದಿರುವ 480 ರೈತರು ಸಕಾಲದಲ್ಲಿ ಆಗಮಿಸಬೇಕಾಗಿ ಮಾಧ್ಯಮ ಮೂಲಕ ರೈತರಲ್ಲಿ ಮನವಿ ಮಾಡುತ್ತೇನೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ವಂಚನೆಗೆ ಒಳಗಾದ ರೈತರಾದ ಅಪ್ಪಣ್ಣ, ಲೋಕೇಶ್, ಗಿಡ್ಡೇಗೌಡ ಮೊದಲಾದವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *