ಸಕಲೇಶಪುರ : ನೆನ್ನೆ ತಡರಾತ್ರಿ ಒಂದುವರೆ ಗಂಟೆ ಸುಮಾರಿಗೆ ಮೂರು ಅಂಗಡಿ ಮಳಿಗೆಯನ್ನು ದರೋಡೆ ಮಾಡಿರುವ ಪ್ರಕರಣ ಸಕಲೇಶಪುರದ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ

ಮೂರು ಜನ ದರೋಡೆಕೋರರು ಬೈಕಿನಲ್ಲಿ ಬಂದು ಬಾಗಿಲು ಹೊಡೆಯುವುದು ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ

ಮೊದಲಿಗೆ ಸಕಲೇಶಪುರದ ಬಿಎಮ್ ರಸ್ತೆಯಲ್ಲಿರುವ ಮಲ್ನಾಡ್ ಆಟೋಮೊಬೈಲ್ ಬಾಗಿಲನ್ನು ಎತ್ತಿ ಒಳ ನುಗ್ಗಿ ಯಾವ ಒಂದು ಹಣ ಸಿಗದೆ ಹೋಗಿದ್ದಾರೆ ಎಂದು ತಿಳಿದುಬಂದಿದೆ

ನಂತರ ಮಲ್ಲಮ್ಮನ ಬೀದಿಯಲ್ಲಿರುವ ಮೆಹೆತಿ ಸ್ಟೋರ್ ಬಾಗಿಲನ್ನು ಮೂರು ಜನ ಕದೀಮರ ತಂಡ ಎತ್ತಿ ಒಳ ಹೋಗಿ ಸುಮಾರು 70 ಸಾವಿರ ಇಟ್ಟಿದ್ದ ನಗದನ್ನು ದೋಚಿದ್ದಾರೆ

ನಂತರ ಬಿ ಎಂ ರಸ್ತೆಯಲ್ಲಿರುವ ಬಾಲಾಜಿ ಸ್ಟೋರ್ ಅಂಗಡಿ ಮಳಿಗೆಯ ಮೇಲ್ಚಾವಣಿಯಲ್ಲಿರುವ ಹೆಂಚುಗಳನ್ನು ತೆಗೆದು ಹೊಳಹೋಗಿ ಸುಮಾರು ಎಪ್ಪತ್ತು ಸಾವಿರಗಳಷ್ಟು ಹಣ ಮತ್ತು 30,000ಗಳಷ್ಟು ಸಿಗರೇಟ್ ಗಳನ್ನು ದೋಚಿದ್ದಾರೆ

ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ನಡೆಸಲಾಗುತ್ತಿದೆ

ಶೀಘ್ರದಲ್ಲೇ ಮೂರು ಜನ ಕದೀಮರನ್ನು ಬಂಧಿಸಲಾಗುವುದು ಎಂದು ಸಕಲೇಶಪುರ ಪಟ್ಟಣದ ಪಿಎಸ್ಐ ಪ್ರಮೋದ್ ರವರು ತಿಳಿಸಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *