
ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಏಷ್ಯನ್ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡವು ಜಯಗಳಿಸಿದೆ
ಈ ತಂಡದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಗ್ರಾಮದ ಯುವಕನಾದ ಹೆಚ್.ಪಿ.ಜಗತ್ ಗೌಡ ಎಂಬುವರು ಈ ತಂಡದಲ್ಲಿ ಪ್ರತಿನಿಧಿಸಿ ಜಿಲ್ಲೆಗೆ ಮತ್ತು ತಾಲೂಕಿಗೆ ಹೆತ್ತೂರು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ
ಇಂದು ಬೆಳಗ್ಗೆ ಇವರು ಹೆತ್ತೂರು ಗ್ರಾಮಕ್ಕೆ ಆಗಮಿಸಿದರು ಇವರನ್ನು ಹೆತ್ತೂರು ಗ್ರಾಮದ ಸಂಘ ಸಂಸ್ಥೆಯ ಸದಸ್ಯರುಗಳು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು







