
ಸಕಲೇಶಪುರ : ತಾಲ್ಲೂಕಿನ ನಾಲ್ಕು ದಿನದ ಹಿಂದೆ ಹೊಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಬಳಿ ಒಂದು ಮೃತ ದೇಹ ಪತ್ತೆಯಾಗಿತ್ತು, ಮೃತ ದೇಹವನ್ನು ಸಕಲೇಶಪುರದ ಅಸ್ಪತ್ರೆಯ ಶವಗಾರದಲ್ಲಿ ಇರಿಸಲಾಗುತ್ತು, ಮೂರು ದಿನ ಕಳೆದರೂ ಮೃತರ ವಾರಸುದಾರರು ಬಾರದ ಕಾರಣ ಮೃತ ದೇಹದ ಬಲಗೈಯಲ್ಲಿ ಶಿಲುಬೆಯ ಮೇಲೆ ಮೃತರಾದ ಯೇಸು ಕ್ರಿಸ್ತರ ಅಚ್ಚೆ ಇದ್ದಿದ್ದನ್ನು ಗಮನಿಸಿದ ಸಕಲೇಶಪುರದ ದಯಾಳು ಮಾತೆಯ ಕಥೋಲಿಕ ಕುಟುಂಬ ಸದಸ್ಯರು ಅನಾಥ ಶವದ ಅಂತ್ಯಕ್ರಿಯೆ ಗುರುಗಳೊಂದಿಗೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪ್ರದೀಪ್ ಡಿಸೋಜ, ಸಿಲ್ವೆಸ್ಟರ್ ಸಲ್ಡಾನ್ಹ, ಬಜಿಲ್ ಫೆರ್ನಾಂಡಿಸ್, ಮೋರಿಸ್ ಲೋಬೊ, ಜಾನ್ ಮೆನೆಜಸ್ , ರಾಕೇಶ್ ಮೆನೆಜಸ್, ಆನಂದ್ ಲಿಯೋ ವಾಸ್ ಕ್ರೈಸ್ತ ಯುವ ಮುಖಂಡರಾದ ಅವಿನಾಶ್, ಸಿರಿಲ್ ಫೆರ್ನಾಂಡಿಸ್,ಕೋಲನ್ ಕಿರಣ್, ನವೀನ್ ಮಾರನಹಳ್ಳಿ, ಸಂತೋಷ ಡಿಸೋಜ ಹಾಗೂ ಇತರರು ಇದ್ದರು.




