ಹಾಸನ ಜಿಲ್ಲೆಯ, ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ನರಹಂತಕ ಕಾಡಾನೆ ಗ್ರಾಮದೊಳಗೆ ಎಂಟ್ರಿ ಕೊಟ್ಟಿದೆ.

ಈ ಮೊದಲು ಬೇಲೂರು ತಾಲೂಕಿನ, ಮತ್ತಾವರ ಗ್ರಾಮದಲ್ಲಿ ವಸಂತ್ ಎಂಬುವವರನ್ನು, ಕರಡಿ ಎಂಬ ಒಂಟಿಸಲಗ ಬಲಿ ಪಡೆದಿತ್ತು.ಇದೀಗ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಇರುಕುರಹಳ್ಳಿ ಗ್ರಾಮದೊಳಗೆ ಒಂಟಿಸಲಗ ಲಗ್ಗೆ ಇಟ್ಟಿದೆ.

ಇನ್ನು ಒಂಟಿಸಲಗವನ್ನು ನೋಡಿ, ಗ್ರಾಮಸ್ಥರು ಭಯಬಿದ್ದಿದ್ದಾರೆ.ಈಗಾಗಲೇ ಗ್ರಾಮದಲ್ಲಿ ಹಲವರ ತೋಟಕ್ಕೆ ನುಗ್ಗಿ ಕಾಫಿ, ತೆಂಗಿನಮರಗಳನ್ನು ನಾಶ ಮಾಡಿದೆ. ಹಾಗಾಗಿ ಒಂಟಿಸಲಗದ ಎಂಟ್ರಿಯಿಂದ, ಜನ ಎಲ್ಲಿ ತಮ್ಮ ಬೆಳೆ ನಾಶವಾಗುತ್ತದೆಯೋ, ಪ್ರಾಣಹಾನಿಯಾಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರುವಂತೆ ಆಗ್ರಹಿಸಿದ್ದು, ಕಾಡನೆಗಳನ್ನು ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *