ಟಾಟಾ ಎಸ್ ಹಾಗೂ ಕಾರು ನಡುವೆ ಡಿಕ್ಕಿ ಸಂಬವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಬೇಗೂರು ಬೈಪಾಸ್ ನಲ್ಲಿ ಫೆ.5ರ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಹಾಸನ ಜಿಲ್ಲೆ ಚನ್ನರಾಚಪಟ್ಟಣ ತಾಲೂಕು ಗುಳ್ಳೆನಹಳ್ಳಿ ಮಟ್ಟಿನವಿಲೆ ಅಣ್ಣೇಗೌಡ (38) ಹಾಗೂ ಕಾರು ಚಾಲಕ ನಿರಂಜನ್ ಮೃತಪಟ್ಟಿದ್ದಾರೆ.

ಸ್ವಾಮಿ ಅಲಿಯಾಸ್ ಪುಟ್ಟ ತೀವ್ರ ಗಾಯಗೊಂಡಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಅದಿಚುಂಚನಗಿರಿಗೆ ಕಳುಹಿಸಿ ಕೊಡಲಾಗಿದೆ.

ಟಾಟಾ ಎಸ್ ಚಾಲಕ ಬಾಗಲಕೋಟೆ ಮೂಲದ ಪರಸಪ್ಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ: ಅಣ್ಣೇಗೌಡ ಹಾಗೂ ಇನ್ನಿತ್ತರರು ಹಾಸನದಿಂದ ಬೆಂಗಳೂರು ಕಡೆಗೆ ಹೊಗುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ತಾಲೂಕಿನ ಕಾಮತ್ ಹೋಟೆಲ್ ಕಡೆಗೆ ಬರುತ್ತಿದ್ದ ಟಾಟಾ ಎಸ್ ಗೋಡ್ಸ್ ಗಾಡಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಟಾಟಾ ಎಸ್ ಅಡ್ಡ ಬಂದ ಪರಿಣಾಮ ಕಾರು ಟಾಟಾ ಎಸ್ ಗೆ ಡಿಕ್ಕಿ ಹೊಡೆದು ಈ ಅವಘಡ ಸಂಬವಿಸಿದೆ ಎನ್ನಲಾಗಿದೆ.

ವೃತ್ತ ನಿರೀಕ್ಷಕ ನವೀನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *