ಬೇಲೂರು : ರೋಟರಿ ಸಂಸ್ಥೆಯಲ್ಲಿ ಅಧಿಕಾರದ ಸ್ವಾರ್ಥಕ್ಕಿಂತ ಸೇವೆ ಮಾಡುವುದು ಮುಖ್ಯವಾಗಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಹೇಳಿದರು.

ಪಟ್ಟಣದ ವಿ.ಆರ್. ಕನ್ವೆನ್ಷನ್ ಹಾಲ್ ನಲ್ಲಿ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೋಟರಿ ಸಂಸ್ಥೆ ಸಮಾಜ ಸೇವೆಯಿಂದ ಮಾದರಿಯಾಗಿದೆ.

ದುರ್ಬಲ ಹಾಗೂ ಬಡ ವಿದಾರ್ಥಿಗಳ ಏಳಿಗೆಗಾಗಿ ರೋಟರಿ ಸಂಸ್ಥೆ ಪ್ರಾರಂಭದಿಂದಲೂ ಶ್ರಮಿಸುತ್ತಿದೆ ಮುಂದೆಯೂ ಇಂಥ ಒಳ್ಳೆಯ ಕಾರ್ಯಗಳಿಗೆ ಹೊಸ ಪದಾಧಿಕಾರಿಗಳು ಅದರಲ್ಲೂ ಮಹಿಳೆಯರು ಯುವಕರು ಶ್ರಮಿಸಬೇಕು. ರೋಟರಿ ಕ್ಲಬ್‌ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಮಾಜಮುಖೀ ಕಾರ್ಯದಲ್ಲಿ ನಿರಂತರವಾಗಿ ತೊಡಗುತ್ತಿದೆ.

ನಿಸ್ವಾರ್ಥ ಭಾವನೆಯಿಂದ ಸಂಘಟನೆಯಲ್ಲಿ ತೊಡಗಿದಲ್ಲಿ ನಿಜವಾಗಿಯೂ ಯಶಸ್ವಿ ಸಾಧ್ಯ. ಅದಕ್ಕೆ ವೇದಿಕೆಯಾಗಿ ರೋಟರಿ ಸಂಸ್ಥೆ ಇದ್ದು, ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.

ಜಿಲ್ಲಾ ಸಹಾಯಕ ಗವರ್ನರ್ ವಿನೋದ್ ಶೆಟ್ಟಿ ಮಾತನಾಡಿ ನಾವು ಬದುಕುವುದರ ಜತೆಗೆ ಸಮಾಜಕ್ಕಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ರೋಟರಿ ಕ್ಲಬ್‌ ಪರಿಣಾಮಕಾರಿಯಾದ ದೊಡ್ಡ ವೇದಿಕೆಯಾಗಿದೆ. ವಿಶ್ವದರ್ಜೆಯ ಗೌರವವನ್ನು ಹೊಂದಿರುವ ರೋಟರಿ ಕ್ಲಬ್ ನ ಸೇವಾಕಾರ್ಯಗಳು ಸಂಸ್ಥೆಯ ಏಳಿಗೆಗೆ ಬಹುಮುಖ್ಯ ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಅವರನ್ನು ಸನ್ಮಾಸಿ ಗೌರವಿಸಿದರು. ಇದೇ ವೇಳೆ ರೋಟರಿ ಕ್ಲಬ್ ಗೆ ನೂತನ ಸದಸ್ಯರಾಗಿ ಎಸ್.ಎಸ್.ನಾಗೇಂದ್ರ, ರಾಘವೇಂದ್ರ ಸೇರ್ಪಡೆಗೊಂಡರು.

ರೋಟರಿ ಕ್ಲಬ್ ಅಧ್ಯಕ್ಷ ಚಿದನ್, ಕಾರ್ಯದರ್ಶಿ ಎನ್. ಶಂಭುಗೌಡ, ಝೋನಲ್ ಲೆಫ್ಟಿನೆಂಟ್ ಕೆ.ಕೆ.ಸಂದೀಪ್, ಬೇಲೂರು ಕ್ಲಬ್ ನ ಟಿ.ಎಸ್.ಸಂದೇಶ್, ಎಸ್.ಗಣೇಶ್, ವೈ.ಡಿ.ಲೋಕೇಶ್, ಚೇತನ್ ಕುಮಾರ್, ಮುರಳಿ, ಬಿ.ಎಂ.ರಂಗನಾಥ್,ಡಿ.ಪಿ. ಶ್ರೀಧರ್, ಬಿ.ಬಿ.ಶಿವರಾಜು ಸೇರಿದಂತೆ ಸದಸ್ಯರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *