
ಇತ್ತೀಚೆಗೆ ಇಂಡೋನೇಷ್ಯಾ ದೇಶಕ್ಕೆ ತೆರಳಿ ತನ್ನ 1124 ನೇ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡಿ ಸಾಧನೆಯ ಹಾದಿಗೆ ವಿದೇಶದ ಸರ್ಕಾರದ ವತಿಯಿಂದ ಪ್ರಶಸ್ತಿ ಪಡೆದು ಬಂದ ಹಾಸನ ಜಿಲ್ಲೆಯ ಹೆಸರಾಂತ ಭರತನಾಟ್ಯ ಕಲಾವಿದೆ ರಾಜ್ಯ ಪ್ರಶಸ್ತಿ ವಿಜೇತ ಗಿನ್ನಿಸ್ ದಾಖಲೆ ಹಾಗೂ ವಂಡರ್ ಬುಕ್ ಆಫ್ ರೆಕಾರ್ಡ್ ಜೀನಿಯಸ್ ಬುಕ್ ಆಫ್ ರೆಕಾರ್ಡ್ ಮತ್ತು ಕರ್ನಾಟಕ ಬುಕ್ ಆಫ್ ರೆಕಾರ್ಡ್ ತನ್ನ ಹೆಸರನ್ನು ಬರೆದುಕೊಂಡು ರಾಜ್ಯ ರಾಷ್ಟ್ರ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ನೃತ್ಯವನ್ನು ಪ್ರದರ್ಶನ ನೀಡಿ ಚನ್ನರಾಯಪಟ್ಟಣ ಮತ್ತು ಹಾಸನ ಜಿಲ್ಲೆಯ ಹೆಸರನ್ನು ವಿದೇಶದಲ್ಲಿ ಹೇಳುವ ಮೂಲಕ
ಹೊರದೇಶದಲ್ಲಿನ ಜನರಿಗೆ ಭಾರತೀಯ ಸಂಸ್ಕೃತಿಯ ಕಲೆ ಭರತನಾಟ್ಯವನ್ನು ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆದು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿರುವ ಡಾ . ಸ್ವಾತಿ ರವರಿಗೆ ಅಭಿನಂದನೆಗಳನ್ನು ತಿಳಿಸಿ ಆಶೀರ್ವದಿಸುವ ಮೂಲಕ ಭಾರತಿ ಕಲೆಯನ್ನು ಪ್ರೋತ್ಸಾಹಿಸಿದ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮಿಜಿಯವರು
ಇಂಡೋನೇಷ್ಯಾ ಸರ್ಕಾರ ನೀಡಿದ ಪ್ರಶಸ್ತಿ ಫಲಕವನ್ನು ನೋಡಿ ಕಲಾವಿದೆಯನ್ನು ಪ್ರಶಂಸಿಸಿ ಶಾಲು ಹೋಗಿಸಿ ಅಭಿನಂದಿಸಿದರು.
