
ಹಾಸನ : ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶವ ಬೇಡಿಕೆ ಬಗ್ಗೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿಕೆ ವಿಚಾರವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದಲ್ಲದೇ ಜೊತೆಗೆ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕಿ ಒಳ ಹೋಗಲು ಯತ್ನಿಸುವ ವೇಳೆ ಮೊದಲೆ ಸಿದ್ಧವಾಗಿದ್ದ ಪೊಲೀಸರು ಬಂಧಿಸಿ ಪೊಲೀಸ್ ವಾಹನಕ್ಕೆ ಎಳೆದೊಯ್ಯುವ ವೇಳೆ ಅನೇಕ ಜನ ಬಿಜೆಪಿ ಕಾರ್ಯಕರ್ತರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ನಡೆದಿದೆ.
ಕಾಂಗ್ರೆಸ್ ಸಂಸದರ ಹೇಳಿಕೆ ಖಂಡಿಸಿ ಬಿಜೆಪಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಲು ಮೊದಲು ಜಿಲ್ಲಾಧಿಕಾರಿಗಳ ಕಛೇರಿ ಆವರಣಕ್ಕೆ ಬಂದು ಕಾಂಗ್ರೆಸ್ ಪಕ್ಷದ ಸಂಸದ ಡಿ.ಕೆ. ಸುರೇಶ್ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಉಪವಿಭಾಧಿಕಾರಿ ಮಾರುತಿ ಅವರಿಗೆ ಮನವಿ ಸಲ್ಲಿಸಿದರು.
ನಂತರ ಅಲ್ಲಿಂದ ಬಿ.ಎಂ. ರಸ್ತೆ ಮೂಲಕ ಜಿಲ್ಲಾ ಕಾಂಗ್ರೆಸ್ ಕಛೇರಿ ಎದುರು ಮೆರವಣಿಗೆ ಮೂಲಕ ಬರುವ ಮೊದಲೇ ಪೊಲೀಸರು ಕಾಂಗ್ರೆಸ್ ಕಛೇರಿಯ ಮುಖ್ಯಧ್ವಾರವನ್ನು ಬಂದ್ ಮಾಡಿದಲ್ಲದೇ ಪೊಲೀಸ್ ಬ್ಯಾರಿಕೇಡ್ ನಲ್ಲಿ ತಡೆ ಮಾಡಿದ್ದರು. ಇದನ್ನು ಲೆಕ್ಕಿಸದೇ ಬಿಜೆಪಿ ಕಾರ್ಯಕರ್ತರು ಒಳ ನುಗ್ಗಲು ಯತ್ನಿಸಿದ ವೇಳೆ ಕೆಲ ಸಮಯ ಪೊಲೀಸರೊಂದಿಗೆ ನೂಕಾಡಬೇಕಾಯಿತು.
ನಂತರದಲ್ಲಿ ಪೊಲೀಸರು ಬಿಜೆಪಿಯ ಒಬ್ಬೊಬ್ಬರೇ ಕಾರ್ಯಕರ್ತರನ್ನು ಎಳೆದೊಯ್ದು ತಮ್ಮ ಪೊಲೀಸ್ ವಾಹನಕ್ಕೆ ತುಂಬಿಕೊಂಡರು.
ಸುಮಾರು ೨೦ಕ್ಕೂ ಹೆಚ್ಚು ಜನ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಪೊಲೀಸ್ ವಸತಿಗೃಕ್ಕೆ ಕರೆದೊಯ್ದರು. ಬಲವಂತವಾಗಿ ಪೊಲೀಸರು ಎಳೆದೊಯ್ದಿದ್ದರಿಂದ ಅನೇಕ ಬಿಜೆಪಿ ಕಾರ್ಯಕರ್ತರ ಕುತ್ತಿಗೆ, ಭುಜ, ಕೈ ಇತರೆ ಭಾಗಗಳಿಗೆ ಸಣ್ಣ ಪುಟ್ಟ ಗಾಯಗಳಾದವು. ಪೊಲೀಸರು ಎಳೆದೊಯ್ಯುವಾಗ ಈ ವೇಳೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಅನೂಪ್ ಅವರು ಕೈಗೆ ಹಾಕಿದ್ದ ೩೫ ಗ್ರಾಂ ಚಿನ್ನದ ಚೈನ್ ಕಾಣೆಯಾಯಿತು.
ನಂತರದಲ್ಲಿ ಪ್ರತಿಭಟನೆ ನಡೆದ ಜಾಗದಲ್ಲಿ ಕೆಲ ಸಮಯ ಹುಡುಕಿದರೂ ಸಿಗಲಿಲ್ಲ. ಸಲ್ಪ ಸಮಯದಕ್ಕೆ ಪೊಲೀಸ್ ವಾಹನದಲ್ಲಿ ಕೆಲಗೆ ಬಿದ್ದಿರುವುದು ತಿಳಿದು ಬಂದಿತು. ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಹಿಡಿದು ಎಳೆದುಕೊಂಡು ಹೋಗುವಾಗ ಕೆಳಗೆ ಬಿದ್ದಿದೆ ಎಂದು ಹೇಳಲಾಗಿದೆ.
ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಹರ್ಷಿತ್ ಮಾತನಾಡಿ, ಸಂಸದರಾದ ಡಿ.ಕೆ. ಸುರೇಶ್ ರವರು ಇತ್ತಿಚಿಗೆ ಕೊಟಂತಹ ಹೇಳಿಕೆ ದೇಶವನ್ನು ಉತ್ತರ ಮತ್ತು ದಕ್ಷಿಣ ಭಾರತವಾಗಿ ವಿಭಜಿಸಬೇಕಾಗುತ್ತದೆ ಎಂದು ಹೇಳಿರುವ ಹೇಳಿಕೆ ದೇಶದ ಐಕ್ಯತೆಯನ್ನು ಹೊಡೆಯುವಂತಹ ಕೆಲಸವನ್ನು ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಒಂದು ಐಡಿಯಾಲಜಿ ಹೇಗಿದೆ ಎಂದರೇ ಅವರಿಗೆ ಹಣ ಸಿಗಲಿಲ್ಲ ಹಾಗೂ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಆಗಲಿಲ್ಲ ಎಂದು ಹೇಳಿ ದೇಶವನ್ನು ಹೊಡೆಯುತ್ತಾರೆ ಮತ್ತು ಸಮಾಜವನ್ನು ಹೊಡೆಯುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಅದೆ ಮನಸ್ಥಿತಿಯಲ್ಲಿ ಜವಬ್ಧಾರಿಯುತ ಸಂಸದರಾಗಿ ಡಿ.ಕೆ. ಸುರೇಶ್ ಅವರು ಇಂತಹ ಹೇಳಿಕೆ ಕೊಟ್ಟಿದ್ದಾರೆ. ಕೇಂದ್ರದಿಂದ ನರೇಂದ್ರ ಮೋದಿಯವರು ಕೊಟ್ಟಿರುವ ಅನುಧಾನದಲ್ಲಿ ತಾರತಮ್ಯ ಆಗಿದೆ ಎಂದು ಹೇಳಿರುವುದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.
ಕೇಂದ್ರದಿಂದ ರಸ್ತೆ, ರೈಲ್ಷೆ ಕಾಮಗಾರಿ ಇರಬಹುದು ವಿಮಾನ ನಿಲ್ದಾಣದ ಅಭಿವೃದ್ಧಿ ಸೇರಿದಂತೆ ಯಾವುದು ತಾರತಮ್ಯವಾಗಿರುವುದಿಲ್ಲ. ಇದರ ವಿರುದ್ಧ ದೇಶವನ್ನು ಹೊಡೆಯುವ ಹೇಳಿಕೆ ನೀಡಿರುವುದಕ್ಕೆ ಬಿಜೆಪಿ ಯುವ ಮೋರ್ಚಾದಿಂದ ತೀವ್ರತರವಾಗಿ ಖಂಡಿಸುತ್ತೇವೆ.
ಮುಂದಿನ ದಿನಗಳಲ್ಲಿ ಇದರ ವಿರುದ್ಧ ಬಿಜೆಪಿ ಇನ್ನಷ್ಟು ಹೋರಾಟ ಮಾಡಲಿದೆ. ಇಂತಹ ಹೇಳಿಕೆ ನೀಡಿರುವ ಸಂಸದರನ್ನು ತಕ್ಷಣ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅನೂಪ್, ಮುಖಂಡರಾದ ರಾಕೇಶ್, ರಘು, ಗಿರೀಶ್, ರಾಜೇಶ್, ಮುರುಳೀ, ವಿನೋದ್ ಕುಟ್ಟಿ, ತೇಜಸ್ಸು, ವಿಜಯಲಕ್ಷ್ಮಿ, ರತ್ನ ಪ್ರಕಾಶ್, ಶೋಭಾ ಇತರರು ಉಪಸ್ಥಿತರಿದ್ದರು.




