ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉತ್ತಮ ಸಂಘಟನೆ ಪ್ರಶಸ್ತಿಯನ್ನು ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಮಟ್ಟದ ಪತ್ರಕರ್ತರ ಸಮಾವೇಶದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಶಸ್ತಿ ಪ್ರಧಾನ ಮಾಡಿದ ಕರ್ನಾಟಕ ಸರ್ಕಾರದ ವಿಧಾನಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ,

ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ್ ತಗಡೂರು, ರಾಜ್ಯ ಸಮಿತಿಯ ಸದಸ್ಯರಾದ ಮದನಗೌಡ, ರವಿ ನಾಕಲುಗೊಡು, ಚನ್ನರಾಯಪಟ್ಟಣ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿದ್ದರಾಜು, ಪ್ರಧಾನ ಕಾರ್ಯದರ್ಶಿಗಳಾದ ನಟೇಶ್, ಉಪಾಧ್ಯಕ್ಷರಾದ ಬಿ ಸಿ ಚೆನ್ನೇಗೌಡ, ಜಿಲ್ಲಾ ಪ್ರತಿನಿಧಿ ನಂದನ್, ಮಾಜಿ ಅಧ್ಯಕ್ಷರಾದ ನಾಗೇಶ್ ಮಾಜಿ ಉಪಾಧ್ಯಕ್ಷರಾದ ಟಿ ಜಿ ಹೇಮ್ ಕುಮಾರ್, ತಾಲೂಕು ಪತ್ರಕರ್ತರ ಸಂಘದ ನಿರ್ದೇಶಕರಾದ ಪಾಂಡುರಂಗ, ಜಯಕುಮಾರ್, ರೋಹಿತ್, ಶ್ರೀನಿವಾಸ್, ನಾಗೇಂದ್ರ, ಪುಟ್ಟರಾಜು, ಪತ್ರಕರ್ತ ಐ ಕೆ ಮಂಜುನಾಥ್, ಗೋವಿಂದ್, ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *