ಬೇಲೂರು : ಶಿಲ್ಪಕಲೆಗಳ ತವರು ಬೇಲೂರು-ಹಳೇಬೀಡು ನಡುವಿನ ಹೊಯ್ಸಳರ ಹೆಬ್ಬಾಗಿಲ ಎಂದೇ ಖ್ಯಾತಿಯಾದ ಹೆಬ್ಬಾಳು ಗ್ರಾಮದ ಶ್ರೀ ಚನ್ನಬಸವೇಶ್ವರ ಯುವಕ ಸಂಘದಿಂದ ಹಮ್ಮಿಕೊಂಡ ಎರಡನೇ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಎರಡು ದಿನಗಳ ಕಾಲ ನಡೆಸಿ ವಿಜೇತರಾದವರಿಗೆ ನಗದು ಮತ್ತು ಪಾರಿತೋಷಕ ಬಹುಮಾನ ನೀಡಲಾಯಿತು.

ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಉದ್ಘಾಟನೆ ನಡೆಸಿ ಮಾತನಾಡಿದ ಶಾಸಕ ಹೆಚ್.ಕೆ.ಸುರೇಶ್. ಅಧುನಿಕ ಕಾಲಘಟ್ಟದಲ್ಲಿ ದೇಶಿಯ ಪರಂಪರೆ ನಶಿಸುತ್ತಿರುವ ದಿನದಂದು ಹೆಬ್ಬಾಳಿನ ಯುವಕರು ದೇಶಿಯ ಜಾನುವಾರುಗಳನ್ನು ಸಂರಕ್ಷಣೆ ಹಾಗೂ ಉಳಿಸಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ರಾಜ್ಯದ ವಿವಿಧ ಕಡೆಗಳಲ್ಲಿ ಈಗಾಗಲೇ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ರಾಜ್ಯದ ವಿವಿಧಡೆಗಳಲ್ಲಿ ಅತ್ಯಂತ ಅರ್ಥಪೂರ್ಣವಾಗಿ ನಡೆಸಲಾಗುತ್ತಿದೆ. ಆದರೆ ದೇಶಿಯ ಜಾನುವಾರುಗಳಿಗೆ ಹಿಂಸೆಯನ್ನು ನೀಡಬಾರದು ಎಂದ ಅವರು ಮನುಷ್ಯನಿಗೆ ಇತ್ತೀಚಿನ ದಿನದಲ್ಲಿ ಅಧುನಿಕ ರೋಗಗಳು ಹೆಚ್ಚಾಗುತ್ತಾ ಅಲ್ಪ ದಿನದಲ್ಲಿ ಸಾವನ್ನು ಕಾಣುತ್ತಿರುವ ಹಿನ್ನಲೆಯಲ್ಲಿ ದೇಶಿಯ ಪರಂಪರೆಯನ್ನು ಉಳಿಸಬೇಕಿದೆ.

ದೇಶದಲ್ಲಿ ಏನಾದರೂ ಸರಿ ಹೊಲನ್ನು ಬಿತ್ತಿ ಬೆಳೆಯುವ ರೈತಾಪಿ ವರ್ಗವನ್ನು ಉಳಿಸುವ ಕೆಲಸ ನಡೆಸಬೇಕು ಇದಕ್ಕೆ ಪ್ರಮುಖವಾಗಿ ಜಾನುವಾರುಗಳೇ ಮುಖ್ಯವಾಗಿದೆ. ವಿಶೇಷವಾಗಿ ರೈತರು ಕೃಷಿಗೆ ಯಂತ್ರಗಳ ಬಳಕೆ ಹೆಚ್ಚಾಗುತ್ತಿರುವ ವೇಳೆಯಲ್ಲಿ ಎತ್ತುಗಳ ಬೇಸಾಯಕ್ಕೆ ಒತ್ತು ನೀಡಬೇಕು ಎಂದು ಮನವಿ ಮಾಡಿದ ಅವರು ಹೆಬ್ಬಾಳು ಗ್ರಾಮ ಇಡೀ ತಾಲ್ಲೂಕಿನಲ್ಲಿ ತನ್ನದೆಯಾದ ಛಾಪು ಮೂಡಿಸಿದ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಬದ್ಧವಾಗಿರುವ ತಿಳಿಸಿದರು.

ಸದ್ಯ ಹೆಬ್ಬಾಳು ಏತ ನೀರಾವರಿಗೆ ಪ್ರಾಸ್ತಾಪನೆ ಸಲ್ಲಸಿದೆ ಎಂದರು.

ಬಿಜೆಪಿ ಮುಖಂಡ ಹೆಬ್ಬಾಳು ಉಮಾಶಂಕರ್ ಮಾತನಾಡಿ, ಹೆಬ್ಬಾಳು ಗ್ರಾಮದ ಚನ್ನಬಸವೇಶ್ವರ ಯುವಕ ಸಂಘದವರು ಕಳೆದ ಎರಡು ವರ್ಷದಿಂದ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿದ್ದಾರೆ.

ರಾಜ್ಯದ ಹಾಸನ,ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ,ಮಂಡ್ಯ, ಚಾಮರಾಜನಗರ,ಮೈಸೂರು, ಬೆಂಗಳೂರು ಗ್ರಾಮಾಂತರ,ಹಾವೇರಿ, ಬಾಗಲಕೋಟೆ ಇನ್ನು ಮುಂತಾದ ಕಡೆಗಳಿಂದ ೭೦ ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಪ್ರಥಮ, ದ್ವಿತೀಯ, ತೃತೀಯ, ನಾಲ್ಕನೇ ಬಹುಮಾನ ಮತ್ತು ಟ್ರೋಪಿ ನೀಡಲಾಗಿದೆ ಎಂದು ತಿಳಿಸಿದರು.

ಪ್ರಥಮ ಬಹುಮಾನ ಶಾಸಕ ಹುಲ್ಲಹಳ್ಳಿ ಸುರೇಶ್, ದ್ವಿತೀಯ ಹೆಬ್ಬಾಳು ಉಮಾಶಂಕರ್, ತೃತೀಯ ವಸಂತಶೇಖರ್, ನಾಲ್ಕನೇ ಬಹುಮಾನ ಹೆಬ್ಬಾಳು ಉಮಾಶಂಕರ್, ಪ್ರಮೋದ್ ನಗದು ಬಹುಮಾನ ನೀಡಿದರು.

ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಸ್ಟೋನ್ ಕ್ರಷರ್ ಮಾಲೀಕ ವಸಂತಶೇಖರ್, ಗ್ರಾಮ ಪಂಚಾಯಿತಿ ಸದಸ್ಯರಾದ ಗಿರೀಶ್, ಹಾಲೇಗೌಡ, ಹೆಚ್.ಆರ್.ಯೋಗೀಶ್, ಪುಪ್ಪೇಗೌಡ, ಮಲ್ಲನಹಳ್ಳಿ ಪ್ರಮೋದ್,ಹರ್ಷ, ದರ್ಶನ, ಸಚ್ಚಿನ್, ಪುನೀತ್, ಅನಿ, ಶಶಿ, ರವಿ, ರುದ್ರೇಶ್, ಗಣೇಶ್, ಪುನೀತ್, ಪಾಪ, ಚೇತನ್ ಮುಂತಾದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *