
ಆಲೂರು : ಆಲೂರಿನ ಹಂತನಮನೆ ಗ್ರಾಮಕ್ಕೆ ಭಾನುವಾರ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ಮುಖಂಡರು ಭೇಟಿ ನೀಡಿ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು
ನಂತರ ಮಾಧ್ಯಮದವರೊಂದಿಗೆ ಮಾತಾನಾಡಿದವರು ಆಲೂರು ತಾಲ್ಲೂಕಿನಲ್ಲಿ ರೈಲ್ವೆ ನಿಲುಗಡೆಗೆ ಸುಮಾರು ನಾಲ್ಕೈದು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು ಈ ಹೋರಾಟಕ್ಕೆ ರೇವಣ್ಣ ಶ್ರಮ ಹೆಚ್ಚಿದೆ ಸತತವಾಗಿ ನಾಲ್ಕು ವರ್ಷಗಳಿಂದ ರೇವಣ್ಣ ರವರು ಹಾಗೂ ನಾನು ರೈಲ್ವೆ ಅಧಿಕಾರಿಗಳಿಗೆ ಹಲವು ಪತ್ರಗಳನ್ನು ಬರೆದು ಅವರನ್ನು ಭೇಟಿ ಮಾಡಿ ಗಂಭೀರವಾಗಿ ಸುದೀರ್ಘ ಚರ್ಚೆ ನಡೆಸಿ ಈಗ ಆಲೂರಿನಲ್ಲಿ ರೈಲ್ವೆ ನಿಲುಗಡೆಗೆ ಸರ್ಕಾರದಿಂದ ಸೂಚನೆ ಸಿಕ್ಕಿದೆ
ಮುಂದೆ ತಾಲ್ಲೂಕಿನ ಜನರಿಗೆ ಅನುಕೂಲವಾಗುವಂತೆ ಬೆಂಗಳೂರು ಮಂಗಳೂರು ನಡುವೆ ಪ್ರತಿದಿನ ಸಂಚಾರಿಸುವ ರೈಲು ಕೆಲ ತಾಂತ್ರಿಕ ತೊಂದರೆಗಳಿಂದ ನಿಲ್ಲಲು ಸಾಧ್ಯವಾಗುತ್ತಿಲ್ಲ ಇಲ್ಲಿಯ ಕೆಲ ತೊಂದರೆಗಳನ್ನು ಪರಿಶೀಲಿಸಿ ಸದ್ಯದಲ್ಲೇ ಆಲೂರು ರೈಲ್ವೆ ನಿಲ್ದಾಣದಲ್ಲಿ ನಿಲ್ಲುವನಂತ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.
ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಫೆ,7ರಂದು ಆಲೂರು ನಿಲ್ದಾಣದಲ್ಲಿ ರೈಲುಗಳು ನಿಲುಗಡೆಯಾಗುತ್ತದೆಯೆಂಬ ವೈರಲ್ ಆಗಿರುವ ಸುಳ್ಳು ಸುದ್ದಿಯನ್ನು ನಂಬಬೇಡಿ ಒಬ್ಬ ಶಾಸಕ ಹಾಗೂ ಬೇರೆಯವರಿಂದ ಆಗುವ ಕೆಲಸ ಇದಲ್ಲ ಒಬ್ಬ ಸಂಸದನಿಗೆ ಈ ಕೆಲಸ ಮಾಡಿಸಲು ಕಷ್ಟದ ಸಂಗತಿ ಹಾಗೂ ಅಸಾಧ್ಯ ಅಂತದರಲ್ಲಿ ಯಾರು ಮಾಡಿದ ಕೆಲಸಕ್ಕೆ ನಾನು ಮಾಡಿದೆಯೆಂದು ಹೇಳಿಕೊಂಡು ಓಡಾಡುವವರಿಗೆ ಖಡಕ್ ಉತ್ತರ ನೀಡಿದರು.
ಅದಲ್ಲದೆ ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ರೈಲ್ವೆ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ ಆಲೂರಿನಲ್ಲಿ ರೈಲ್ವೆ ನಿಲುಗಡೆಗೆ ಸತತವಾಗಿ ಪ್ರಯತ್ನಪಟ್ಟವರು ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣರವರು ಬೇರೆ ಯಾರು ಅಲ್ಲವೆಂದು ರೈಲ್ವೆ ಅಧಿಕಾರಿಯವರು ಮಾಧ್ಯಮದವರ ಪ್ರಶ್ನೆಗೆ ನೇರವಾಗಿ ಉತ್ತರ ನೀಡಿದರು.
ಬೆಂಗಳೂರು -ಮಂಗಳೂರು ನಡುವೆ ಸಂಚಾರಿಸುವ ರೈಲು ನಿಲ್ಲಲು ಪ್ರಸ್ತಾವನೆ ಸಲ್ಲಿಸಿದ್ದೇನೆ ಸಕಾರಾತ್ಮಕವಾಗಿ ರೈಲ್ವೆ ಅಧಿಕಾರಿಗಳು ನಮ್ಮ ಮಾತಿಗೆ ಸ್ಪಂದಿಸಿದ್ದರೆ ತಾಂತ್ರಿಕ ತೊಂದರೆಗಳು ಮುಗಿದ ನಂತರ ರೈಲು ನಿಲುಗಡೆಯಾಗುತ್ತದೆಯೆಂದು ಸಂಸದ ಪ್ರಜ್ವಲ್ ರೇವಣ್ಣ ಭರವಸೆ ನೀಡಿದರು.
ರೈಲ್ವೆ ನಿಲುಗಡೆಗೆ ಇನ್ನೂ ಕೆಲದಿನಗಳ ಕಾಲವಕಾಶಬೇಕಿದ್ದು ರೈಲ್ವೆ ನಿಲುಗಡೆಯಾಗುವ ಮೊದಲ ದಿನ ನಾನು ಹಾಗೂ ರೇವಣ್ಣ ಮತ್ತು ತಾಲ್ಲೂಕಿನ ಪ್ರಗತಿಪರ ಸಂಘಟನೆಯವರು ಹಾಗೂ ತಾಲ್ಲೂಕಿನ ಜನರನ್ನು ಕರೆಸಿ ಚಾಲನೆ ನೀಡುತ್ತೇನೆ, ಇದರ ಸಂಪೂರ್ಣ ಶ್ರಮ ಹೆಚ್, ಡಿ ದೇವೇಗೌಡ ಹಾಗೂ ರೇವಣ್ಣ ಮತ್ತು ರೈಲ್ವೆ ಇಲಾಖೆ ಎಂಜಿನಿಯರ್ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದರು
ಹಾಸನ ಯಶವಂತಪುರಕ್ಕೆ ಸಂಚಾರಿಸುವ ರೈಲನ್ನು ಸಕಲೇಶಪುರದವರೆಗೆ ವಿಸ್ತರಿಸುವ ಮನವಿಗೆ ಉತ್ತರಿಸಿದ ಸಂಸದರು ಮಾದಲು ಬೆಂಗಳೂರು -ಮಂಗಳೂರು ರೈಲು ನಿಲುಗಡೆಯಾಗಲಿ ನಂತರದ ದಿನಗಳಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಇಲ್ಲ ರೈಲುಗಳು ನಿಲುಗಡೆಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ, ಎಸ್ ಮಂಜೇಗೌಡ ನಟರಾಜು ನಾಕಲಗೂಡು,ಮೂರ್ತಿ,ಜಯಪಾಲ ಚಂದ್ರುಶೇಖರ್ ಹಾಗೂ ಊರಿನ ಗ್ರಾಮಸ್ತರಿದ್ದರು
