ಹಾಸನ: ನಗರದ ಹೊರ ವಲಯದಲ್ಲಿರುವ ತಾಲೂಕಿನ ನಾಗಾತವಳ್ಳಿ ಗ್ರಾಮದ ಸರ್ವೆ ನಂಬರ್ ೫೪ ರಲ್ಲಿನ ೨ ಎಕರೆ ಗೋಮಾಳ ಜಾಗ ಇಲ್ಲಿನ ಗ್ರಾಮದಲ್ಲಿರುವ ಗೋವುಗಳ ಮೇವಿಗೆ ಇರುವ ಜಾಗವಾಗಿದ್ದು, ಆದರೇ ಪುಷ್ಪಗಿರಿ ವೇರ್ ಹೌಸ್ ಮಾಲೀಕರು ಅಕ್ರಮವಾಗಿ ಪ್ರವೇಶಿಸುವ ಮೂಲಕ ನಿವೇಶನ ಮಾಡಲು ಹೊರಟಿರುವ ಕಾಮಗಾರಿಯನ್ನು ತಡೆದು ಆಕ್ರೋಶವ್ಯಕ್ತಪಡಿಸಿದಲ್ಲದೇ ಸ್ಥಳದಲ್ಲೆ ಪ್ರತಿಭಟನೆ ಕೂಡ ಮಾಡಿದರು.

ಸರ್ವೆ ನಂಬರ್ ೫೪ ರ ಪೈಕಿ ಎರಡು ಎಕರೆ ಜಮೀನು ಕಳೆದ ೨೫ ವರ್ಷಗಳಿಂದ ಗ್ರಾಮದ ಜನ ಜಾನುವಾರುಗಳ ಅನುಕೂಲಕ್ಕೆ ಮೀಸಲಿಡಲಾಗಿತ್ತು. ಆದರೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳು ಹಣವಂತರ ಜೊತೆ ಶಾಮೀಲಾಗಿ ಅಕ್ರಮವಾಗಿ ಪುಷ್ಪಗಿರಿ ವೇರ್ ಹೌಸ್ ಮಾಲೀಕರಿಗೆ ಮಂಜೂರು ಮಾಡಿದ್ದಾರೆ ಎಂದು ಗ್ರಾಮಸ್ಥರ ದೂರಾಗಿದೆ.

ಈ ವೇಳೆ ಎರಡು ಕಡೆ ವಾಗ್ವಾದ ಉಂಟಾದಗ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಬಂದು ಶಾಂತಿ ಕಾಪಾಡಲು ಮುಂದಾದರು.

ಗ್ರಾಮದ ಸುನಿಲ್ ಮಾತನಾಡುತ್ತಾ, ಗ್ರಾಮದ ಸಂಪೂರ್ಣ ಈಗಾಲೇ ಜಾಗ ಕೈಗಾರಿಕಾ ಪ್ರದೇಶಕ್ಕೆ ಒತ್ತುವರಿಯಾಗಿದೆ. ಗ್ರಾಮದ ಅನುಕೂಲಕ್ಕೆ ಇರುವ ಕೇವಲ ಎರಡು ಎಕರೆ ಗೋಮಾಳ ಜಾಗ ಇಂದಿಗೂ ಪಹಣಿಯಲ್ಲಿ ಗೋಮಾಳ ಜಾಗ ಎಂದು ಬರುತ್ತಿದೆ. ಆದರೆ ಕೆಲವರು ಬಂದು ಈ ಜಾಗ ನಮಗೆ ಸೇರಿದೆ ಎಂದು ಅಕ್ರಮ ಪ್ರವೇಶ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಜಾಗವನ್ನು ಖಾಸಗಿಯವರಿಗೆ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ತರು ಕಾಮಗಾರಿ ಮಾಡಲು ಬಂದ ಜೆಸಿಬಿ ತಡೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಈ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಜಾಗವನ್ನು ಗ್ರಾಮಸ್ಥರ ಅನುಕೂಲಕ್ಕೆ ಬಿಟ್ಟು ಕೊಡಬೇಕು ಎಂದು ಸಂಭಂಧಿಸಿದ ಇಲಾಖೆ ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ. ಅಧಿಕಾರಿಗಳು ಜಾಗ ಗೋಮಾಳ ಜಾಗವಾಗಿಯೆ ಉಳಿದಿದ್ದು, ಗ್ರಾಮಸ್ಥರು ಭಯ ಪಡುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದ್ದಾರೆ. ಆದರೆ ಪುಷ್ಪಗಿರಿ ವೇರ್ ಹೌಸ್ ನ ಜಗದೀಶ್ ಎಂಬುವವರು ಕೆಲ ಪುಂಡರನ್ನು ಕರೆದುಕೊಂಡು ಬಂದು ಕಾಮಗಾರಿಗೆ ಮುಂದಾದರು.

ನ್ಯಾಯಸಮ್ಮತವಾಗಿ ಕೆಲಸ ಮಾಡುವುದಾದರೆ ಅಧಿಕಾರಿಗಳ ಹಾಗೂ ಪೊಲೀಸರ ಸಮ್ಮುಖದಲ್ಲಿ ಕೆಲಸ ಮಾಡಲಿ ಅದನ್ನು ಬಿಟ್ಟು ಅತಿಕ್ರಮ ಪ್ರವೇಶ ಮಾಡಿ ಗ್ರಾಮದ ಜನರ ಅನುಕೂಲಕ್ಕೆ ಇರುವ ಸ್ವಲ್ಪ ಜಾಗವನ್ನು ಲಪಟಾಯಿಸಲು ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಗ್ರಾಮದ ರೇಣುಕಮ್ಮ ಮಾತನಾಡಿ, ಇಡೀ ಗ್ರಾಮಕ್ಕೆ ದನಕರುಗಳ ಮೇವಿಗೆ ಇದೊಂದೇ ಜಾಗ ಆಶ್ರಯವಾಗಿ ಆದುದರಿಂದ ಯಾವುದೇ ಕಾರಣಕ್ಕೂ ಈ ಜಾಗವನ್ನು ಬಿಟ್ಟು ಕೊಡುವುದಿಲ್ಲ ಎಂದರು.

ಈಗಾಗಲೇ ಕಾಮಗಾರಿ ನಿಲ್ಲಿಸಲು ಬಂದಾಗ ನಮ್ಮ ಮೇಲೆ ಕೆಲ ಕಿಡಿಗೇಡಿಗಳು ನಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನ ಮಾಡಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಹಾಗೂ ಸಂಭಂದಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ನಮ್ಮ ಸಮಸ್ಯೆ ಬಗೆ ಹರಿಸಬೇಕು ನಮ್ಮ ಹೋರಾಟಕ್ಕೂ ಮೀರಿ ಕಾಮಗಾರಿಗೆ ಮುಂದಾದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದರು.

ಇದೆ ಸಂದರ್ಭದಲ್ಲಿ ಗ್ರಾಮಸ್ಥರಾದ ಪ್ರದೀಪ್, ಶರತ್, ರಿಕಿ, ಕೆಂಪಣ್ಣ, ಪುಟ್ಟರಾಜು, ವಿನಿ, ರವಿ, ಸತೀಶ್, ಸರೋಜಮ್ಮ, ಯಶೋಧಮ್ಮ, ಪಾಪಕ್ಕ, ರತ್ನಮ್ಮ, ಜವರಮ್ಮ, ಮಂಜುನಾಥ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *