
ಹಾಸನ: ಎರಡು ಜನ ಅಪರಿಸಿತರು ಮನೆಗೆ ನುಗ್ಗಿ ಕೈಲಿದ್ದ ಪಿಸ್ತೂಲ್ ನಿಂದ ಮನೆಯ ಮೇಲ್ಛಾವಣಿಗೆ ಗುಂಡು ಹಾರಿಸಿ ನಂತರ ಒಳಗಿದ್ದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾದ ಪ್ರಕರಣ ಬೇಲೂರು ತಾಲೂಕಿನಲ್ಲಿ ನಡೆದು ತನಿಖೆ ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ತಿಳಿಸಿದರು.
ಕಳೆದ ಮೂರು ದಿನಗಳ ಹಿಂದೆ ಬೇಲೂರು ತಾಲ್ಲೂಕಿನ ಕಸಬಾ ಹೋಬಳಿ ಮುದಿಗೆರೆ ಗ್ರಾಮದ ನಿವಾಸಿಗಳಾದ ರವಿ ಮತ್ತು ಪತ್ನಿ ಶೃತಿ ಮನೆಗೆ ಇಬ್ಬರು ಮುಸುಕು ದಾರಿಗಳು ಏಕಏಕಿ ನುಗ್ಗಿದ್ದು, ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ.
ಈ ವೇಳೆ ಅತ್ತೆ ಚಂದ್ರಮ್ಮ ಅವರ ಎರಡು ಓಲೆ , ಮಾಂಗಲ್ಯ ಸರ ಕಿತ್ತುಕೊಂಡಿರುವ ಆರೋಪಿಗಳು ಗುಂಡು ಹಾರಿಸಿದ್ದು, ಅಲ್ಲೆ ಇದ್ದ ಮಕ್ಕಳು ಹಾಗೂ ಇತರರನ್ನು ರೂಮಿನಲ್ಲಿ ಕೂಡು ಹಾಕಿ ಹೊರಹೋಗಿದ್ದಾರೆ.
ನಂತರ ಮನೆಯ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಶೃತಿ ಅವರ ಪತಿ ರವಿ ಮನೆಯ ಬಳಿ ಬಂದಾಗಲು ಅಪರಿಚಿತರ ಬಳಿ ಪಿಸ್ತೂಲ್ ಇರುವುದನ್ನು ಮನೆ ಮಾಲೀಕ ರವಿ ಗಮನಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಆರೋಪಿಗಳು ೨೦ ರಿಂದ ೨೫ ವರ್ಷದವರಾಗಿದ್ದು, ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್, ತೂಳು ಇಲ್ಲದ ಜರ್ಕೀನ್ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೊಟ್ಟ ದೂರಿನ ಮೇರೆಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿ ಮುಂದಿನ ತನಿಖೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು.
ಈ ಭಾಗಗಳಲ್ಲಿ ಹೆಚ್ಚಾಗಿ ಒಚಿಟಿ ಮನೆಗಳಿದ್ದು, ಈ ಪ್ರಕರಣದಿಂದ ಜನತೆ ಬಿಚ್ಚಿ ಬಿದ್ದುದ್ದು, ಜನರಲ್ಲಿ ಧೈರ್ಯ ತುಂಬಲು ಈ ಗ್ರಾಮದ ಸುತ್ತ ಮುತ್ತ ೧೧೨ ಹಾಗೂ ಗಸ್ತು ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
