ಆಲೂರು : ಆಲೂರು ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ರೈಲ್ವೆ ನಿಲುಗಡೆ ಕನಸು ಇಂದು ನನಸಾಗಿದೆ ಎರಡು ದಶಕಗಳ ನಂತರ ರೈಲು ಮೊದಲ ಬಾರಿಗೆ ತಾಲ್ಲೂಕಿನಲ್ಲಿ ನಿಲುಗಡೆಯಾಗಿದ್ದು ಹಲವು ಸಂಘ ಸಂಘಟನೆಗಳು ಹಾಗೂ ಜೆಡಿಎಸ್ ಮುಖಂಡರು ಸಿಹಿಹಂಚಿ ಸಂಭ್ರಮವನ್ನು ಆಚರಿಸಿದರು.

ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಜನರು ಹರ್ಷ ವ್ಯಕ್ತಪಡಿಸಿದರು.

ಈ ರೈಲಿನ ನಿಲುಗಡೆಗಾಗಿ ಬಹಳ ದಿನಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು . ನಿಲುಗಡೆಯ ಕುರಿತು ಗ್ರಾಮಸ್ಥರು ಹಾಗೂ ಸಂಘ ಸಂಘಟನೆಗಳ ಹೋರಾಟಗಾರರು ಹರ್ಷ ವ್ಯಕ್ತಪಡಿಸಿ ತಾಲ್ಲೂಕಿನಲ್ಲಿ ನಿಲುಗಡೆಗೆ ಶ್ರಮವಹಿಸಿದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜನಪ್ರತಿನಿಧಿಗಳು ಹಾಗೂ ಸಹಕರಿಸಿದ ಕೇಂದ್ರ ರೈಲ್ವೆ ಅಧಿಕಾರಿಗಳಿಗೆ ತಾಲ್ಲೂಕಿನ ಜನತೆ ಅಭಿನಂದನೆ ಸಲ್ಲಿಸಿದರು

ಸಂಸದ ಪ್ರಜ್ವಲ್ ರೇವಣ್ಣ ಮಾತಾನಾಡಿ ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ರೈಲ್ವೆ ನಿಲುಗಡೆಗೆ ಇಂದು ಫಲಸಿಕ್ಕಿದ್ದು ಈ ರೈಲ್ವೆ ನಿಲುಗಡೆ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದ ಮಾಜಿ ಪ್ರಧಾನಿ ಹೆಚ್,ಡಿ,ದೇವೆಗೌಡರು ಹಾಗೂ ರೇವಣ್ಣನವರಿಗೆ ಮತ್ತು ರೈಲ್ವೇ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ನಮ್ಮ ಮಾತಿಗೆ ಹಾಗೂ ಹೋರಾಟಕ್ಕೆ ಸ್ಪಂದಿಸಿ ರೈಲ್ವೆ ನಿಲುಗಡೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಹಾಸನದಿಂದ ಸುಮಾರು ಹದಿನೈದು ಕಿ. ಮೀ ಹಂತರದಲ್ಲಿರುವ ತಾಲ್ಲೂಕು ನಿಲ್ದಾಣಕ್ಕೆ ಇದೊಂದೇ ರೈಲು ನಿಲ್ದಾಣ ಆಗಿರುವುದರಿಂದ ಬೆಂಗಳೂರಿನಿಂದ ಹಾಗೂ ಬೇರೆ ಬೇರೆ ಜಿಲ್ಲೆ ಹಾಗೂ ತಾಲ್ಲೂಕು ಗ್ರಾಮಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಬೆಂಗಳೂರು, ಮಂಗಳೂರು , ಕಾರವಾರ , ಸುಬ್ರಮಣ್ಯ ಸೇರಿದಂತೆ ಪ್ರಮುಖ ಸ್ಥಳಗಳಿಗೆ ತೆರಳುವ ರೈಲುಗಳಿಗೆ ಇಲ್ಲಿ ನಿಲುಗಡೆ ಇಲ್ಲದ ಕಾರಣ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಆದಾಯ ಕಡಿಮೆ ಬರುತ್ತಿದೆ, ರೈಲ್ವೆಗೆ ನಷ್ಟ ಉಂಟಾಗುತ್ತಿದೆ ಎಂಬ ನೆಪದಲ್ಲಿ ರೈಲು ನಿಲುಗಡೆಯನ್ನು ಅಧಿಕಾರಿಗಳು ಏಕಾಏಕಿ ರದ್ದುಗೊಳಿಸಿದ್ದರು.

ಇದು ಇಲ್ಲಿನ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತ್ತು.ಸುಮಾರು ಎರಡು ವರ್ಷಗಳಿಂದ ಇದರ ಬಗ್ಗೆ ನನ್ನ ಗಮನಕ್ಕೆ ತಂದಿದ್ದು ನಾನು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತಾಲ್ಲೂಕಿನಲ್ಲಿ ರೈಲ್ವೆ ನಿಲುಗಡೆಗೆ ಸಂಪೂರ್ಣ ಹೋರಾಟನಡೆಸಿ ರೈಲ್ವೆ ನಿಲುಗಡೆಗೆ ಜನರ ಅನುಕೂಲಕ್ಕಾಗಿ ಶ್ರಮವಹಿಸಿದ್ದೇನೆ ಈಗ ಆಲೂರು ರೈಲ್ವೆ ನಿಲ್ದಾಣದಲ್ಲಿ ಎರಡು ನಿಮಿಷಗಳ ನಿಲ್ದಾಣದಲ್ಲಿ ನಿಲ್ಲಲು ಅವಕಾಶ ಕಲ್ಪಿಸಿದ್ದು ತಾಲ್ಲೂಕಿನ ಜನತೆ ಇದರ ಹೆಚ್ಚಿನ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಟಿಕೆಟ್ ಖರೀದಿ ಮಾಡಿ ಹೆಚ್ಚಿನ ಆದಾಯ ತೋರಿಸಬೇಕು ಹಾಗೂ ಪ್ರಯಾಣಿಕರು ಪದೇ ಪದೆ ವಿನಂತಿಸಿದ್ದರಿಂದ ತಾತ್ಕಾಲಿಕವಾಗಿ ನಿಲುಗಡೆಗೆ ರೈಲ್ವೆ ಇಲಾಖೆ ಅವಕಾಶ ಕಲ್ಪಿಸಿದೆ,ಆದರೆ ಆರು ತಿಂಗಳವರೆಗೆ ಆದಾಯ ಬಂದರೆ ಮಾತ್ರ ಸಂಪೂರ್ಣ ನಿಲುಗಡೆ ನೀಡುತ್ತೇವೆ, ಇಲ್ಲದಿದ್ದರೆ ರದ್ದುಪಡಿಸುತ್ತೇವೆ ಎಂದು ರೈಲ್ವೆ ಅಧಿಕಾರಿಗಳು ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಇಲ್ಲಿನ ಜನರಿಗೆ ಷರತ್ತು ವಿಧಿಸಿದ್ದಾರೆ.

ಮಾಜಿ ಶಾಸಕ ಹೆಚ್, ಕೆ ಕುಮಾರಸ್ವಾಮಿ ಮಾತಾನಾಡಿ ಜನತೆಯ ಆಶಯದಂತೆ ಆಲೂರಿನಲ್ಲಿ ರೈಲುಗಳ ನಿಲುಗಡೆಯಾಗಿದ್ದು ಜಿಲ್ಲೆಯ ಹಾಗೂ ತಾಲ್ಲೂಕಿನ ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಾಗೂ ಜನತೆಯ ಮಹಾದಾಸೆಯಂತೆ ಹಂತನಮನೆ ರೈಲ್ವೆ ನಿಲ್ದಾಣದಲ್ಲಿ ರೈಲುಗಳ ನಿಲುಗಡೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ಸೂಚಿಸಿದೆ,

ಜನತೆಗೆ ಅನುಕೂಲ ಮಾಡಿಕೊಡುವಲ್ಲಿ ಕೇಂದ್ರ ಸರ್ಕಾರ ನಮ್ಮಮನವಿಗೆ ಸ್ಪಂದಿಸಿದೆ ಎಂದು ತಿಳಿಸಿ ಜನತೆಯ ಆಶಯದಂತೆ ನಾನು ಈ ಹಿಂದೆ ಕ್ಷೇತ್ರದ ಶಾಸಕನಾದ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳ ಗಮನಕ್ಕೂ ತಂದಿದ್ದು ಅವರಿಗೆ ಪತ್ರವನ್ನು ಕೂಡ ಬರೆದಿದ್ದೆ ರೈಲು ಈ ಮಾರ್ಗವಾಗಿ ಸಂಚಾರಿಸುತಿತ್ತೆ ಹೋರೆತು ಕೆಲವು ಕಾರಣದಿಂದಾಗಿ ನಿಲುಗಡೆಯಾಗುತ್ತಿರಲಿಲ್ಲ ರೈಲ್ವೆ ನಿಲ್ದಾಣದಲ್ಲಿ ಕೆಲವೊಂದು ತಾಂತ್ರಿಕಸಮಸ್ಯೆಗಳಿದ್ದವು.

ಈ ಎಲ್ಲಾ ತಾಂತ್ರಿಕ ಸಮಸ್ಯೆಗಳು ಬಗೆಹರಿಸಿಕೊಂಡು, ಒಂದೊಂದಾಗಿ ವೇಗದೂತ ರೈಲುಗಳನಿಲುಗಡೆಗೆ ಕ್ರಮ ವಹಿಸಲಾಗುತ್ತಿದೆ, ನಿರಂತರ ಪ್ರಯತ್ನದ ಫಲವಾಗಿ ಹಾಗೂ ನಮ್ಮ ಪಕ್ಷದವರ ಹೋರಾಟದ ಫಲವಾಗಿ ಇಂದು ನಮಗೆ ಜಯಸಿಕ್ಕಿದೆ ಮುಂದಿನ ದಿನಗಳಲ್ಲಿ ಮತ್ತೊಂದು ರೈಲು ನಿಲುಗಡೆಗೆ ಅನುಮತಿ ಸಿಕ್ಕಿದ್ದು ಬೆಂಗಳೂರಿಗೆ ಹಾಗೂ ಮಂಗಳೂರಿಗೆ ಹೋಗುವ ಎಲ್ಲಾರೈಲುಗಳ ನಿಲುಗಡೆ ಮಾಡಿಕೊಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು, ಸಂಘ ಸಂಘಟನೆಗಳ ಅಧ್ಯಕ್ಷರು ಹಾಗೂ ಮುಖಂಡರು ಮತ್ತು ಸಾರ್ವಜನಿಕರು ಗ್ರಾಮಸ್ಥರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *