ಬೇಲೂರು : ಜಾತಿ ಪದ್ಧತಿ ನಿರ್ಮೂಲನೆಗಾಗಿ ಹಲವಾರು ಸುಧಾರಣೆ ಮಾಡಿದ ಮಹಾನ್ ನಾಯಕರೆಂದರೆ ಬಡವಣ್ಣನವರು ಆದರೆ ಇಂದಿಗೂ ಜಾತಿ ಪದ್ಧತಿ ನಡೆಯುತ್ತಿರುವುದು ವಿಷಾದನೀಯ ಎಂದು ಪುರಸಭೆ ಅಧಕ್ಷೆ ತೀರ್ಥಕುಮಾರಿ ಬೇಸರ ವ್ಯಕ್ತಪಡಿಸಿದರು.

ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿಶ್ವ ಗುರು ಸಾಂಸ್ಕೃತಿಕ ರಾಯಬಾರಿ ಶ್ರೀ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿ ಮಾತನಾಡಿದ ಅವರು ಬಸವಣ್ಣನವರು ಮಾಡಿದ ಕಾರ್ಯ ಇಂದಿಗೂ ಪ್ರಸ್ತುತದಲ್ಲಿದೆ ಅಲ್ಲದೆ ಶಾಶ್ವತವಾಗಿದೆ,800 ವರ್ಷಗಳ ಘಟನೆಗಳನ್ನು ನೆನಪಿಸಿಕೊಳ್ಳುವಂತ ಮಹಕಾರ್ಯ ಮಾಡಿದ ದೇಶ ಶಕ್ತಿ ಎಂದರೆ ಬಸವಣ್ಣ, ಸಮಾಜದ ಅಂಕುಡೊಂಕುಗಳನ್ನು, ಜಾತಿ ಮತ ಇನ್ನೂ ಮುಂತಾದವುಗಳ ವಿರುದ್ಧ ಹೋರಾಡಿದವರು, ಸಮ ಸಮಾಜ ನಿರ್ಮಾಣಕ್ಕೆಬುನಾದಿಯಾದವರು, ಜಾತಿ ಪದ್ಧತಿ ನಿರ್ಮೂಲಗಾಗಿ ಅಂತರ ಜಾತಿ ವಿವಾಹ ಮಾಡಿ ದೇಶಕ್ಕೆ ಮಾದರಿಯಾದವರು, ಆದರೆ ಇಂದಿಗೂ ಜಾತಿ ಪದ್ಧತಿ ನಡೆಯುತ್ತಿರುವುದು ವಿಷಾದನೀಯ,ಅನುಭವ ಮಂಟಪ ನಿರ್ಮಿಸಿ ಹಲವಾರು ಮಹಾನ್ ನಾಯಕರನ್ನು ಸೇರಿಸಿ ಜನತೆಗೆ ಶುಭ ಸಂದೇಶ ಸಾರುವ ಕೆಲಸಕ್ಕೆ ಕರೆ ಕೊಟ್ಟವರು, ಎಂದು ಹೇಳಿದರು.

ತಾಲ್ಲೂಕು ದಂಡಾಧಿಕಾರಿ ಎಂ ಮಮತಾ ಮಾತನಾಡಿ 12 ನೇ ಶತಮಾನದಲ್ಲಿ ಕ್ರಾಂತಿಯೋಗಿ ಎಂದೇ ಹೆಸರು ಪಡೆದ ಮಹಾ ಗುರು ಬಸವಣ್ಣ, ಇಂದು ಅವರ ಆಶಯಗಳನ್ನು ಸರ್ಕಾರ ಜಾರಿಗೆ ತರುವ ನಿಟ್ಟಿನಲ್ಲಿ ಅವರ ಭಾವ ಚಿತ್ರ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಅನಾವರಣ ಮಾಡಬೇಕೆಂದು ಆದೇಶ ಮಾಡಿದೆ, ಸರ್ವ ಕಾಲಿಕ ತತ್ವ ಕಾಲಿಕ ಮೌಲ್ಯಗಳನ್ನು ಎಲ್ಲರಿಗೂ ತಲುಪಬೇಕೆಂದು ಕ್ರಾಂತಿ ಮಾಡಿದವರು ಅವರ ಮೌಲ್ಯಗಳನ್ನು ಇಂದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಕಲ್ಯಾಣ ರಾಜ್ಯ ಹೇಗಿರಬೇಕೆಂದು ಅಂದೇ ವಚನದಲ್ಲಿ ರಚಿಸಿದ್ದರು ಅದು ಇಂದು ಸಂವಿಧಾನದಲ್ಲಿ ಕೆಲವೊಂದು ಅಳವಡಿಸಿಕೊಳ್ಳಲಾಗಿದೆ, ಪ್ರತಿಯೊಬ್ಬರೂ ಸಮಬಾಳ್ವೆ ಮಾಡಬೇಕೆಂದು ತಿಳಿಸಿಕೊಟ್ಟವರು, ಮಹಿಳೆಯವರಿಗೆ ಸೂಕ್ತ ಸ್ಥಾನಮಾನ ದೊರಕಬೇಕೆಂದು ದಾರಿ ತೋರಿಸಿಕೊಟ್ಟ ಜ್ಞಾನಿ ಬಸವಣ್ಣನವರು ಎಂದರು

ಪ್ರದಾನ ಭಾಷಣಕಾರ ಲಿಂಗಾರಾಜು ಮಾತನಾಡಿ ಬಸವಣ್ಣನವರ ವಚನ ಇಂದಿಗೂ ಬದುಕಿದೆ,1169 ರಲ್ಲಿ ಜನಿಸಿದ ಇವರು 8 ನೆ ವಯಸ್ಸಸಿಗೆ ಉಪನಯನವಾಯಿತು, ಅವರ ಕೃಪೆಯಿಂದ ಮಹಿಳೆಯರು ಇಂದು ಪುರುಷರಿಗೆ ಸಮಾನರಾಗಿ ಬದುಕುವ ದಾರಿ ತೋರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಸಮಾಜದಲ್ಲಿ ಸಮಬಾಳ್ವೆ, ಜನ ಸಾಮಾನ್ಯರಂತೆ ಬದುಕಿದ ವ್ಯಕ್ತಿ ಬಸವಣ್ಣ ನುಡಿದಂತೆ ನಡೆಯುತ್ತಿದ್ದ ಅವರು ದೇಶದ ಕೇಂದ್ರ ಬಿಂದು ಎಂದರೆ ತಪ್ಪಲ್ಲ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ದೀವ್ಯಾ ಗಿರೀಶ್, ಅಕ್ರಮ್ ಷರೀಫ್,ಮೀನಾಕ್ಷಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್, ತಾಲ್ಲೂಕು ವೈದ್ಯಧಿಕಾರಿ ಡಾ ವಿಜಯ್, ಬಲ್ಲೇನಹಳ್ಳಿ ರವಿ, ಸಮಾಜ ಕಲ್ಯಾಣ ಇಲಾಖೆ ರಮೇಶ್,ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಶಿವಮರಿಯಪ್ಪ, ಚೇತನ್,ಪುರಸಭೆ ಮುಖ್ಯಧಿಕಾರಿ ಸುಜಯ್, ಆರೋಗ್ಯಧಿಕಾರಿ ಲೋಹಿತ್, ಜ್ಯೋತಿ, ಕಂದಾಯಧಿಕಾರಿ ಹರೀಶ್, ಸಾರ್ವಜನಿಕರು ಇನ್ನೂ ಮುಂತಾದವರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *