
ಸಕಲೇಶಪುರ : ಬಜರಂಗದಳ ಹೆತ್ತೂರು ಘಟಕದ ಸಂಯೋಜಕ ದೀಕ್ಷಿತ್ ಅಯೋಧ್ಯೆಯೆಗೆ ಶ್ರೀ ರಾಮನ ದರ್ಶನಕ್ಕೆ ಪಾದಯಾತ್ರೆ ತೆರಳಿದ್ದಾರೆ.
500 ವರ್ಷದ ಸಂಘರ್ಷದ ಫಲವಾಗಿ ಜನವರಿ 22 ರಂದು ಪ್ರಾಣಪ್ರತಿಷ್ಠಾಪನೆ ಆಗಿ ಭವ್ಯ ಮಂದಿರ ಉದ್ಘಾಟನೆ ಆಗಿದ್ದು. ದಿನನಿತ್ಯ ಲಕ್ಷಾಂತರ ಭಕ್ತರು ದರ್ಶನ ಮಾಡುತ್ತಿದ್ದು.
ಈ ಸಂದರ್ಭದಲ್ಲಿ ದೇಶದ ಸುಭದ್ರತೆ ಮತ್ತು ಕಾಶಿ, ಮಥುರಾ ದೇವಸ್ಥಾನ ಹಿಂದೂಗಳಿಗೆ ಸೇರಬೇಕೆಂಬ ಸಂಕಲ್ಪದೊಂದಿಗೆ ಹೆತ್ತೂರ್ ದೀಕ್ಷಿತ್ ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ.
ಮೊದಲನೇ ದಿನ ಇಂದು ಹೊರಟು ಬೇಲೂರಿನಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ ಪಯಣ ಪ್ರಾರಂಭ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

