ಸಕಲೇಶಪುರ : ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ (AITUC) ವತಿಯಿಂದ ಹಾಗೂ ಸಕಲೇಶಪುರ ಹಾಗೂ ಆಲೂರು ಅಂಗನವಾಡಿ ಕಾರ್ಯಕರ್ತೆಯರು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟಿಸಿದರು

ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕರು 6ನೇ ಗ್ಯಾರಂಟಿ ಭರವಸೆ ನೀಡಿ ಅಂಗನವಾಡಿ ಕಾರ್ಯಕರ್ತೆಯರಿಗೆ 15000 ರೂ ಹಾಗೂ ಸಹಾಯಕಿಯರಿಗೆ 10000 ರೂ ಗೌರವ ಧನ ಹೆಚ್ಚಿಸುವುದಾಗಿ, ಹಾಗೂ ನಿವೃತ್ತಿ ಹೊಂದಿದ ಕಾರ್ಯಕರ್ತರಿಗೆ ಇಡಿ ಗಂಟು ಮೂರು ಲಕ್ಷ ಕೊಡುವುದಾಗಿ, ಗ್ಯಾರೆಂಟಿ ಭರವಸೆ ನೀಡಿರುತ್ತಾರೆ.

ಆದರೆ ಇದುವರೆಗೂ ಅಂಗನವಾಡಿ ಕಾರ್ಯಕರ್ತೆಯರಿಗೆ 6ನೇ ಗ್ಯಾರಂಟಿ ಲಭಿಸದ ಕಾರಣಕ್ಕಾಗಿ ಸ್ಥಳೀಯ ಶಾಸಕರ ಕಚೇರಿ ಮುಂದೆ ಸರ್ಕಾರದ ವಿರುದ್ಧ ಪ್ರತಿಭಟಿಸಿ ಶಾಸಕರಿಗೆ ಮನವಿ ಮಾಡಿ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಯನ್ನು ಗಂಭೀರವಾಗಿ ಪರಿಶೀಲಿಸಿ ಮಾನ್ಯಮುಖ್ಯಮಂತ್ರಿ ಯವರ ಗಮನಕ್ಕೆ ತಂದು, ಸದನದಲ್ಲಿ ಕೂಡ ಚರ್ಚಿಸಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕಾಗಿ ಅಗ್ರಹಿಸಿ ಶಾಸಕರಿಗೆ ಮನವಿ ಸಲ್ಲಿಸಿರುತ್ತಾರೆ.

ಈ ಸಂದರ್ಭದಲ್ಲಿ ಸಕಲೇಶಪುರ ತಾಲೂಕು ಅಧ್ಯಕ್ಷರಾದ ಪದ್ಮ, ಆಲೂರು ತಾಲೂಕು ಅಧ್ಯಕ್ಷರಾದ ಕೆ ಎಂ ವಿಜಯ, ಎ ಐ ಟಿ ಯು ತಾಲೂಕು ಅಧ್ಯಕ್ಷರಾದ ಹರೀಶ್, ಕಾರ್ಯಕರ್ತರು ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *