ಹಾಸನ :ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ ರಾಜ್ಯ ವತಿಯಿಂದ “ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯ” “ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ” ಜಾರಿಗೆತರಬೇಕೆಂದು ಒಂದು ದಿನದ ಜಿಲ್ಲಾ ದೇವಸ್ಥಾನಗಳ ಅರ್ಚಕರು ಮತ್ತು ಧರ್ಮಧರ್ಶಿಗಳ ಸಭೆ ಮತ್ತು ಕಾರ್ಯಾಗಾರವನ್ನು ಹಾಸನದ ಸೀತಾರಾಮಾಂಜನೇಯ ದೇವಸ್ಥಾನದ ಸೌದಾಮಿನಿ ಸಭಾಭವನದಲ್ಲಿ 20.02.24 ರಂದು ನಡೆಯಿತು.

ಹಾಸನ, ಸಕಲೇಶಪುರ, ಅರಕಲಗೂಡು,ಆಲೂರು ಮೂಡಿಗೆರೆ, ಚಿಕ್ಕಮಗಳೂರು ತಾಲ್ಲೂಕಿನಿಂದ ಅರ್ಚಕರು ಮತ್ತು ದೇವಸ್ಥಾನದ ಟ್ರಸ್ಟಿಗಳು ಧರ್ಮಾದರ್ಶಿಗಳು ಆಗಮಿಸಿ ತಮ್ಮ ಸಲಹೆ ನೀಡಿದರು.

ಉದ್ಘಾಟನೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಂಚಾಲಕರಾದ ಮೋಹನಗೌಡ ವಿಸ್ತೃತವಾದ ವಿಷಯ ಮಂಡನೆ ಮಾಡಿದರು.

ಚಂದ್ರು ಅವರು ವಸ್ತ್ರಸಂಹಿತೆ ವಿಷಯ ಮಂಡನೆ ಮಾಡಿದರು.

ಮಧ್ಯಾಹ್ನದ ನಂತರ ತಾಲ್ಲೂಕು ಷಹ ಕುಳಿತು ನಮ್ಮ ತಾಲ್ಲೂಕಿನ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯ ಮಾಡುವುದಾಗಿ ಮತ್ತು ವಾರದಲ್ಲಿ ಒಂದು ದೀನ ಧರ್ಮ ಶಿಕ್ಷಣ ಹಾಗು ಧಾಮಿಕ ಜಾಗೃತಿ ಮಾಡುವ ಫ್ಲೆಕ್ಸ್ ಹಾಕುವುದರ ಬಗ್ಗೆ ಚರ್ಚೆ ಮಾಡಲಾಯಿತು.

ಹಾಸನದ ಪ್ರಖ್ಯಾತ್ ವಕೀಲರಾದ ಅರುಣಗೌಡ ಅವರು ದೇವಸ್ಥಾನದ ಅಸ್ಥಿಗಳನ್ನ ರಕ್ಷಣೆ ಮಾಡುವುದರ ಬಗ್ಗೆ ಮತ್ತು ದೇವಸ್ಥಾನಗಳ ಅಸ್ತಿ ಕಬಳಿಸಿರುವ ಬಗ್ಗೆ ಕಾನೂನು ಹೋರಾಟದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.

ಹಾಸನ ತುಮಕೂರು ಮಂಗಳೂರು ಜಿಲ್ಲಾ ಹಿಂದುಜನಜಾಗೃತಿ ಸಮಿತಿ ಪದಾಧಿಕಾರಿಗಳು ಉಪಸ್ಥಿತಿ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *