ಆಲೂರು : ತಾಲೂಕಿನ ಕೆ. ಹೊಸಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಶ್ರೀ ಕೆಂಚಂಬ ಕೃಪ ಪೋಷಿತ ಮಿತ್ರ ನಾಟಕ ಮಂಡಳಿಯ ವತಿಯಿಂದ ಶ್ರೀ ಮಾರುತಿ ಡ್ರಾಮಾ ಸೀನರಿ ಇವರ ರಂಗ ಸಜ್ಜಿಗೆಯಲ್ಲಿ “ದಾನ ಶೂರ ಕರ್ಣ” ಎಂಬ ಪೌರಾಣಿಕ ನಾಟಕ ಕಾರ್ಯಕ್ರಮವನ್ನ ಜೆ ಡಿ ಎಸ್ ತಾಲೂಕು ಅಧ್ಯಕ್ಷ ಕೆ ಎಸ್ ಮುಂಜೇಗೌಡ ತಬಲಾ ಬಡಿಯುವ ಮೂಲಕ ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು ನಮ್ಮ ಸಮಾಜ ಭಾರತದ ಇತಿಹಾಸ, ಸನಾತನ ಧರ್ಮ, ನಮ್ಮ ಪವಿತ್ರವಾದ ಭೂಮಿ ತಾಯಿಯ ಮಡಿಲಲ್ಲಿ ನಾವೆಲ್ಲರೂ ಬೆಳೆದಿದ್ದೇವೆ. ಇಂದಿನ ಮೊಬೈಲ್ಗಳ ಯುಗದಲ್ಲಿ ಪೌರಾಣಿಕ ನಾಟಕಗಳು ಮರೆಯಾಗುತ್ತವೆ ಇಂತಹ ಸಂದರ್ಭದಲ್ಲಿ ನಾಟಕಗಳ ಮೂಲಕ ಇತಿಹಾಸ ನೋಡಬಹುದು ಎಂದರು.

ಬಿಜೆಪಿ ಯುವ ಮುಖಂಡ ಸಮಾಜ ಸೇವಕ ಕಟ್ಟೆ ಗದ್ದೆ ನಾಗರಾಜ್ ಮಾತನಾಡಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಬಸವಣ್ಣನವರು ಸಮಾಜ ಸುಧಾರಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿ ಪ್ರತಿಯೊಂದು ಮನೆಯಲ್ಲಿಯೂ ಸಹ ದೇವರಾಗಿ ನೆಲೆಸಿದ್ದಾರೆ. ಪೌರಾಣಿಕ ನಾಟಕಗಳ ಜೊತೆಗೆ ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯ ನಾಟಕಗಳು ಪ್ರದರ್ಶನವಾಗಲಿ,ನಾಟಕ ಎಂಬುದು ಒಂದು ಸಾಮಾನ್ಯ ಪದವಾದರೂ ಸಹ ನಮ್ಮ ನಡೆ, ನುಡಿಗಳಿಗೆ, ಅನುಗುಣವಾಗಿ, ಸಾಂಪ್ರದಾಯಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತವಾಗಿ ,ನಮ್ಮ ಜೀವನಕ್ಕೆ ಮುಖ್ಯ ಪಾತ್ರ ವಹಿಸುತ್ತದೆ. ನಾಟಕವು ನಮ್ಮ ಬದುಕಿಗೆ ನೀತಿ ಪಾಠ ಹೇಳಿ ಕೊಡುವಂತಹ ವ್ಯವಸ್ಥೆಯಾಗಿದೆ, ಪೌರಾಣಿಕ ನಾಟಕಗಳಿಂದ ನಮ್ಮ ಧಾರ್ಮಿಕ ಸಂಸ್ಕೃತಿಯನ್ನು ಉಳಿಸಲು ಪೂರ್ವಜರು ನಾಟಕದ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು ಇಂದಿನ ಡಿಜಿಟಲ್ ಯುಗದಲ್ಲಿ ಇತಿಹಾಸ ಸಂಸ್ಕೃತಿ ಧಾರ್ಮಿಕತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮರೆಮಾಚುತಿವೆ. ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಪೌರಾಣಿಕ ನಾಟಕಗಳ ಮೂಲಕ ಭಾರತೀಯ ಇತಿಹಾಸವನ್ನು ನಾಟಕದ ಮೂಲಕ ತೋರಿಸಿ ಸಂಸ್ಕೃತಿಯನ್ನು ಬೆಳೆಸಬೇಕು , ಮಕ್ಕಳಿಗೆ ಇಂದಿನ ಇತಿಹಾಸ ತಿಳಿಸಿ ಧರ್ಮ ,ಸಂಸ್ಕೃತಿ ,ರಕ್ಷಣೆ ಮಾಡುವಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದೆ, ಮುಂದಿನ ಪೀಳಿಗೆಗೆ ನಾಟಕಗಳನ್ನ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಇದೆ ಎಂದರು.

ಕೆ. ಹೊಸಕೋಟೆ ಹೋಬಳಿ ಕಿತ್ತಗಳಲೆ ಗ್ರಾಮದ ವಕೀಲೆ ಸುರಕ್ಷಾ ಕೆ ಕೆ ರವರು ನ್ಯಾಯಾಧೀಶರಾಗಿ ಆಯ್ಕೆಯಾಗಿ ಗ್ರಾಮಕ್ಕೆ ತಾಲೂಕಿಗೆ ಜಿಲ್ಲೆಗೆ ಕೀರ್ತಿ ತಂದಿರುವುದರಿಂದ ನಾಟಕ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಂಚಂಬ ಮಿತ್ರ ನಾಟಕ ಮಂಡಳಿಯ ಅಧ್ಯಕ್ಷ ಪುಟ್ಟರಾಜ ಹೆಗ್ಗೋವೆ, ಗೀತಾ ಎಸ್ಟೇಟ್ ಮಾಲೀಕರು ನಂದಿತಾ ಧರ್ಮರಾಜ್, ಮುರುಗನ್ ವಿಕಾಸ್ ಗ್ರಾನೆಟ್, ಗ್ರಾಮ್ ಪಂಚಾಯ್ತಿ ಉಪಾಧ್ಯಕ್ಷ ಕೃಷ್ಣಪ್ಪ, ಮಾಜಿ ಅಧ್ಯಕ್ಷರುಗಳಾದ ಮಮತಾ ಅಣ್ಣೇಗೌಡ, ಕೆಕೆ ಚಂದ್ರಶೇಖರ್, ಸದಸ್ಯರುಗಳಾದ ಚಂದನ್ ಹೈದೊರು, ಅಕ್ಷತಾ ಕೊಡಗಳವಾಡಿ, ಕರವೇ ಅಧ್ಯಕ್ಷ ವಿವೇಕ್, ಇನ್ನಿತರರು ಉಪಸ್ಥಿತರಿದ್ದು.

ಕಾರ್ಯಕ್ರಮವನ್ನ ಎಚ್ ಡಿ ಸೋಮೇಶ್ ಶಿಕ್ಷಕರು ನಿರೂಪಿಸಿದರು.

ವೆಂಕಟೇಶ್ ಎಚ್ ಎಂ ಶಿಕ್ಷಕರು ಹೊಸಳ್ಳಿ ವಂದನಾರ್ಪಣೆ ಮಾಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *