
ಚನ್ನರಾಯಪಟ್ಟಣ: ಜಮೀನು ವಿವಾದ ಹಿನ್ನೆಲೆ ಸವಣಿಯರು ದಲಿತನ ಮೇಲೆ ಕಲ್ಲು ತೂರಾಟ ನಡೆಸಿ ಬೈಕ್ ಸುಟ್ಟು ಹಾಕಿರುವ ಘಟನೆ ತಾಲೂಕಿನ ಕಸಬಾ ಹೋಬಳಿಯ ಬಂಡಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಬಂಡಿಹಳ್ಳಿ ಗ್ರಾಮದ ರಂಗಪ್ಪ ದೂರು ನೀಡಿದ್ದು, ದಲಿತ ಸಮಾಜದ ವ್ಯಕ್ತಿಗಳಾದ ಬಿ ಪಿ ಗೋವಿಂದರಾಜು ಮತ್ತು ಮಂಜುನಾಥ್ ದೌರ್ಜನ್ಯ ಒಳಗಾದವರು, ಇವರ ಮೇಲೆ ದೌರ್ಜನ್ವನ್ನು ಎಸೆಗಿದ ಆರೋಪಿಗಳು ಮದನಕುಮಾರ ಮತ್ತು ಮಂಜುನಾಥ್ ಎಂದು ದೂರು ನೀಡಲಾಗಿದೆ.
ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿಯ ದಿಂಡಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಡಿಹಳ್ಳಿ ಗ್ರಾಮದ ಸರ್ವೆ ನಂಬರ್ 90 91 92 93 ರಲ್ಲಿ ರಂಗಪ್ಪ ,ಜವರದಾಸಯ್ಯ, ವರದಯ್ಯ, ಎಲಕಯ್ಯ, ವೆಂಕಟಯ್ಯ ಎಂಬುವರಿಗೆ ಬಂಡಿಹಳ್ಳಿ ಗ್ರಾಮದಲ್ಲಿ ಜಮೀನು ಮಂಜೂರಾಗಿತ್ತು, ದಲಿತ ಸಮುದಾಯಕ್ಕೆ ಸೇರಿದ ರಂಗಪ್ಪ ಅವರಿಗೆ ಮಂಜೂರಾಗಿದ ಜಮೀನು ವಿಚಾರಕ್ಕೆ ಸಂಬಂಧಪಟ್ಟಂತೆ ಗ್ರಾಮದ ಕೆಲವು ಸವಣಿಯರು ಜೊತೆ ಈ ಹಿಂದೆಯಿಂದಲೂ ಜಗಳ ಆಗುತ್ತದೆ ಇದರಿಂದ ತಮ್ಮ ಜಮೀನು ಹದ್ದುಬಸ್ತು ಗೊಳಿಸಿಕೊಳ್ಳಲು ಶನಿವಾರ ಸರ್ವೇ ಮಾಡಿಸಿ ಜೆಸಿಬಿ ಮೂಲಕ ತಮ್ಮ ಮಂಜೂರಾದ ಜಮೀನಿನಲ್ಲಿ ಕೆಲಸ ಮಾಡಿಸುತ್ತಿದ್ದರು,
ಈ ವೇಳೆ ಸ್ಥಳಕ್ಕೆ ಬಂದ ಬಂಡಿಹಳ್ಳಿ ಗ್ರಾಮದವರಾದ ಮದನ್ ಕುಮಾರ ಹಾಗೂ ಮಂಜುನಾಥ ಎಂಬುವರು ಮರದ ನೆರಳಿನಲ್ಲಿ ನಿಲ್ಲಿಸಿದ ದಲಿತ ಸಮುದಾಯದ ಗೋವಿಂದರಾಜ್ ಅವರ ಬೈಕಿಗೆ ಬೆಂಕಿ ಹಾಕಿ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ, ಈ ವೇಳೆ ಬೆಂಕಿ ನಂದಿಸಲು ಬಂದ ಜವರದಾಸಯ್ಯ ಅವರ ಮಗ ಮಂಜುನಾಥ ಅವರ ಮೇಲೆ ಕಲ್ಲು ತೋರಾಟ ಮಾಡಿ ಪರಾರಿಯಾಗಿದ್ದಾರೆ.
ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ದಲಿತ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ದಲಿತ ಸೇನಾಪಡೆಯ ಅಧ್ಯಕ್ಷರಾದ ದಂಡೂರ್ ಮಂಜುನಾಥ್ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ದಲಿತ ಮುಖಂಡರಾದ ಬಿ ರಂಗಪ್ಪ, ಜಂಬೂರು ಶಿವಣ್ಣ, ಮಾದಿಹಳ್ಳಿ ಮಂಜು, ಗಾಯಕ ಮಂಜುನಾಥ್, ಟಿ ಡಿ ಹರೀಶ್, ಸಿ ಪಿ ಮಂಜುನಾಥ್, ಬಿ ಪಿ ಧರ್ಮರಾಜ್, ಸೇರಿದಂತೆ ಇತರರು ಹಾಜರಿದ್ದರು.


