ಸಕಲೇಶಪುರ ಪುರಸಭೆ ಆವರಣದಲ್ಲಿ ನಡೆದ ಶನಿವಾರ ಹಾಗೂ ಭಾನುವಾರ ನಡೆದಂತಹ ಕೇರಂ ಆಟದಲ್ಲಿ ತಾಲೂಕಿನ ಬಾಳುಪೇಟೆ, ಬೆಳಗೋಡು,ಬಾಳೆಗದ್ದೆ ಚಂಪಕನಗರ ಕುಶಾಲನಗರ,ಮಠಸಾಗರ, ಕಾಕನಮನೆ ಆಚಂಗಿ ಇತರೆ ಆಟಗಾರರು ಉತ್ಸಾಹ ದಿಂದ ಪಾಲ್ಗೊಂಡು ಆಟದ ಆರಂಭದಿಂದ ಅಂತ್ಯದವರಿಗೂ ರೋಮಾಂಚಕ ರೀತಿಯಲ್ಲಿ ನೋಡುಗರ ಕಣ್ಣಿಗೆ ಮೆರಗು ನೀಡುವ ರೀತಿಯಲ್ಲಿ ತಮ್ಮ ಕೇರಂ ಕೈಚಳಕ ಪ್ರದರ್ಶಿಸುವುದರ ಮೂಲಕ ನಿಪುಣತೆ ಮೆರೆದರು.

ಬೆಳಗೂಡು ತಂಡದ ಇಫ್ತಿಕರ್ ಹಾಗೂ ನಾಸಿರ್ , ಸ್ಥಳಿಯರಾದ ಅಮ್ಜು ಹಾಗೂ ರಘು ಪುರುಷರ ಕೇರಂ ಡಬಲ್ಸ್ಪೈನಲ್ ಪ್ರವೇಶಿಸಿ ಬೆಸ್ಟ ಆಫ್ 3ಪಂದ್ಯಕ್ಕೆ ಸಾಕ್ಷಿಯಾದರು.

ಈ ಒಂದು ಪಂದ್ಯವೇ ಜನರ ಕುತೂಹಲಕ್ಕೆ ಪಾತ್ರವಾದ ಪಂದ್ಯವಾಗಿತ್ತು.ಡಬಲ್ಸ್ ಪೈನಲ್ ಪಂದ್ಯಕ್ಕೆ ಚಾಲನೆ ನೀಡಿದ ರಘು ಟೀಂ ಹಾಗೂ ಇಫ್ತಿಕಾರ್ ಟೀಂ ಮೂರು ಸೆಟ್ ನಲ್ಲಿ ಪ್ರಥಮ ಸೆಟ್ನಲ್ಲಿ ಸ್ಥಳಿಯರಾದ ರಘು ಟೀಂ ಒಂದು ಸೆಟ್ ತಮ್ಮದಾಗಿಸಿಕೊಂಡರು.ಎರಡನೇ ಸೆಟ್ನಲ್ಲಿ ಬೆಳಗೊಡಿನ ಆಟಗಾರರಾದ ಇಫ್ತಿಕಾರ್ ಭರ್ಜರಿಜಯದ ಮೂಲಕ ವಿಜಯಲಕ್ಷ್ಮಿಯನ್ನು ತಮ್ಮದಾಗಿಸಿಕೊಂಡರು. ಎರಡೂ ಪಂದ್ಯದ ಆಟಗಾರರು 1-1 ಸಮಬಲ ಕಾಯ್ದುಕೊಂಡರು. ಕೊನೆಯ ಪಂದ್ಯದ ಅದೃಷ್ಟ ಲಕ್ಷ್ಮಿ ಯಾರಿಗೆ ಎಂಬ ಕುತೂಹಲ ನೆರೆದಿದ್ದ ಕೇರಂ ಆಟಗಾರರಲ್ಲಿ ಕಾತುರ ಹಾಗೂ ಆತಂಕವನ್ನು ಮೂಡಿತ್ತು. ಪುರಸಭೆ ಆವರಣ ನಿಶ್ಯಬ್ಧ ವಾತಾವರಣ ನೆರೆದಿದ್ದ ಕೇರಂ ಅಭಿಮಾನಿಗಳಲ್ಲಿ ಮೌನ. ಸಮಬಲದ ಹೋರಾಟದ ನಡುವೆ ಕೊನೆಗೂ ಮೂರನೇ ಸೆಟ್ ನಲ್ಲಿ ಅಂತಿಮವಾಗಿ ಸ್ಥಳಿಯರಾದ ಸಕಲೇಶಪುರ ಹುಡುಗರಾದ ಮೆಕಾನಿಕ್ ಅಮ್ಜು ಹಾಗೂ ಟೈಲ್ಸ್ ರಘುರವರ ಪಾಲಾಯಿತು. ಗೆದ್ದಂತಹ ಆಟಗಾರು ಕೈ ಕೈ ಕುಲುಕುವುದರ ಮೂಲಕ ಒಬ್ಬರಿಗೊಬ್ಬರು ಅಭಿನಂದನೆಸಲ್ಲಿಸುವುದರ ಮೂಲಕ ಆಟದ ನಿಷ್ಟೆಶ್ರದ್ದೆ ಮೆರೆದರು. ದ್ವಿತೀಯ ಸ್ಥಾನಕ್ಕೆಬೆಳಗೂಡು ಆಟಗಾರರಾದ ಇಫ್ತಿಕರ್ಹಾಗೂ ನಾಸಿರ್ ತಮ್ಮ ಹೆಜ್ಜೆ ಇಟ್ಟರು. ಪ್ರಾರಂಭದಿಂದ ಅಂತ್ಯದವರೆಗೂ ಕುತೂಹಲ ಭರಿತ ಪಂದ್ಯದ ದೃಶ್ಯಾವಳಿ ನೋಡಲು ಕೇರಂ ಆಟಗಾರರ ದಂಡೇ ನೆರೆದಿತ್ತು.ಕೇರಂ ಪಂದ್ಯದ ಸಿಂಗಲ್ಸ್ ವಿಭಾಗದಲ್ಲಿ ಟೈಲ್ಸ್ ರಘು ಪ್ರಥಮ ಸ್ಥಾನ ಪಡೆದುಕೊಂಡರೆ ದ್ವಿತೀಯ ರಾಗಿ ಯೂಸಫ್ ಹೊರಹೊಮ್ಮಿದ್ದರು.ಕೇರಂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ರಾಗಿಣಿ ನಾಯ್ಡು, ಹಾಗೂ ದ್ವಿತೀಯ ಸ್ಥಾನವನ್ನು ಲತಾಶೆಟ್ಟಿ ತಮ್ಮ ಮುಡಿಗೇರಿಸಿಕೊಂಡರು.ಕೇರಂ ಮಹಿಳೆಯರ ಡಬಲ್ಸ್ ನಲ್ಲಿ ರಾಗಿಣಿ ನಾಯ್ಡು ಹಾಗೂ ಆಶಾಶೆಟ್ಟಿ ಪ್ರಥಮರಾದರೆ, ಲತಾಶೆಟ್ಟಿ ಹಾಗೂ ಜ್ಯೊತಿನಂದನ್ ದ್ವಿತೀಯ ಸ್ಥಾನ ಪಡೆದರು.ಚೆಸ್ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಆಶಾ ಶೆಟ್ಟಿ ಹಾಗೂ ದ್ವಿತೀಯ ಸ್ಥಾನವನ್ನು ವರುಣಿಕ ತಮ್ಮದಾಗಿಸಿಕೊಂಡರು.ಚೆಸ್ ಪುರುಷರ ವಿಭಾಗದಲ್ಲಿ ಪ್ರಥಮರಾಗಿ ಶಶಾಂಕ್ ಗೌಡ, ದ್ವಿತೀಯ ಸ್ಥಾನವನ್ನು ಸ್ಟುಡಿಯೋ ಮಧು ತಮ್ಮದಾಗಿಸಿ ಕೊಂಡರು.ಪಂದ್ಯದ ಆರಂಭಕ್ಕೆ ಚಾಲನೆ ನೀಡಿದಪುರಸಭೆಯ ಮುಖ್ಯಧಿಕಾರಿಗಳಾದರಮೇಶ್ ರವರು ಚಾಲನೆ ಟೇಪ್ ಕತ್ತರಿಸಿ ಸಿಹಿ ಹಂಚಿದರು ಕ್ರೀಡಾ ಉಸ್ತುವಾರಿ ವಹಿಸಿಕೊಂಡಿದ್ದ ಸುಜಾತ ಹಾಗೂ ಪಂದ್ಯದ ಆಯೋಜಕರಾದ ಮಂಜೇಗೌಡರ ನೇತೃತ್ವದಲ್ಲಿ ಪಂದ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿತ್ತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *