
ಚನ್ನರಾಯಪಟ್ಟಣ : ಎಪಿಎಂಸಿ ಆವರಣದಲ್ಲಿ ತೆರೆದಿರುವ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆ ಮುಂಜಾನೆಯಿಂದ ಸಾವಿರಾರು ರೈತರು ಜಮಾಯಿಸಿದರು ಇವರನ್ನು ಹತೋಟಿಗೆ ತರಲು ತಾಲೂಕು ದಂಡಾಧಿಕಾರಿ ಬಿಎಂ ಗೋವಿಂದರಾಜು ಹಾಗೂ ಡಿ ವೈ ಎಸ್ ಪಿ ರವಿಪ್ರಸಾದ್ ಅವರು ಅರೆ ಸಾಹಸ ಪಟ್ಟರು.
ಸಾವಿರಾ ರೈತರೇ ಏಕಕಾಲಕ್ಕೆ ಜಮಾಹಿತರಿಂದ ಜಮಾಹಿಸಿದ್ದರಿಂದ ನೂಕು ನೂಕುಲು ಪ್ರಾರಂಭವಾಯಿತು, ಇದನ್ನು ಮನಗಂಡ ಡಿವೈಎಸ್ಪಿ ರವಿಪ್ರಸಾದ್ ಎಲ್ಲಾ ರೈತರಿಗೆ ನೆರಳಿಗಾಗಿ ಶಾಮಿಯಾನ ಹಾಗೂ ಚೇರ್ ಗಳನ್ನು ಒದಗಿಸಿದರು.
ಎಪಿಎಂಸಿ ಆವರಣದಲ್ಲಿ ಪ್ರಾರಂಭವಾಗುವ ಕೊಬ್ಬರಿ ಖರೀದಿ ನೊಂದಣಿ ಕೇಂದ್ರದ ಕೌಂಟರ್ ಮುಂದೆ 2000ಕ್ಕೂ ಹೆಚ್ಚು ರೈತರು ಸರದಿ ಸಾಲಿನ ನೂಕು ನುಗ್ಗಲಿನಲ್ಲಿ ನಿಂತಿರುವುದು ಕಂಡುಬಂದಿತ್ತು.
ಸ್ಥಳಕ್ಕೆ ಆಗಮಿಸಿದ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಮಾತನಾಡಿ ಮಹಾರಾಷ್ಟ್ರದ ಎನ್ಐಸಿ ಕೇಂದ್ರದ ಮೂಲಕ ಈ ದಿನ ಬೆಳಿಗ್ಗೆ 9:00 ಗಂಟೆಯಿಂದ ನೊಂದಣಿ ಪ್ರಾರಂಭವಾಗಿ ಸಂಜೆ 6 ಗಂಟೆಯವರೆಗೂ ಚನ್ನರಾಯಪಟ್ಟಣ, ಹಿರಿಸಾವೆ, ನುಗ್ಗೇಹಳ್ಳಿ, ಶ್ರವಣಬೆಳಗೊಳ, ಬಾಗೂರು, ಉದಯಪುರದ, ರೈತ ಸಂಪರ್ಕ ಕೇಂದ್ರಗಳಲ್ಲಿ ಏಕಕಾಲಕ್ಕೆ ನೋಂದಣಿ ಪ್ರಾರಂಭವಾಗುತ್ತದೆ ರೈತರು ತಾಳ್ಮೆಯಿಂದ ನೋಂದಣಿ ಮಾಡಿಸಿಕೊಳ್ಳಿ ಎಂದರು.
ಈ ಬಾರಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ರೈತರಿಗೆ ಈ ಬಾರಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಬಿ ಎಂ ಗೋವಿಂದರಾಜು, ಡಿವೈಎಸ್ಪಿ ರವಿಪ್ರಸಾದ್, ಪೋಲಿಸ್ ವೃತ್ತ ನಿರೀಕ್ಷಕರಾದ ರಘುರಾಮ್,ಖರೀದಿ ಅಧಿಕಾರಿ ಕಾವ್ಯ ಸೇರಿದಂತೆ ಇತರರು ಹಾಜರಿದ್ದರು.




