ಬೇಲೂರು.ಮಾ.೪ ;-ವಿಶ್ವ ಪ್ರವಾಸಿ ತಾಣ, ಶಿಲ್ಪಕಲೆಗಳ ನಾಡು ಎಂದೇ ಖ್ಯಾತಿ ಪಡೆದ ಬೇಲೂರು ಪಟ್ಟಣದ ಹೃದಯ ಭಾಗದ ಮುಖ್ಯರಸ್ತೆಯ ಶ್ರೀ ಬಸವೇಶ್ವರ ವೃತ್ತಕ್ಕೆ ಬಹುದಿನಗಳ ಕನಸಿನಂತೆ ಭಾನುವಾರ ಸಂಜೆ ಅಖಂಡ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಯಂತ್ರದ ಮೂಲಕ ಪ್ರತಿಷ್ಠಾಪನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಸವಾಭಿಮಾನಿಗಳು ಜಯ,ಜಯ ಬಸವೇಶ ಹರ ಹರ ಮಹಾದೇವಾ ಎಂಬ ಜಯಘೋಷವನ್ನು ಹಾಕುವ ಮೂಲಕ ಸಂಭ್ರಮವನ್ನು ವ್ಯಕ್ತ ಪಡಿಸಿದಲ್ಲದೆ ಶೀಘ್ರವೇ ವಿಶ್ವ ಗುರು ಬಸವಣ್ಣನವರ ಪ್ರತಿಮೆಯನ್ನು ಅನಾವರಣಗೊಳಿಸಲಾಗುತ್ತದೆ ಎಂದು ಮುಖಂಡರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಬೇಲೂರು ಹೇಳಿ-ಕೇಳಿ ವಿಶ್ವ ಪ್ರವಾಸಿ ತಾಣ ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ಬರುವ ಹಿನ್ನಲೆಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಬಸವೇಶ್ವರ ವೃತ್ತ ಎಂದೇ ನಾಮಕರಣವನ್ನು ಪುರಸಭಾ ಮಾಜಿ ಅಧ್ಯಕ್ಷರಾದ ಎಂ.ಆರ್.ವೆಂಕಟೇಶ್ ನಡೆಸಿಕೊಟ್ಟಿದ್ದಾರೆ.

ಬಳಿಕ ಇಲ್ಲಿ ಕಂಚಿನ ಬಸವಣ್ಣನವರ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು ಎಂಬ ಹಂಬಲ ಎಲ್ಲಾ ಬಸವಾಭಿಮಾನಿಗಳಿತ್ತು. ಇಂದು ನಾನು ನನ್ನ ಮಗ ಹೆಸರಿನಲ್ಲಿ ಮತ್ತು ಪುರಸಭಾ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಇಬ್ಬರು ಸೇರಿ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾನೆ ನಡೆಸಲಾಗಿದೆ.

ಶೀಘ್ರವೇ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದಿಂದ ಬಸವಣ್ಣನವರ ಪ್ರತಿಮೆಯನ್ನು ಲೋಕಾರ್ಪಣೆ ನಡೆಸುವ ಮೂಲಕ ಅಣ್ಣ ಬಸವಣ್ಣನವರು ನಾಡಿಗೆ ನೀಡಿದ ಕೊಡುಗೆಗೆ ಗೌರವ ಸಲ್ಲಿಸಬೇಕಿದೆ. ಬಸವಣ್ಣನವರು ಎಂದಿಗೂ ಒಂದು ಜಾತಿ,ಧರ್ಮ, ವರ್ಗಕ್ಕೆ ಸೀಮಿತವಾಗಿಲ್ಲ, ಅವರ ವಿಚಾರಧಾರೆಗಳು ಇಡೀ ಸಮಸ್ತ ಮನುಕುಲಕ್ಕೆ ವ್ಯಾಪಿಸಿದ ಹಿನ್ನಲೆಯಲ್ಲಿ ಈ ಪವಿತ್ರ ಕಾರ್ಯಕ್ಕೆ ಸರ್ವರೂ ಕೂಡ ಸಾಕ್ಷಿಯಾಗಬೇಕು ಎಂದು ಮನವಿ ಮಾಡಿದರು.

ಪುರಸಭಾ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ವಿಶ್ವದಲ್ಲಿ ಬುದ್ದ,ಬಸವ ಮತ್ತು ಅಂಬೇಡ್ಕರ್ ಮಾಹನ್ ದಾರ್ಶನಿಕ ವ್ಯಕ್ತಿಗಳೆಂದು ಕರೆದಿದ್ದಾರೆ. ಇಂತವರ ಸಾಲಿನಲ್ಲಿನ ಬಸವಣ್ಣವರು ಸಾಮಾಜಿಕ ಅಸಮಾನತೆಯನ್ನು ಖಂಡಿಸಿ ಸಮಸಮಾಜಕ್ಕೆ ಮುನ್ನುಡಿ ಬರೆದ ಮಾಹನ್ ಪುರುಷರು, ಇವರ ಹೆಸರನ್ನು ನಾನು ಪುರುಸಭಾ ಅಧ್ಯಕ್ಷರಾದ ಸಂದರ್ಭದಲ್ಲಿ ವೃತ್ತಕ್ಕೆ ನಾಮಕರಣ ನಡೆಸಲಾಗಿತ್ತು. ಸದ್ಯ ಸರ್ವರ ಸಹಕಾರದಿಂದ ಇಂದು ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪನೆ ನಡೆಸಲಾಗಿದೆ ಎಂದ ಅವರು ಸದ್ಯದಲ್ಲಿಯೇ ಉದ್ಘಾಟನೆಯ ಅರ್ಥಪೂರ್ಣ ಕಾರ್ಯಕ್ರಮವನ್ನು ಪುಷ್ಪಗಿರಿ ಜಗದ್ಗುರುಗಳ ನೇತೃತ್ವದಲ್ಲಿ ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವಕೀಲ ಸಿ.ಎಂ.ನಿAಗರಾಜ್, ಬಿ.ಎಲ್.ರಾಜೇಗೌಡ, ಮ.ಶಿವಮೂರ್ತಿ, ಹೆಬ್ಬಾಳು ಹಾಲಪ್ಪ, ಬಲ್ಲೇನಹಳ್ಳಿ ರವಿಕುಮಾರ್, ಗೆಂಡೇಹಳ್ಳಿ ಚೇತನ್, ರವಿಶಂಕರ್, ಕಡೆಗರ್ಜೆ ಜಗಣ್ಣ, ಹೆಬ್ಬಾಳು ಉಮಾಶಂಕರ್, ಬ್ಯಾಡರಹಳ್ಳಿ ಆನಂದ್, ಬಾಬು, ಅದ್ದೂರಿ ಚೇತನ್ ಕುಮಾರ್, ಅದ್ದೂರು ಚಂದ್ರಶೇಖರ್, ವಿರೂಪಾಕ್ಷ,ಮಲ್ಲೇಶ್, ನೀಲಕಂಡ, ತೀರ್ಥಪ್ಪ, ಮಲ್ಲಿಗನೂರು ಮಲ್ಲಿಕಣ್ಣ, ಗೋಬಿ ಕುಮಾರಣ್ಣ ಮತ್ತು ಪುರಸಭಾ ಸದಸ್ಯರಾದ ಜಮಾಲ್ಕುದ್ದೀನ್, ಪ್ರಭಾಕರ್,ಅಕ್ರಮಪಾಷ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *