ಹಾಸನ: ತಾಲೂಕಿನ ಹನುಮಂತಪುರ ಗ್ರಾಮದ ಸಮೀಪ ಇರುವ ಗಾರ್ಡನ್ ಪ್ಲೈವುಡ್ ಪ್ಯಾಕ್ಟರಿಯೊಂದಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂ ಬೆಲೆ ಬಾಳುವ ಯಂತ್ರೋಪಕರಣಗಳು ನಷ್ಟವಾದ ಘಟನೆ ಸೋಮವಾರ ಸಂಭವಿಸಿದೆ.

ನಗರ ಹೊರವಲಯದಲ್ಲಿರುವ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಸಂಕೇತ್ ಎಂಬವರಿಗೆ ಸೇರಿದ ಪ್ಲೈವುಡ್ ಕಾರ್ಖಾನೆಯಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ ನೋಡು ನೋಡುತ್ತಲೇ ಧಗಧಗನೆ ಊರಿದು ವಸ್ತುಗಳೆಲ್ಲಾ ಕರಕಲು ಆಗಿದೆ. ಕಾರ್ಖಾನೆಯಲ್ಲಿದ್ದ ಲಕ್ಷಾಂತರ ರೂ. ಬೆಲೆಬಾಳುವ ಪ್ಲೈವುಡ್, ಮರದ ದಿಮ್ಮಿಗಳು ಮತ್ತು ಯಂತ್ರೋಪಕರಣಗಳು ಹೊತ್ತಿ ಉರಿಯಿತು.

ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಮ್ಮ ಎರಡು ಮೂರು ವಾಹನದಲ್ಲಿ ಬಂದು ಗಂಟೆಗಟ್ಟಲೆ ಬೆಂಕಿ ನಂದಿಸಲು ಮುಂದಾದರು.

ಇಂತಹ ಅವಘಡ ಸಂಭವಿಸುವುದಕ್ಕೆ ನಿಕರವಾದ ಕಾರಣ ತಿಳಿದು ಬಂದಿರುವುದಿಲ್ಲ.

ತನಿಖೆ ನಂತರ ಸತ್ಯಾಂಶ ಹೊರಬರಬೇಕಾಗಿದೆ. ಬೆಂಕಿ ದಗೆ ದಗೆ ಊರಿಯುವ ದೃಶ್ಯ ನೋಡಲು ನೂರಾರು ಗ್ರಾಮಸ್ಥರು ಮುಗಿ ಬಿದ್ದಿದ್ದರು.

ಇದರಲ್ಲಿ ಸಾವುನೋವು ಸಂಭವಿಸಿದೆಯೇ ಎಂಬುದು ತಿಳಿದು ಬಂದಿರುವುದಿಲ್ಲ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *