ಸಕಲೇಶಪುರ : ಈಗಾಗಲೇ ನೆಲ ಬಾಡಿಗೆಗೆ ತೆಗೆದುಕೊಂಡವರ ಅವಧಿ ಈ ತಿಂಗಳಿಗೆ ಮುಕ್ತಾಯವಾಗುತ್ತದೆ ಎಂದು ನಮಗೂ ಸಹ ಬಲ್ಲಗಳ ಮೂಲದಿಂದ ಮಾಹಿತಿ ಇದೆ ಎಂದ ಮಲೆನಾಡು ರಕ್ಷಣಾ ಸೇನೆ ಡಾ. ಸಾಗರ ಜಾನೇಕೆರೆ

ಈ ಮೂಲಕ ನಾವುಗಳು ಕೇಳಿಕೊಳ್ಳುವುದೇನೆಂದರೆ ನೆಲ ಬಾಡಿಗೆಯ ಅವಧಿ ಮುಗಿದ ನಂತರ ಮರು ಟೆಂಡರ್ ಕರೆದು ಹೊಸಬರಿಗೂ ಅವಕಾಶಗಳನ್ನು ಮಾಡಿಕೊಡಬೇಕು ಪುರಸಭೆ ಹೊಸದಾಗಿ ಅವಕಾಶ ಮಾಡದೆ ಈಗಿರುವವರನ್ನೇ ಎಲ್ಲಾದರೂ ಮುಂದುವರಿಸಿದರೆ ಈಗಾಗಲೇ ವಿನೂತನವಾದ ಹೋರಾಟವನ್ನು ಹಮ್ಮಿಕೊಂಡಿರುವ ಸಂಘಟನೆಯೊಂದಿಗೆ ನಾವು ಸಹ ಕೈಜೋಡಿಸಿ ನಾವು ಸಹ ಶೇಡ್ ನಿರ್ಮಿಸಿ ಪುರಸಭೆಯ ವಿರುದ್ಧ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು

ಮಾನ್ಯ ಜಿಲ್ಲಾಧಿಕಾರಿಗಳು ಈ ವಿಚಾರವನ್ನು ತತ್ತಕ್ಷಣಕ್ಕೆ ಗಮನಕ್ಕೆ ತೆಗೆದುಕೊಂಡು ನೆಲ ಬಾಡಿಗೆಯ ಅವಧಿ ಮುಗಿದ ತಕ್ಷಣ ಮರು ಟೆಂಡರ್ ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ. ಡಾ. ಸಾಗರ ಜಾನೇಕೆರೆ ಮಲೆನಾಡು ರಕ್ಷಣಾ ಸೇನೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *