ಬೇಲೂರು : ಬಿಜಿಎಸ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ೧ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಭಾಂಗಣಕ್ಕೆ ಶಾಸಕರಾದ ಹೆಚ್ ಕೆ ಸುರೇಶ್ ಮಾಜಿ ಶಾಸಕ ಕೆ ಎಸ್ ಲಿಂಗೇಶ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಎ ನಾಗರಾಜು ,ಪರಮಪೂಜ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

ನಂತರ ಮಾತನಾಡಿದ ಅವರು ನಮ್ಮ ಪರಮಪೂಜ್ಯ ಭೈರವಾಕ್ಯ ಡಾ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮಿಗಳು ಹಾಗೂ ಜಗದ್ಗುರು ಡಾ ನಿರ್ಮಲಾನಂದ ಮಹಾಸ್ವಾಮೀಜಿಗಳ ಕನಸಿನಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯಾವಂತರಾಗಬೇಕು ಎಂಬ ಆಶಯದಂತೆ ಈಗಾಗಲೇ ಬೇಲೂರಿನಲ್ಲಿ ಬಿಜಿಎಸ್ ವಿದ್ಯಾಸಂಸ್ಥೆ ಚಿಕ್ಕದಾಗಿ ಬೆಳೆಯುತ್ತ ಇಂದು ದೊಡ್ಡದಾಗಿ ಎತ್ತರಕ್ಕೆ ಭಕ್ತರ ಹಾಗೂ ಎಲ್ಲರ ಸಹಕಾರದಿಂದ ಬೆಳೆಯುತ್ತಿದೆ.

ಅದರಂರೆ ಜಗದ್ಗುರುಗಳ ಆಶಯದಂತೆ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುವಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿಗಳ ವಸತಿ ನಿಲಯ ವನ್ನು ಸ್ಥಾಪಿಸಲು ಮುಂದಿನ ದಿನಗಳಲ್ಲಿ ಅಡಿಗಲ್ಲು ಇಡಲಾಗುವುದು .ಅಲ್ಲದೆ ಎಲ್ಲಾ ಮಕ್ಕಳಿಗೂ ಸಹ ಉತ್ತಮ ವ್ಯಾಸಾಂಗ ನೀಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಪ್ರೈಮರಿಯಿಂದ ಶಿಕ್ಷಣ ನೀಡಲು ಪೂರ್ವತಯಾರಿಯನ್ನು ಮೊದಲ ಹಂತದಿಂದಲೇ‌ ಪ್ರಾರಂಭಿಸಲಾಗುವುದು.

ನಮ್ಮ ಶ್ರೀ ಮಠದ‌ಭಕ್ತರಾದ ಮಾಜಿ ಶಾಸಕರಾದ ಕೆ ಎಸ್ ಲಿಂಗೇಶ್ ರವರು ೧ ಕೋಟಿ ಅನುದಾನವನ್ನು ನೂತನ ಬಿಜಿಎಸ್ ಆಡಿಟೋರಿಯಂ ಗೆ ಅನುದಾನ ನೀಡಿದ್ದರು ಅದನ್ನು ಈಗಿನ ಶಾಸಕರಾದ ಹೆಚ್ ಕೆ ಸುರೇಶ್ ಅವರು ತರುವ ಮೂಲಕ ಶ್ರೀಮಠಕ್ಕೆ ಅವರ ಭಕ್ತಿಯನ್ನು ಸಮರ್ಪಿಸಿದ್ದಾರೆ.ಅದರಂತೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆ ದಾರರಿಗೆ ಸೂಚಿಸಿದರು.

ಶಾಸಕ ಹೆಚ್ ಕೆ ಸುರೇಶ್ ಮಾತನಾಡಿ ನಮಗೆ ಆರ್ಶಿರ್ವದಿಸಿದ ಪರಮಪೂಜ್ಯ ರಿಗೆ ಗೌರವ ಸೂಚಿಸುವುದು ಮೊದಲ ಕರ್ತವ್ಯ. ಕೇವಲ ಮಾತನಾಡಿದರೆ ಕೆಲಸ ಕಾರ್ಯಗಳಾಗುವುದಿಲ್ಲ.ಈ ಹಿಂದಿನ ನಮ್ಮ ಶಾಸಕರಾದ ಲಿಂಗೇಶ್ ಅವರ ಪರಿಶ್ರಮದಿಂದ ಕ್ಷೇತ್ರದ ಅನಬಿವೃದ್ದಿಗೆ ಅನುದಾನಗಳು ಬಂದಿದ್ದವು.ಆದರೆ ಕಾರಣಾಂತರದಿಂದ ಸರ್ಕಾರದ ಬದಲಾವಣೆ ಸಂದರ್ಭದಲ್ಲಿ ಕೆಲ ಕೆಲಸಗಳು ಕುಂಠಿತವಾಗಿದ್ದವು.

ನಂತರ ಬಿಜಿಎಸ್ ಸಂಸ್ಥೆಗೆ ನೀಡಿದ ಅನುದಾನವನ್ನು ನೀಡುವಂತೆ ಸಚಿವರಿಗೆ ಒತ್ತಡ ತಂದ ಹಿನ್ನಲೆಯಲ್ಲಿ ಇಂದು ಭೂಮಿ ಪೂಜೆ ನಡೆಯುತ್ತಿದೆ.ಯಾರೇ ಗುತ್ತಿಗೆದಾರರಾದರೂ ಅಕ್ಷರ ದಾಸೋಹ ನೀಡುವಂತ ಇಂತಹ ಪವಿತ್ರ ಸ್ಥಳದಲ್ಲಿ ಕಿಂಚಿತ್ತೂ ಲೋಪವಾಗದೆ ಉತ್ತ. ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚನೆ ನೀಡಿದರಲ್ಲದೆ ಹಿಂದಿನ ಅವಧಿಯಲ್ಲಿ ಸಾಕಷ್ಟು ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು ಅವುಗಳಿಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.

ನೂರಾರು ಕೋಟಿ ವೆಚ್ಚದಲ್ಲಿ ಏತ ನೀರಾವರಿಗೆ ಚಾಲನೆ ನೀಡಲಾಗಿತ್ತುಯಾವುದೇ ಸರ್ಕಾರ ಇದ್ದರೂ ಅವುಗಳನ್ನು ಕಸದ ಬುಟ್ಟಿಗೆ ಹಾಕುತ್ತಾರೆ.ಅದಕ್ಕೆ ಮರುಜೀವನೀಡಲು ಹಿಂದಿನ ಶಾಸಕರ ಸಹಾಯ ಪಡೆದುಕೊಳ್ಳುವ ಮೂಲಕ ಹೊಳೆಬೀದಿಯ ಸೇತುವೆ ನಿರ್ಮಾಣಕ್ಕೆ ಮತ್ತೆ ಚಾಲನೆ ನೀಡಲಾಗುವುದು.ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯರಸ್ತೆ ಅಗಲೀಕರಣಕ್ಕೆ ಎರಡನೇ ಹಂತದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದರು.

ನಂತರ ಮಾಜಿ ಶಾಸಕ ಲಿಂಗೇಶ್ ಮಾತನಾಡಿ ಗುಣಮಟ್ಟದ ಕಾಮಗಾರಿಯನ್ನು ಮಾಡಲು ಈಗಿನ ಶಾಸಕರು ಮಾಡಲು ಹೊರಟಿರುವುದು ಸ್ವಾಗತಾರ್ಹ,ನಮ್ಮ ಅವಧಿಯಲ್ಲಿ ೧೮೦೦ ಕೋಟಿ ಅನುದಾನ ತರಲಾಗಿತ್ತು ಅದರಲ್ಲಿ ೬೦೦ ಕೋಟಿ ಅನುದಾನವನ್ನು ಬಂದಂತ ಸರ್ಕಾರಗಳು ಅದನ್ನು ತಡೆದು ನಮ್ಮ ತಾಲೂಕಿಗೆ ಸುಮಾರು ೧೫೦ ಕೋಟಿ ಅನುದಾನ ತಡೆ ಹಿಡಿದರು.

ಅದನ್ನು ನಮ್ಮ ಈಗಿನ ಶಾಸಕರು ಅದಕ್ಕೆ‌ಮರುಜೀವ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಇಲ್ಲಿ ನಾನು ನಾನೆನ್ನದೆ ತಾಲೂಕಿನ ಸಮಗ್ರ ಅಭಿವೃದ್ಧಿ ಗೆ ಸಹಕಾರ ನೀಡುತ್ತೇವೆ.ಶಾಸಕರ ಬಗ್ಗೆ ಕೆಲವರು ದೂರು ಹೇಳಬಹುದು ಅವರ ಮುಂದಿನ ಹೆಜ್ಜೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.ಶಾಸಕರಲ್ಲಿ ಒಂದುಮನವಿ ಏನೆಂದರೆ ಏತನೀರಾವರಿ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಅದಕ್ಕೆ ಮತ್ತೆ ಕಾಯಕಲ್ಪ ನೀಡಬೇಕು ಇದಕ್ಕೆ‌ನಾವು ನಿಮ್ಮ ಜೊತೆ ಇರುತ್ತೇವೆಂದರು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯರಾದ ಎಂ ಎ ನಾಗರಾಜ ಮಾತನಾಡಿ ಪರಮಪೂಜ್ಯ ಸ್ವಾಮೀಜಿಯವರು ಹಲವಾರು ಶಿಕ್ಷಣ ಸಂಸ್ಥೆಯನ್ನು ತೆರೆಯುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಅದರಂತೆ ಮುಂದಿನ ದಿನಗಳಲ್ಲಿ ಇಲ್ಲಿ ಒಂದು ವಸತಿ ನಿಲಯವನ್ನು ತೆರೆಯುವುದಾಗಿ ತಿಳಿಸಿರುವುದು ಸಂತೋಷದಾಯಕ ಅದರಂತೆ ಅತಿ ಕಡಿಮೆ ವೆಚ್ಚದಲ್ಲಿ ಉತ್ತಮ ವ್ಯಾಸಂಗವನ್ನು ನೀಡುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರೈಮರಿಯಿಂದ ಪ್ರಾರಂಭಿಸುವುದು ಒಂದು ಉತ್ತಮವಾದ ಬೆಳವಣಿಗೆಯಾಗಿದೆ ಅದರಂತೆ ಈಗಿನ ಶಾಸಕರು ಸಹ ನಮ್ಮ ಮಠದ ಅಭಿವೃದ್ಧಿಗೆ ಹಾಗೂ ಶೈಕ್ಷಣಿಕಕ್ಕೆ ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು

ಈ ಸಂದರ್ಭದಲ್ಲಿ ಬಂಟೆನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್,ಪ್ರಾಂಶುಪಾಲ ದಿವ್ಯಕುಮಾರ್,ಶ್ರೀ ಮಠದ ಚಂದ್ರಶೇಖರ್,ಇಂಜಿನಿಯರ್ ಲೊಕೇಶ್,ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜ್,ಮಮತಾ ನಾಗರಾಜು ಹಾಗೂ ಅದ್ಯಾಪಕರು ಸಿಬ್ಬಂದಿಗಳು ಹಾಜರಿದ್ದರು.

ಬಾಕ್ಸ್ ನ್ಯೂಸ್ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಒಬ್ಬರ ಮೇಲೆ ಒಬ್ಬರು ಕಿತ್ತಾಡುವ ದಿನಗಳಲ್ಲಿ ಇಲ್ಲಿಯ ಮಾಜಿ ಶಾಸಕರ ಹಾಲಿ ಶಾಸಕರ ಒಡನಾಟದಿಂದ ಅಭಿವೃದ್ಧಿ ಈ ತಾಲೂಕಿನ ಸಮಗ್ರ ಅಭಿವೃದ್ಧಿ ಯಾಗಲಿ ಎಂದು ಆರ್ಶಿರ್ವದಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *