
ಬೇಲೂರು : ಮಾರ್ಚ್. ೫ : ಈ ಬಾರಿಯ ರಥೋತ್ಸವನ್ನು ನಮ್ಮ ಮನೆ ಹಬ್ಬದ ರೀತಿಯಲ್ಲಿ ಆಚರಿಸಲು ಎಲ್ಲಾ ರೀತಿಯಲ್ಲಿ ತಯಾರಿ ಮಾಡಲಾಗುತ್ತಿದೆ ಎಂದು ಶಾಸಕ ಸುರೇಶ್ ತಿಳಿಸಿದರು
ವಿಶ್ವ ಪ್ರವಾಸಿ ತಾಣ ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಪ್ರತಿ ವರ್ಷದಂತೆ ಏಪ್ರಿಲ್ ೧೨ ರಿಂದ ೨೫ ರ ತನಕ ನಡೆಯುವ ಕೇಶವ ಬ್ರಹ್ಮ ರಥೋತ್ಸವ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಸರ್ವರು ಸಹಕಾರ ನೀಡುವ ಮೂಲಕ ಕೇಶವ ರಥವನ್ನು ಎಳೆದು ನಾಡಿಗೆ ಉತ್ತಮ ಮಳೆ- ಬೆಳೆಯಾಗಲಿ ಎಂದು ಪ್ರಾರ್ಥನೆ ನಡೆಸೋಣ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಕೋಟೆ ಚನ್ನಕೇಶವ ಸಭಾಂಗಣದಲ್ಲಿ ಬೇಲೂರು ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಈ ಭಾರಿ ನಡೆಯುವ ಚನ್ನಕೇಶವ ರಥೋತ್ಸವ ವಿಶೇಷವಾಗಿ ಕೂಡಿದೆ. ಕಾರಣ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಸಂದರ್ಭದಲ್ಲಿ ಅದ್ದೂರಿ ಮತ್ತು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಒತ್ತು ನೀಡಬೇಕಿದೆ. ಸಾರಿಗೆ, ನೀರಾವರಿ. ಲೋಕೋಪಯೋಗಿ, ಸಣ್ಣ ನೀರಾವರಿ, ಪುರಸಭೆ, ವಿದ್ಯುತ್ ಇಲಾಖೆ, ಪೋಲೀಸ್, ಅರಣ್ಯ ಸೇರಿದಂತೆ ಇನ್ನೂ ಮುಂತಾದ ಇಲಾಖೆ ಅಧಿಕಾರಿಗಳು ತೀವ್ರ ಕ್ರಮವಹಿಸಿ ಕೆಲಸವನ್ನು ಮಾಡಬೇಕಿದೆ.
ಸ್ವಚ್ಚತೆ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದ ಅವರು ಪೋಲಿಸ್ ಇಲಾಖೆ ಪಟ್ಟಣದಲ್ಲಿ ಯಾವುದೇ ವಾಹನ ದಟ್ಟಣೆಯಾಗಂತೆ ಕ್ರಮ ವಹಿಸಬೇಕಿದೆ. ಇಲ್ಲಿನ ಅಡ್ಡೆಗಾರರು ಮತ್ತು ಸಂಬಂಧಿಸಿದ ನಾಡಿನ ಪಟೇಲರು ಗಮನ ಹರಿಸಬೇಕಿದೆ. ಸಾರಿಗೆ ಅಧಿಕಾರಿಗಳು ದೂರ ದೂರದಿಂದ ಬರುವ ಭಕ್ತರನ್ನು ಸುವ್ಯವಸ್ಥಿತವಾಗಿ ಸಾರಿಗೆ ವ್ಯವಸ್ಥೆಗೆ ಗಮನ ನೀಡಬೇಕಿದೆ.
ಇದು ದೇಗಲದ ಕೆಲಸ, ಐತಿಹಾಸಿಕವಾಗಿ ನಡೆಯುವ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಮತ್ತು ಅಗತ್ಯರುವ ಕಡೆ ಸಿಸಿಟಿವಿ ಮತ್ತು ಶೌಚಾಲಯ ಮತ್ತು ಮಡಿ ಕಟ್ಟೆಯ ಬಳಿಯಲ್ಲಿ ಶೌಚಾಲಯ, ವಿಷ್ಣು ಕಲ್ಯಾಣಿ ಸ್ವಚ್ಚತೆ ನಡೆಸಬೇಕು ಎಂದರು.
ಮತ್ತೊಂದು ವಿಶೇಷ ಸಭೆಯನ್ನು ಕರೆದು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಸೂಕ್ತವಾಗಿ ನಿರ್ದೇಶನ ನೀಡಲಾಗುವುದು. ಹಾಗೂ ಈ ಬಾರಿ ವಿಶೇಷವಾಗಿ ಹೂವಿನ ಅಲಂಕಾರ ಮತ್ತು ದೀಪಾ ಅಲಂಕಾರ ದೇವರಿದ ಸುತ್ತಮುತ್ತಲು ಸಹ ಅಳವಡಿಸಲಾಗುವುದು ಎಂದರು
ಅಡ್ಡೆಗಾರ ಶ್ರೀನಿವಾಸ್ ಮಾತನಾಡಿ, ೧೫ ದಿನಗಳ ನಡೆಯುವ ಜಾತ್ರೆ ಉತ್ಸವದಲ್ಲಿ ಎಂಟು ಬೀದಿ ಚನ್ನಕೇಶವಸ್ವಾಮಿಯನ್ನು ಉತ್ಸವ ನಡೆಸುವ ಸಂದರ್ಭದಲ್ಲಿ ವೈಕುಂಠ ಬೀದಿಯಲ್ಲಿ ವಾಹನಗಳ ನಿಲುಗಡೆಯಿಂದ ಕೆಲವು ಅಡೆತಡೆ ಉಂಟಾಗುವ ನಿಟ್ಟಿನಲ್ಲಿ ಸಂಬಂಧಿಸಿದವರು ಕ್ರಮ ವಹಿಸಬೇಕಿದೆ ಎಂದ ಅವರು ಬೇಲೂರಿನಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಹೊರ ಜಿಲ್ಲೆ ರಾಜ್ಯದಿಂದ ಭಕ್ತರು ಬರುವ ಕಾರಣದಿಂದ ಅವರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕಿದೆ. ವಿಶೇಷವಾಗಿ ಬ್ರಹ್ಮ ರಥೋತ್ಸವ ಮತ್ತು ನಾಡ ರಥೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಂತೆ ಮುನ್ನೆಚ್ಚರಿಕೆಯನ್ನು ಪೋಲಿಸರ ನಿಗಾ ವಹಿಸಬೇಕು ಎಂದರು.
ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಎಂ.ಮಮತ, ಚನ್ನಕೇಶವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತ ಕಾರ್ಯಾನಿರ್ವಾಹಕ ಅಧಿಕಾರಿ ಸತೀಶ್, ವೃತ್ತ ನೀರಿಕ್ಷಕರಾದ ಜಯರಾಂ ಮತ್ತು ಸುಬ್ರಮಣ್ಯ, ದೇಗುಲದ ಇಒ ಯೋಗೀಶ್, ಪುರಸಭಾ ಪ್ರಬಾರಿ ಅಧ್ಯಕ್ಷೆ ದಿವ್ಯ ಗಿರೀಶ್, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿಧಿ, ಪುರಾತತ್ತ್ವ ಇಲಾಕೆ ಅಧಿಕಾರಿ ಗೌತಮ್, ದೇಗುಲದ ಆಗಮಿಕ ಅರ್ಚಕರಾದ ಶ್ರೀನಿವಾಸಸ್ವಾಮಿಭಟ್ಟರ್ ಮತ್ತು ನರಸಿಂಹಭಟ್ಟರ್, ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
