ಸಕಲೇಶಪುರ : ಪುರಸಭೆ ವ್ಯಾಪ್ತಿಯಲ್ಲಿ ನಿವೇಶನಗಳ ಒತ್ತುವರಿ ತೆರವಿಗಾಗಿ ಒತ್ತಾಯಿಸಿ ಕರವೇ ಕಾರ್ಯಕರ್ತರು ಲಕ್ಷಾಂತರ ವೆಚ್ಚಮಾಡಿ ಶೆಡ್ ನಿರ್ಮಿಸಿ ಅಣಕು ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕರನ್ನು ಮೂರ್ಖರನ್ನಾಗಿಸುವಯತ್ನ ನಡೆಸಿದ್ದಾರೆ.

ಹೌದು ಅಣುಕು ಪ್ರತಿಭಟನೆಗೆ ಲಕ್ಷಾಂತರ ವೆಚ್ಚದ ಶೆಡ್ ನಿರ್ಮಿಸಿರುವ ಕರವೇ ಅಧ್ಯಕ್ಷ ರಮೇಶ್ ಪೂಜಾರಿ ಶೆಡ್ ನಿರ್ಮಾಣಗೊಂಡ ಎರಡು ದಿನಗಳ ಬಳಿಕ ಪ್ರತಿಭಟನೆ ನಡೆಸಿದ್ದಾರೆ.

ಘಟನೆ ಹಿನ್ನಲೆ: ಪಟ್ಟಣದ ಮುಖ್ಯರಸ್ತೆಯ ಶಾಪ್‌ಸಿದ್ದೆಗೌಡ ಶಾಲೆಯ ಮುಂಭಾಗ ಗ್ರಂಥಾಲಯಕ್ಕೆ ಸೇರಿದ ೨ ಗುಂಟೆಜಮೀನಿದ್ದು, ಇಲ್ಲಿದ್ದ ಗ್ರಂಥಾಲಯ ತೆರವುಗೊಳಿಸಿ ಹೊಸಕಟ್ಟಡ ನಿರ್ಮಾಣಕ್ಕೆ ಮುಂದಾದ ವೇಳೆ ರಾಷ್ಟೀಯ ಹೆದ್ದಾರಿಯ ವ್ಯಾಪ್ತಿಗೆ ನಿವೇಶನ ಬರಲಿದೆ ಎಂಬ ಕಾರಣ ನೀಡಿ ಕಟ್ಟಡ ನಿರ್ಮಾಣಕ್ಕೆಅನುಮತಿ ನೀಡಿದ ಕಾರಣ ಬಾಡಿಗೆ ಕಟ್ಟಡದಲ್ಲಿ ಇಂದಿಗೂ ಗ್ರಂಥಾಲಯವಿದೆ.

ಆದರೆ, ಈ ವಿಚಾರ ಅರಿಯದ ಕರವೇ ಅಧ್ಯಕ್ಷ ಪುರಸಭೆಗೆ ಸೇರಿದ ನಿವೇಶನ ಎಂದು ಶನಿವಾರ ರಾತ್ರೋರಾತ್ರಿ ಕಬ್ಬಿಣ ಹಾಗೂ ಶೀಟ್ ಬಳಸಿ ಶೆಡ್ ನಿರ್ಮಿಸಿದ್ದಾರೆ.

ಈ ವಿಚಾರ ಸಾರ್ವಜನಿಕವಾಗಿ ಹರಿದಾಡಿ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಕೆಯಾಗಿದ್ದು.ಸಾರ್ವಜನಿಕವಾಗಿ ವ್ಯಾಪಕ ಆಕ್ಷೇಪಗಳು ಕೇಳಿ ಬಂದ ನಂತರ ಗ್ರಂಥಪಾಲಕ ಚಂದ್ರಕುಮಾರ್ ಮೌಖಿಕವಾಗಿ ಶೆಡ್ ತೆರವುಗೊಳಿಸುವಂತೆ ತಿಳಿಸಿದ್ದರು.

ಇದಾದ ನಂತರ ಶೆಡ್ ದಕ್ಕಿಸಿಕೊಳ್ಳುವುದು ಕಷ್ಟ ಎಂಬ ಅರಿವು ಮೂಡಿದ ನಂತರ ಸಾರ್ವಜನಿಕರನ್ನು ಮೂರ್ಖರನ್ನಾಗಿಸುವ ಉದ್ದೇಶದಿಂದ ಪುರಸಭೆವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ನಿವೇಶನಗಳ ತೆರವಿಗಾಗಿ ಅಣಕು ಪ್ರತಿಭಟನೆ ನಡೆಸಲು ಶೆಡ್ ನಿರ್ಮಿಸಲಾಗಿದೆ ಎಂದು ಹೇಳಿಕೆ ನೀಡಿದ್ದು ಇದನ್ನು ನಂಬಿದ್ದ ಕೆಲವೊಂದು ಡಿಜಿಟಲ್ ಮೀಡಿಯಗಳೂ ಶುದ್ದಿಯನ್ನು ಪ್ರಕಟಿಸಿವೆ.

ಸದ್ಯ ಕರವೇ ಅಧ್ಯಕ್ಷರನ್ನು ಸಾರ್ವಜನಿಕರು ಪ್ರಶ್ನಿಸುತ್ತಿರುವುದು ಹೀಗೆ ಅಣುಕು ಪ್ರತಿಭಟನೆಗಾದರೆ ರಾತ್ರೋರಾತ್ರಿ ಶೆಡ್ಡ ನಿರ್ಮಿಸಿದ್ದು ಏಕೆ, ಅಷ್ಟೊಂದು ದುಭಾರಿ ವೆಚ್ಚ ಮಾಡಿರುವುದರ ಅರ್ಥ ಏನು, ಶೆಡ್ ನಿರ್ಮಾಣಗೊಂಡ ಎರಡು ದಿನಗಳ ನಂತರ ಪ್ರತಿಭಟನೆ ನಡೆಸಿದ್ದು ಏಕೆ. ? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಒಟ್ಟಾರೆ ಸಂಘಟನೆಯ ಹೆಸರಿನಲ್ಲಿ ದೌರ್ಜನ್ಯದ ಮೂಲಕ ಆಯಾಕಟ್ಟಿನ ಜಾಗ ಕಬಳಿಸುವ ಹುನ್ನಾರ ನಡೆಸುತ್ತಿರುವವರ ಬಗ್ಗೆ ಸಾರ್ವಜನಿಕರು ಎಚ್ಚರವಾಗಿರುವುದು ಒಳಿತು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *