ಹಾಸನ: ಅರಸೀಕಟ್ಟೆಯಮ್ಮನವರ ದೇವಸ್ಥಾನದ ಸುತ್ತ ಮುತ್ತಾ ಕಾನೂನು ಬಾಹಿರವಾಗಿ ಹಂದಿ, ಕುರಿ, ಕೋಳಿ ಇತರೆ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದು, ಇದರಿಂದ ಸುಚಿತ್ವಕ್ಕೆ ದಕ್ಕೆ ಆಗುತ್ತಿದೆ.

ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಮುಂದೆ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಾಧ್ಯಮದೊಂದಿಗೆ ಎ.ಟಿ. ರಾಮಸ್ವಾಮಿ ಮಾತನಾಡಿ, ಅರಕಲಗೂಡು ತಾಲೂಕು ಶ್ರೀ ಅರಸೀಕಟ್ಟೆ ಅಮ್ಮನವರ ದೇವಾಲಯದ ಸುತ್ತ ಮುತ್ತಾ ಕಾನೂನು ಬಾಹಿರವಾಗಿ ೫೦ಕ್ಕೂ ಹೆಚ್ಚು ಹಂದಿ, ಕೋಳಿ, ಕುರಿ, ಊಟದ ಹಾಲ್ ಗಳು ಮತ್ತು ಇತರೆ ವಾಣಿಜ್ಯ ಚಟುವಟಿಕೆಯನ್ನು ನಡೆಸಲಾಗುತ್ತಿದೆ. ವಾಣಿಜ್ಯ ವಹಿವಾಟುಗಳಿಗೆ ಯಾವುದೇ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದಿರುವುದಿಲ್ಲ. ಪಂಚಾಯಿತಿಯಿಂದ ನೋಟಿಸ್ ಕೊಟ್ಟರು ಉತ್ತರ ಕೊಡುತ್ತಿಲ್ಲ ಎಂದು ಪಂಚಾಯಿತಿಯವರೆ ದೂರು ಕೊಟ್ಟಿದ್ದಾರೆ.

ಈ ಸ್ಥಳದಲ್ಲಿ ಬಹಿರಂಗವಾಗಿ ಹರಾಜು ಹಾಕಿದರೇ ವರ್ಷಕ್ಕೆ ಕನಿಷ್ಠ ಒಂದು ಕೋಟಿ ರೂಗಳ ಆಧಾಯ ಬರುತ್ತದೆ. ಈಗಾಗಲೇ ಸಮಿತಿವತಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ‍್ಯನಿರ್ವಹಣಾಧಿಕಾರಿಗಳಿಗೆ ಬರೆದು ಕೊಡಲಾಗಿದೆ. ಸುಮ್ಮನಿರುವುದರಿಂದ ಸ್ಥಳೀಯ ಸಂಸ್ಥೆಗಳ ಆಧಾಯದಲ್ಲಿ ತುಂಬ ನಷ್ಟವಾಗಿರುತ್ತದೆ.

ಕಡಿದ ಪ್ರಾಣಿಗಳ ತ್ಯಾಜ್ಯ ಹಾಗೂ ಊಟದ ತ್ಯಾಜ್ಯ ಜೊತೆಗೆ ದೇವಸ್ಥಾನದ ಸುತ್ತ ಸುಚಿತ್ವದ ಸಮಸ್ಯೆ ಇದ್ದು, ಈ ಬಗ್ಗೆ ಸಂಬಂಧಪಟ್ಟವರು ಯಾರು ಗಮನವಹಿಸದೇ ರೋಗ-ರುಜೀನಗಳು ಹರಡಲು ಕಾರಣವಾಗಿದೆ ಎಂದು ದೂರಿದರು.

ವಾಣಿಜ್ಯ ವಹಿವಾಟುಗಳು ಕಾನೂನು ವಿರುದ್ಧವಾಗಿನಡೆಸಲು ಮತ್ತು ಸ್ವಚ್ಛತೆಯನ್ನು ಕಾಪಾಡಲು ಅವಶ್ಯಕ ಕ್ರಮಕೈಗೊಳ್ಳಬೇಕಾಗಿತ್ತು. ಆದರೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವುದನ್ನು ನೋಡಿಕೊಂಡು ಸಂಬಂಧಿಸಿದ ಅಧಿಕಾರಿಗಳು, ನೌಕರ ವರ್ಗದವರು ಮೌನವಾಗಿರುವುದನ್ನು ನೋಡಿದರೆ ಶಾಮೀಲಾಗಿರಬಹುದು ಎಂದು ಆರೋಪಿಸಿದರು.

ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *