
ಹಾಸನ: ನಗರದ ರಿಂಗ್ ರಸ್ತೆ ಬಳಿ ಇರುವ ಕ್ಷೇತ್ರದ ಶಾಸಕರ ನಿವಾಸದ ಮುಂದೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರವತಿಯಿಂದ ೨೦೨೨-೨೩ನೇ ಸಾಲಿನ ಹೊಲಿಗೆ ಯಂತ್ರ ಸಹಾಯಧನ ಯೋಜನೆಯಡಿ ಆಯ್ಕೆಯಾದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಹೆಚ್.ಪಿ. ಸ್ವರೂಪ್ ಅವರು ಒಟ್ಟು ೩೬ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಿದರು.
ನಂತರ ಉದ್ದೇಶಿಸಿ ಮಾತನಾಡಿದ ಅವರು, ಬಡ ಮಹಿಳೆಯರು ಸ್ವಂತ ದುಡಿದು ಜೀವನ ನಡೆಸಬೇಕು ಎಂದು ದೇವರಾಜ್ ಅರಸು ಅವರ ನಿಗಮದಿಂದ ವಿಶೇಷವಾಗಿ ಹಿಂದೂಳಿದ ವರ್ಗದವರಿಗೆ ಆರ್ಥಿಕವಾಗಿ ಸಹಾಯವಾಗಬೇಕು ಎನ್ನುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅದರಲ್ಲಿ ಮುಖ್ಯವಾಗಿ ಹೊಲಿಗೆ ಯಂತ್ರವನ್ನು ಮಹಿಳೆಯರಿಗೆ ಉಚಿತವಾಗಿ ಕೊಡಲಾಗಿದೆ ಎಂದರು.
ಎಲ್ಲಾ ಫಲಾನುಭವಿಗಳು ಕೂಡ ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೊಲಿಗೆ ಯಂತ್ರದ ತರಬೇತಿ ಪಡೆದುಕೊಂಡು ಟ್ರೈನಿಂಗ್ ಸರ್ಟಿಫಿಕೆಟ್ ಪಡೆದುಕೊಂಡಿದ್ದಾರೆ ಅಂತವರನ್ನು ಗುರುತಿಸಿ ಒಟ್ಟು ೩೬ ಜನ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲಾಗಿದೆ ಎಂದು ಹೇಳಿದರು.




