ಕಾನೂನಿನಲ್ಲಿರುವ ವಿವಿಧ ಹಕ್ಕುಗಳ ಸದುಪಯೋಗ ಪಡೆದುಕೊಳ್ಳುವಂತೆ ವಿಶೇಷ ಚೇತನರಿಗೆ ಬಿ.ಕೆ. ರವಿಕಾಂತ್ ಸಲಹೆ

ಹಾಸನ: ವಿಶೇಷ ಚೇತನರಿಗೆ ಕಾನೂನಿನಲ್ಲಿ ವಿವಿಧ ಹಕ್ಕುಗಳಿದ್ದು, ಸದುಪಯೋಗ ಪಡೆದುಕೊಂಡು ಎಲ್ಲಾರಂತೆ ಉತ್ತಮ ಜೀವನ ಸಾಗಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ರವಿಕಾಂತ್ ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಕೃಷ್ಣ ಅಂಧ ಮಕ್ಕಳ ಶಾಲೆ ಆವರಣದಲ್ಲಿ ಕರ್ನಾಟಕ ಅಂಧರ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಚೇತನರ ಕಾನೂನು ಹಕ್ಕುಗಳು ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,

ಅಂಗವಿಕಲರು ತಮ್ಮ ಸಾಮಾರ್ಥ್ಯವನ್ನು ಬಳಸಿಕೊಳ್ಳಲು ಅನುಕೂಲಕರ ಪರಿಸರವನ್ನು ಕಲ್ಪಿಸಿಕೊಡಬೇಕು. ಸರಕಾರಕ್ಕೆ ಕಾನೂನು ಮನದಟ್ಟು ಮಾಡುತ್ತದೆ. ಅಂಗವಿಕಲತೆ ಇದೆ ಎಂದು ತಾರತಮ್ಯಕ್ಕೆ ಒಳಪಡಿಸಬಾರದು ಎಂದು ಕಾನೂನು ಸ್ಪಷ್ಟವಾಗಿ ಹೇಳಿದೆ. ಅವರ ವಯಕ್ತಿಕ ಸ್ವಾತಂತ್ರ್ಯವನ್ನು ಎಂದು ಕಸಿದುಕೊಳ್ಳುವಂತಿಲ್ಲ.

ಯಾರಾದರೂ ಕಸಿದುಕೊಳ್ಳುವ ಕೃತ್ಯಕ್ಕೆ ಮುಂದಾದರೇ ಅದರ ಜವಬ್ಧಾರಿ ಸರಕಾರಕ್ಕೆ ಸೇರಿದೆ. ಅಂಗವಿಕಲತೆ ಇರುವ ಮಹಿಳೆಯರು ಮತ್ತು ಮಕ್ಕಳು ಇದ್ದರೇ ಇತರರಂತೆ ಸಮಾನ ಹಕ್ಕು ಇದ್ದರೂ ಪಡೆಯಲು ಸಾಧ್ಯವಾಗದಿದ್ದರೇ ಸರಕಾರಗಳು ಕ್ರಮವಹಿಸಬೇಕು ಎಂದರು.

ವಿಕಲಚೇತನರನ್ನು ಪ್ರತ್ಯೇಕವಾಗಿ ಹೊರಗೆ ಇಡುವ ಕೆಲಸ ಮಾಡಬಾರದು ಹಾಗೂ ಅದಕ್ಕೆ ಅವಕಾಶವಿಲ್ಲ. ಶುಲ್ಕವಿಲ್ಲದೇ ಕಾನೂನು ಪಡೆಯುವ ಹಕ್ಕುಗಳು ಇದ್ದು, ಉಚಿತವಾಗಿ ನಡೆಸಿಕೊಡಬೇಕು ಎಂದು ಕಿವಿಮಾತು ಹೇಳಿದರು.

ಅಂಗವಿಕಲತೆ ಇರುವ ೬ ರಿಂದ ೮ನೇ ತರಗತಿ ಶಾಲೆಗೆ ಹೋಗಲು ಹತ್ತಿರದ ಶಾಲೆಗೆ ಅವಕಾಶ ಕೊಡಲಾಗಿದೆ. ಉನ್ನತ ಶಿಕ್ಷಣಕ್ಕಾಗಿ ಕನಿಷ್ಠ ಐದು ಸ್ಥಾನವನ್ನು ನೀಡಬೇಕು. ಶೇಕಡ ನಾಲ್ಕು ರಷ್ಟು ಹುದ್ದೆ ಮೀಸಲಿಡಬೇಕು. ಅವರ ಮೇಲಿನ ದೌರ್ಜನ್ಯ ಪ್ರಕರಣ ನೋಡಲು ವಿಶೇಷ ನ್ಯಾಯಾಲಯ ಮಾಡಲಾಗಿದೆ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ೮೫ ಸಾವಿರ ಪೆಂಡಿಂಗ್ ಇದ್ದು, ಅಂಗವಿಕಲರ ಕೇಸು ಶೀಘ್ರ ವಿಲೇವಾರಿ ಆಗಬೇಕೆಂದು ಗಮನ ನೀಡಿದೆ. ಸರಕಾರವು ಅಂಗವಿಕಲರಿಗೆ ಅನೇಕ ಯೋಜನೆ ಜಾರಿಗೆ ತಂದಿದೆ. ಅವರ ಸರ್ವೋತಮುಖ ಬೆಳವಣಿಗೆಗೆ ಮುಂದಾಗಿದೆ. ವಿಶೇಷ ಚೇತನರು ಐಡಿ ಕಾರ್ಡ್ ತೆಗೆದುಕೊಂಡರೆ ಸರಕಾರದ ಹಲವಾರು ಯೋಜನೆಯನ್ನು ಪಡೆದುಕೊಳ್ಳಬಹುದು.

ಕಾನೂನು ಮತ್ತು ಸರಕಾರದ ಯೋಜನೆಯನ್ನು ಪಡೆದುಕೊಳ್ಳಬಹುದು. ಸಮಾಜದಲ್ಲಿ ಇತರರಂತೆ ಬದುಕು ನಡೆಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಸಮಾಜದಲ್ಲಿ ಉತ್ತಮ ಬೆಳವಣಿಗೆ ಆಗಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯದ ವಕೀಲರಾದ ಸದಾನಂದ ಶಾಸ್ತ್ರಿ ಮಾತನಾಡಿ, ಕಾನೂನಿನಲ್ಲಿ ಎಲ್ಲಾರೂ ಸಮಾನರು. ಪ್ರತಿಯೊಬ್ಬರಿಗೂ ನ್ಯಾಯ ದೊರಕಬೇಕು ಎಂದು ಹೇಳಿದರು.

ಇದೆ ವೇಳೆ ವಕೀಲರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಹಿಮ್ಸ್ ನಿರ್ದೇಶಕ ಡಾ. ಸಂತೋಷ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಹೆಚ್.ಬಿ. ಮದನ್ ಗೌಡ, ಹಿರಿಯ ಪತ್ರಕರ್ತರಾದ ವೆಂಕಟೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಚಂದ್ರಕಾಂತ್ ಪಡೆಸೂರು, ಕರ್ನಾಟಕ ಅಂಧರ ಒಕ್ಕೂಟದ ಅಧ್ಯಕ್ಷ ಬಿ.ಕೆ. ಮಂಜುನಾಥ್, ಅಂಧ ಮಕ್ಕಳ ಸಂಸ್ಥಾಪಕ ಸದಸ್ಯ ತಮ್ಮಯ್ಯ, ವಕೀಲರಾದ ಪ್ರಸನ್ನ ಇತರರು ಉಪಸ್ಥಿತರಿದ್ದರು. ವನಜಾಕ್ಷಿ ನಿರೂಪಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *