ಚನ್ನರಾಯಪಟ್ಟಣ: ರಾಯರ ರಂಗಮಂದಿರಕ್ಕೆ ಭೇಟಿ ನೀಡಿದ ಶ್ರೇಯಸ್ ಪಟೇಲ್

ಹಾಸನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ಹೊಳೆನರಸೀಪುರದ ಶ್ರೇಯಸ್ ಪಟೇಲ್ ಚನ್ನರಾಯಪಟ್ಟಣದ ರಂಗಮಂದಿರಕ್ಕೇ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದರು,

ಹಾಸನ ಜಿಲ್ಲೆಯ ಮಾಜಿ ಮಂತ್ರಿಗಳಾದ ಜಿ ಪುಟ್ಟಸ್ವಾಮಿಗೌಡ ಕುಟುಂಬದವರ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿ ಗೆಲುವಿಗೆ ಪ್ರಾರ್ಥಿಸಿದ ಲೋಕಸಭಾ ಚುನಾವಣಾ ಅಭ್ಯರ್ಥಿ ಶ್ರೇಯಸ್ ಪಟೇಲ್,ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣ ರಾಯರ ರಂಗ ಮಂದಿರದ ವತಿಯಿಂದ ಮಂತ್ರಾಲಯದ ರಾಯರ ಪ್ರಸಾದವನ್ನು ನೀಡುವುದರ ಮೂಲಕ ಮಂತ್ರಾಕ್ಷತ ನೀಡಿ ಆಶೀರ್ವದಿಸಲಾಯಿತ್ತು.

ಇದೇ ಸಂದರ್ಭದಲ್ಲಿ ರಾಯರ ರಂಗಮಂದಿರದ ಮುಖ್ಯಸ್ಥರಾದ ಪ್ರಕಾಶ್, ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್, ಮುಖಂಡರುಗಳಾದ ಜಗದೀಶ್, ಟೈಲರ್ ರವಿ, ಮಹಾದೇವ್ ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *