
ಬೇಲೂರು : ಪಟ್ಟಣದ ನೆಹರೂನಗರದಿಂದ ಜೆಪಿನಗರದವರೆಗೂ ಪಥಸಂಚಲನ ನಡೆಸಿದ ಪೊಲೀಸರು ಚುನಾವಣೆಯಲ್ಲಿ ಶಾಂತಿ ಕಾಪಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.
ಪ್ರಮುಖ ವೃತ್ತಗಳಲ್ಲಿ ಲಾಠಿ ಪ್ರದರ್ಶನ ನೀಡಿ, ಶಾಂತಿ ಕದಡುವರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.
ನಂತರ ಮಾತನಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯ ಚುನಾವಣೆ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಎಲ್ಲ ಸಿಬ್ಬಂದಿಗಳು ಕಾರ್ಯೋನ್ಮುಖವಾಗಬೇಕು.
ಜತೆಗೆ ಜನರ ಜತೆಗೆ ನಾವಿದ್ದು, ನಿರ್ಭಿತಿಯಿಂದ ಮತ ಚಲಾವಣೆ ಮಾಡಬೇಕು ಎಂಬ ಸಂದೇಶ ಸಾರುವುದು ಪಥ ಸಂಚಲನದ ಉದ್ದೇಶ,ಒಟ್ಟು ೬೦ ಜನ ಸಿಬ್ಬಂದಿಗಳು ಪಥ ಸಂಚಲನ ನಡೆಸಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಿಬ್ಬಂದಿಗಳು ಬರಲಿದ್ದಾರೆ ಎಂದು ತಿಳಿಸಿದರು.
